Bangladesh:ಆಕ್ಸಿಜನ್ ಪ್ಲಾಂಟ್ ಸ್ಫೋಟದ ವೇಳೆ ಘಟಕದಲ್ಲಿ ಇದ್ದವರು ಸಾವಿನಪ್ಪಿದ್ದಲ್ಲದೇ ತನಗೂ ಆಕ್ಸಿಜನ್ ಪ್ಲಾಂಟ್ ಗೂ ಏನು ಸಂಬಂಧವಿಲ್ಲದಂತೆ ದೂರದಲೆಲ್ಲೋ ಇದ್ದ ಅಮಾಯಕನನ್ನು ವಶ ಪಡೆದುಕೊಂಡಿದೆ ಅದೇನೆಂದು ನೀವೇ ನೋಡಿ..
ಬಾಂಗ್ಲಾದೇಶದ ಚಿತ್ತಗಾಂಗ್ನ ಸೀತಾಕುಂಡ ಉಪಜಿಲಾ ಪ್ರದೇಶದ ಕದಮ್ ರಸುಲ್ (ಕೇಶಬ್ಪುರ) ಪ್ರದೇಶದಲ್ಲಿ ಶನಿವಾರ ಮಧ್ಯಾಹ್ನ ಆಮ್ಲಜನಕ ಆಕ್ಸಿಜನ್ ಪ್ಲಾಂಟ್ ಸ್ಫೋಟಸಂಭವಿಸಿದ ಸ್ಫೋಟದಲ್ಲಿ ಆರು ಜನ ಸಾವನ್ನಪ್ಪಿದ್ದು, 30 ಮಂದಿ ಗಾಯಗೊಂಡಿದ್ದಾರೆ. ಸ್ಫೋಟದಿಂದ ಎರಡು ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಮೀಪದ ಪ್ರದೇಶದಲ್ಲಿನ ಕಟ್ಟಡಗಳು ನಡುಗಿದವು. ಬೃಹತ್ ಸ್ಫೋಟದ ನಂತರ ಚಿತ್ತಗಾಂಗ್ ಪ್ರದೇಶದಲ್ಲಿನ ಆಮ್ಲಜನಕ ಸ್ಥಾವರದಿಂದ ಹಲವಾರು ವಸ್ತುಗಳು ಹಾರುತ್ತಿರುವುದು ಕಂಡುಬಂದಿದೆ.
🇧🇩 : 6 dead, several injured after an explosion and fire at an oxygen plant in Chittagong, #Bangladesh pic.twitter.com/aZF1yLAZ7Z
— Zaid Ahmd (@realzaidzayn) March 4, 2023
ಇದನ್ನೂ ಓದಿ: Private video : ಜೋಡಿಯ ಖಾಸಗಿ ವಿಡಿಯೋ ಲೀಕ್, ಹೋಟೆಲ್ ನಲ್ಲಿ ಹೀಗೊಂದು ಘಟನೆ.. ಭಾರೀ ಗಲಾಟೆ!
ಸ್ಫೋಟ ಸಂಭವಿಸಿದಾಗ ಸ್ಥಾವರದ ಒಳಗಿದ್ದ 5 ಜನರು, 65 ವರ್ಷದ ಶಂಶುಲ್ ಆಲಂ ಅವರು ತಮ್ಮ ಅಂಗಡಿಯಲ್ಲಿ ಕದಮ್ ರಸುಲ್ ಬಜಾರ್ - ಆಮ್ಲಜನಕ ಸ್ಥಾವರದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಕುಳಿತಿದ್ದರು -ಸ್ಫೋಟದ ರಭಸವು ವೃದ್ಧನ ಅಂಗಡಿಯ ಜೊತೆಗೆ ವೃದ್ಧನ್ನು ಬಲಿ ಪಡೆದುಕೊಂಡಿದೆ. ಆಲಂ ಅವರ ಸಹೋದರ ಮೌಲಾನಾ ಒಬೈದುಲ್ ಮೊಸ್ತಫಾ ಅವರ ಪ್ರಕಾರ, ಸ್ಫೋಟದ ಬಳಿಕ ಸುಮಾರು 250-300 ಕೆಜಿ ತೂಕದ ಸಾವರ ವಸ್ತುಗಳು ಆತನ ಮೇಲೆ ಬಿದ್ದಿದೆ ಎನ್ನಲಾಗಿದೆ.
ಇದನ್ನೂ ಓದಿ: ನೀವು ಈ ಹಳ್ಳಿಗೆ ಹೋದ್ರೆ ʼಬೆತ್ತಲಾಗಿ ತಿರುಗಾಡ್ಬೇಕುʼ..! ಇಲ್ಲವೇ ಪ್ರವೇಶಕ್ಕೆ ʼಅನುಮತಿ ಇಲ್ಲ..ʼ
ಸ್ಥಳೀಯ ಮಾಹಿತಿ ಪ್ರಕಾರ , ಸ್ಫೋಟವು ಸಂಜೆ 4:30 ರ ಸುಮಾರಿಗೆ ಸಂಭವಿಸಿದೆ. ಮಾಹಿತಿ ಪಡೆದ ಸೀತಾಕುಂದ ಮತ್ತು ಕುಮಿರ ಅಗ್ನಿಶಾಮಕ ದಳದಿಂದ ಒಂಬತ್ತು ಅಗ್ನಿಶಾಮಕ ದಳಗಳು ಒಟ್ಟಾಗಿ ಸ್ಥಳಕ್ಕೆ ಧಾವಿಸಿದವು. ಬೆಂಕಿಯನ್ನು ಹತೋಟಿಗೆ ತರಲು ಸಿಬ್ಬಂದಿ ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಂಡರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.