ವಿಜ್ಞಾನಿಗಳ ಕುತೂಹಲಕ್ಕೆ ಕಾರಣವಾಗಿದ್ದ ಈ ನಕ್ಷತ್ರ ಆಕಸ್ಮಿಕವಾಗಿ ಕಣ್ಮರೆಯಾಗಿದ್ದಾದರೂ ಏಕೆ?

ಖಗೋಳಶಾಸ್ತ್ರಜ್ಞರು 10 ವರ್ಷಗಳಿಗಿಂತ ಹೆಚ್ಚು ಕಾಲ ಮೇಲ್ವಿಚಾರಣೆ ನಡೆಸುತ್ತಿದ್ದ ದೈತ್ಯ ನಕ್ಷತ್ರವು ಇದ್ದಕ್ಕಿದ್ದಂತೆ ಕಣ್ಮರೆಯಾಗಿದೆ. ಈ ನಕ್ಷತ್ರವು ಕುಬ್ಜ ನಕ್ಷತ್ರಪುಂಜದಲ್ಲಿ 75 ದಶಲಕ್ಷ ಬೆಳಕಿನ ವರ್ಷಗಳ ದೂರದಲ್ಲಿದೆ ಮತ್ತು ಇದು ಬ್ರಹ್ಮಾಂಡದ ಅತಿದೊಡ್ಡ ನಕ್ಷತ್ರಗಳಲ್ಲಿ ಒಂದಾಗಿದೆ.  

Last Updated : Aug 19, 2020, 11:13 PM IST
ವಿಜ್ಞಾನಿಗಳ ಕುತೂಹಲಕ್ಕೆ ಕಾರಣವಾಗಿದ್ದ ಈ ನಕ್ಷತ್ರ ಆಕಸ್ಮಿಕವಾಗಿ ಕಣ್ಮರೆಯಾಗಿದ್ದಾದರೂ ಏಕೆ? title=

ಡಬ್ಲಿನ್: ಖಗೋಳಶಾಸ್ತ್ರಜ್ಞರು 10ಕ್ಕೂ ಹೆಚ್ಚು ವರ್ಷಗಳಿಂದ ಮೇಲ್ವಿಚಾರಣೆ ನಡೆಸುತ್ತಿದ್ದ ದೈತ್ಯ ನಕ್ಷತ್ರ ಇದ್ದಕ್ಕಿದ್ದಂತೆ ಕಣ್ಮರೆಯಾಗಿದೆ ಎಂದು ಹೇಳಲಾಗುತ್ತಿದೆ. ಈ ನಕ್ಷತ್ರವು ಕುಬ್ಜ ನಕ್ಷತ್ರಪುಂಜದಲ್ಲಿ 75 ದಶಲಕ್ಷ ಬೆಳಕಿನ ವರ್ಷಗಳ ದೂರದಲ್ಲಿದೆ ಮತ್ತು ಇದು ಬ್ರಹ್ಮಾಂಡದ ಅತಿದೊಡ್ಡ ನಕ್ಷತ್ರಗಳಲ್ಲಿ ಒಂದಾಗಿದೆ ಎನ್ನಲಾಗಿದೆ. ಸೂರ್ಯನಿಗಿಂತ 2.5 ಪಟ್ಟು ಪ್ರಕಾಶಮಾನವಾಗಿರುವ ಈ ನಕ್ಷತ್ರವು ಯಾವುದೇ ಕುರುಹು ಬಿಡದೆ ಅಚಾನಕ್ ಕಣ್ಮರೆಯಾಗಿರುವುದರಿಂದ ಖಗೋಳಶಾಸ್ತ್ರಜ್ಞರು ಸಹ ಇದರ ಬಗ್ಗೆ ಹೆಚ್ಚು ಹೇಳುವ ಸ್ಥಿತಿಯಲ್ಲಿಲ್ಲ. ಇದು ಹೇಗೆ ಸಂಭವಿಸಿತು ಎಂಬುದು ಅವರಿಗೂ ಅರ್ಥವಾಗುತ್ತಿಲ್ಲವಂತೆ... ಆದಾಗ್ಯೂ ಇದಕ್ಕೆ ಎರಡು ಸಂಭವನೀಯ ಕಾರಣಗಳಿವೆ. ಮೊದಲಿಗೆ ಅದರಲ್ಲಿ ಒಂದು ದೊಡ್ಡ ಸ್ಫೋಟ ಸಂಭವಿಸಿದೆ ಅಥವಾ ಎರಡನೆಯದು ಅದು ಬ್ಲ್ಯಾಕ್‌ಹೋಲ್‌ನಲ್ಲಿ ಕುಸಿದಿದೆ.

ಸಾಮಾನ್ಯವಾಗಿ ನಕ್ಷತ್ರಗಳು ಕಣ್ಮರೆಯಾದಾಗ ದೈತ್ಯ ಸೂಪರ್ನೋವಾವನ್ನು ಮೊದಲು ಕಾಣಬಹುದು. ಖಗೋಳಶಾಸ್ತ್ರಜ್ಞರು 2001 ರಿಂದ ಈ ನಕ್ಷತ್ರವನ್ನು ಮೇಲ್ವಿಚಾರಣೆ ಮಾಡುತ್ತಿದ್ದರು. ಕಿನ್ಮನ್ ಡ್ವಾರ್ಫ್ ಗ್ಯಾಲಕ್ಸಿಯಲ್ಲಿನ ನಕ್ಷತ್ರವು ಅಭಿವೃದ್ಧಿಯ ಕೊನೆಯ ಹಂತದಲ್ಲಿದೆ ಎಂದು ಹೇಳಲಾಗುತ್ತಿತ್ತು. ಅಂದರೆ ಅದು ಶೀಘ್ರದಲ್ಲೇ ಸ್ಫೋಟಗೊಳ್ಳಬಹುದು.

ಈ ನೀಲಿ ನಕ್ಷತ್ರವು ನಕ್ಷತ್ರಪುಂಜದಲ್ಲಿ ಬಹಳ ದೂರದಲ್ಲಿದೆ, ಇದರಿಂದಾಗಿ ಅದನ್ನು ಮೇಲ್ವಿಚಾರಣೆ ಮಾಡುವುದು ಕಷ್ಟಕರವಾಗಿತ್ತು. ಖಗೋಳಶಾಸ್ತ್ರಜ್ಞರು ಅದರ ಸಹಿಯ ಆಧಾರದ ಮೇಲೆ ಮಾತ್ರ ಅದನ್ನು ಮೇಲ್ವಿಚಾರಣೆ ಮಾಡುತ್ತಿದ್ದರು. ಸಂಶೋಧಕರು 2001-2011ರ ನಡುವೆ ಅದರ ಸಹಿಯನ್ನು ಆಧರಿಸಿ ಅದನ್ನು ವಿಶ್ಲೇಷಿಸಲು ಪ್ರಾರಂಭಿಸಿದರು ಎಂದು ಹೇಳಲಾಗಿದೆ.

ಈ ದೈತ್ಯ ನಕ್ಷತ್ರವನ್ನು "ಬ್ಲೂ ವೇರಿಯಬಲ್" ಎಂದು ವರ್ಗೀಕರಿಸಲಾಗಿದ್ದು ಇದು ಅತ್ಯಂತ ಅಸ್ಥಿರ ನಕ್ಷತ್ರಗಳಲ್ಲಿ ಒಂದಾಗಿದೆ, ಇದರ ಹೊಳಪು ಮತ್ತು ಉಷ್ಣ ವಿಕಿರಣವು ಏರಿಳಿತಗೊಳ್ಳುತ್ತದೆ. ಆದಾಗ್ಯೂ ಈ ಗುಣವು ಅಂತಹ ನಕ್ಷತ್ರಗಳನ್ನು ಪತ್ತೆಹಚ್ಚಲು ಸುಲಭಗೊಳಿಸುತ್ತದೆ. ಕಾಣೆಯಾದ ಈ ನಕ್ಷತ್ರದ ಸಹಾಯದಿಂದ ವಿಜ್ಞಾನಿಗಳು ಅಂತಹ ಬೃಹತ್ ನಕ್ಷತ್ರಗಳು ಹೇಗೆ ಸಾಯುತ್ತವೆ ಎಂಬುದನ್ನು ಕಂಡುಹಿಡಿಯುತ್ತಿದ್ದರು. ಈ ಅಧ್ಯಯನವನ್ನು ಶೀಘ್ರದಲ್ಲೇ ರಾಯಲ್ ಆಸ್ಟ್ರೋನಾಮಿಕಲ್ ಸೊಸೈಟಿಯ ಮಾಸಿಕ ಪ್ರಕಟಣೆಯಲ್ಲಿ ಪ್ರಕಟಿಸಲಾಗುವುದು ಎಂದು ಸಹ ಹೇಳಲಾಗುತ್ತಿದೆ.

ಐರ್ಲೆಂಡ್‌ನ ಡಬ್ಲಿನ್‌ನ ಟ್ರಿನಿಟಿ ಕಾಲೇಜಿನ ಪಿಎಚ್‌ಡಿ ವಿದ್ಯಾರ್ಥಿ ಆಂಡ್ರ್ಯೂ ಅಲೆನ್, 'ಇಷ್ಟು ದೊಡ್ಡ ನಕ್ಷತ್ರ ಹೇಗೆ ಇದ್ದಕ್ಕಿದ್ದಂತೆ ಕಣ್ಮರೆಯಾಯಿತು ಎಂದು ತಿಳಿದು ನಾವು ಆಘಾತಕ್ಕೊಳಗಾಗಿದ್ದೇವೆ' ಎಂದು ಹೇಳಿದರು. ವಿಜ್ಞಾನಿಗಳ ಪ್ರಕಾರ ನಕ್ಷತ್ರದ ಇಂಧನವು ಖಾಲಿಯಾದಾಗ, ಅದು ತನ್ನದೇ ಆದ ಗುರುತ್ವಾಕರ್ಷಣೆಯಿಂದ ಕೊಲ್ಲಲ್ಪಡುತ್ತದೆ ಮತ್ತು ನಕ್ಷತ್ರದ ಅವಶೇಷಗಳು ಬ್ರಹ್ಮಾಂಡದಲ್ಲಿ ಒಡೆದು ವಿಭಜನೆಯಾಗುತ್ತವೆ. ಈ ತರ್ಕದ ಆಧಾರದ ಮೇಲೆ, ಕಾಣೆಯಾದ ನಕ್ಷತ್ರ ಸ್ಫೋಟಗೊಂಡಿರಬಹುದು, ಆದರೆ ಪ್ರಶ್ನೆಯೆಂದರೆ ಅಂತಹ ದೊಡ್ಡ ನಕ್ಷತ್ರದಲ್ಲಿ ಸ್ಫೋಟ ಸಂಭವಿಸಿದ್ದರೆ, ವಿಜ್ಞಾನಿಗಳಿಗೆ ಅದು ತಿಳಿದಿಲ್ಲವೇ?

Trending News