ಬ್ರಿಟಿಷ್ ಹೆರಾಲ್ಡ್ ಸಮೀಕ್ಷೆಯಲ್ಲಿ ಈಗ ಪ್ರಧಾನಿ ಮೋದಿ ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿ

ಪ್ರಧಾನಿ ಮೋದಿ ಈಗ ಬ್ರಿಟಿಷ್ ಹೆರಾಲ್ಡ್ ನಡೆಸಿದ ಜಾಗತಿಕ ಸಮೀಕ್ಷೆಯಲ್ಲಿ ವಿಶ್ವದ ಅತ್ಯಂತ ಶಕ್ತಿಶಾಲಿ ವ್ಯಕ್ತಿ ಎಂದು ಘೋಷಿಸಲಾಗಿದೆ.

Last Updated : Jun 21, 2019, 01:57 PM IST
ಬ್ರಿಟಿಷ್ ಹೆರಾಲ್ಡ್ ಸಮೀಕ್ಷೆಯಲ್ಲಿ ಈಗ ಪ್ರಧಾನಿ ಮೋದಿ ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿ title=
file photo

ನವದೆಹಲಿ: ಪ್ರಧಾನಿ ಮೋದಿ ಈಗ ಬ್ರಿಟಿಷ್ ಹೆರಾಲ್ಡ್ ನಡೆಸಿದ ಜಾಗತಿಕ ಸಮೀಕ್ಷೆಯಲ್ಲಿ ವಿಶ್ವದ ಅತ್ಯಂತ ಶಕ್ತಿಶಾಲಿ ವ್ಯಕ್ತಿ ಎಂದು ಘೋಷಿಸಲಾಗಿದೆ.

ಈ ಸಮೀಕ್ಷೆಯನ್ನು ಬ್ರಿಟಿಷ್ ಹೆರಾಲ್ಡ್ ನಡೆಸಿದ್ದು ಶನಿವಾರದ ಮಧ್ಯ ರಾತ್ರಿವರೆಗೆ ಇದನ್ನು ಸ್ಥಗಿತಗೊಳಿಸಲಾಯಿತು.ಪಿಎಂ ಮೋದಿ ಹಲವಾರು ವಿಶ್ವ ನಾಯಕರು ಮತ್ತು ರಾಜಕಾರಣಿಗಳನ್ನು ಹಿಂದಿಕ್ಕಿ ಈ ಸ್ಥಾನವನ್ನು ಪಡೆದಿದ್ದಾರೆ ಎಂದು ಬ್ರಿಟಿಷ್ ಹೆರಾಲ್ಡ್ ಹೇಳಿದೆ. ಈ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿ 30.9% ಮತಗಳನ್ನು ಪಡೆದರೆ ರಷ್ಯಾದ ವ್ಲಾಮಿಡಿರ್ ಪುಟಿನ್, ಡೊನಾಲ್ಡ್ ಟ್ರಂಪ್ (ಯುಎಸ್), ಮತ್ತು ಚೀನಾದ ಕ್ಸಿ ಜಿನ್‌ಪಿಂಗ್ ಅವರು ಕ್ರಮವಾಗಿ 29.9%, 21.9%, ಮತ್ತು 18.1% ಮತಗಳನ್ನು ಪಡೆದಿದ್ದಾರೆ.

ಓದುಗರ ಸಮೀಕ್ಷೆಯಲ್ಲಿ 25 ಕ್ಕೂ ಹೆಚ್ಚು ವಿಶ್ವ ನಾಯಕರನ್ನು ನಾಮನಿರ್ದೇಶನ ಮಾಡಲಾಯಿತು ಮತ್ತು ಅಂತಿಮವಾಗಿ ನಾಲ್ಕು ಅಭ್ಯರ್ಥಿಗಳನ್ನು ತಜ್ಞರ ಸಮಿತಿಯು ಅಂತಿಮ ಸುತ್ತಿಗೆ ಆಯ್ಕೆ ಮಾಡಿತು.ಆಯ್ಕೆ ಪ್ರಕ್ರಿಯೆಯ ಮೌಲ್ಯಮಾಪನವು ಸಮೀಕ್ಷೆಗೆ ನಾಮನಿರ್ದೇಶನಗೊಂಡ ಎಲ್ಲರ ಬಗ್ಗೆ ವ್ಯಾಪಕ ಅಧ್ಯಯನ ಮತ್ತು ಸಂಶೋಧನೆಯನ್ನು ಆಧರಿಸಿದೆ.ಬ್ರಿಟಿಷ್ ಹೆರಾಲ್ಡ್ ಓದುಗರು ತಮ್ಮ ಮತವನ್ನು ಮೌಲ್ಯೀಕರಿಸಲು ಕಡ್ಡಾಯ ಒನ್-ಟೈಮ್ ಪಾಸ್‌ವರ್ಡ್ (ಒಟಿಪಿ) ಪ್ರಕ್ರಿಯೆಯ ಮೂಲಕ ಮತ ಚಲಾಯಿಸಬೇಕಾಗಿತ್ತು.

ಆಶ್ಚರ್ಯಕರ ಸಂಗತಿಯೆಂದರೆ, ಮತದಾನ ನಡೆಯುತ್ತಿರುವಾಗ, ಅನೇಕ ಮತದಾನಕಾರರು ತಮ್ಮ ಆದ್ಯತೆಯ ನಾಯಕರಿಗೆ ಮತ ಚಲಾಯಿಸಲು ಪ್ರಯತ್ನಿಸುತ್ತಿರುವುದರಿಂದ ಬ್ರಿಟಿಷ್ ಪತ್ರಿಕೆಯ ವೆಬ್‌ಸೈಟ್ ಗೆ ಅಧಿಕ ಜನರು ಭೇಟಿ ನೀಡಿದ್ದಾರೆ.ಪ್ರಧಾನಿ ನರೇಂದ್ರ ಮೋದಿಯವರು ಜುಲೈನಲ್ಲಿ ಬ್ರಿಟಿಷ್ ಹೆರಾಲ್ಡ್ ನಿಯತಕಾಲಿಕದ ಮುಖಪುಟದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಜುಲೈ 15, 2019 ರಂದು ಬಿಡುಗಡೆಯಾಗಲಿದೆ.ಬ್ರಿಟಿಷ್ ಹೆರಾಲ್ಡ್ ಈ ಹಿಂದೆ ಮೇ-ಜೂನ್ ಸಂಚಿಕೆಯಲ್ಲಿ ಜಸಿಂಡಾ ಅರ್ಡೆರ್ನ್ ಮತ್ತು ಮಾರ್ಚ್-ಏಪ್ರಿಲ್ ಸಂಚಿಕೆಯಲ್ಲಿ ವ್ಲಾಡಿಮಿರ್ ಪುಟಿನ್ ಅವರನ್ನು ಒಳಗೊಂಡಿತ್ತು.

Trending News