ವ್ಲಾಡಿವೋಸ್ಟಾಕ್: ರಷ್ಯಾದ ವ್ಲಾಡಿವೋಸ್ಟಾಕ್ನಲ್ಲಿ ನಡೆದ ಫೋಟೋ ಸೆಷನ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಶಾಲವಾದ ಸೋಫಾವನ್ನು ನಿರಾಕರಿಸಿದರು. ಸೋಫಾ ಬದಲಿಗೆ ಇತರರೊಂದಿಗೆ ಕುರ್ಚಿಯ ಮೇಲೆ ಕುಳಿತುಕೊಂಡರು. ಪ್ರಧಾನಿ ಮೋದಿಯವರ ಸರಳತೆಗೆ ಕನ್ನಡಿ ಹಿಡಿಯುವಂತಿರುವ ಈ ವಿಡಿಯೋವನ್ನು ರೈಲ್ವೆ ಸಚಿವ ಪಿಯೂಷ್ ಗೋಯಲ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
PM @NarendraModi जी की सरलता का उदाहरण आज पुनः देखने को मिला, उन्होंने रूस में अपने लिए की गई विशेष व्यवस्था को हटवा कर अन्य लोगों के साथ सामान्य कुर्सी पर बैठने की इच्छा जाहिर की। pic.twitter.com/6Rn7eHid6N
— Piyush Goyal (@PiyushGoyal) September 5, 2019
ಫೋಟೋ ಸೆಷನ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಫಾವನ್ನು ನಿರಾಕರಿಸಿ, ಕುರ್ಚಿಯಲ್ಲಿ ಕುಳಿತುಕೊಂಡರು. ಇದನ್ನು ಅನುಸರಿಸಿ, ಅಧಿಕಾರಿಗಳು ಸಹ ಕುರ್ಚಿಯ ಮೇಲೆ ಕೂರಲು ಮುಂದಾದರು. "ಪಿಎಂ ನರೇಂದ್ರ ಮೋದಿಯವರ ಸರಳತೆಯ ಉದಾಹರಣೆಯನ್ನು ಇಂದು ಮತ್ತೆ ಕಾಣಬಹುದು, ಅವರು ರಷ್ಯಾದಲ್ಲಿ ತಮಗಾಗಿ ವ್ಯವಸ್ಥೆ ಮಾಡಲಾಗಿದ್ದ ವಿಶೇಷ ಆಸನವನ್ನು ನಿರಾಕರಿಸಿ, ಇತರರೊಂದಿಗೆ ಸಾಮಾನ್ಯ ಕುರ್ಚಿಯಲ್ಲಿ ಕುಳಿತುಕೊಳ್ಳುವ ಇಚ್ಚೆಯನ್ನು ವ್ಯಕ್ತಪಡಿಸಿದರು" ಎಂದು ಗೋಯಲ್ ವಿಡಿಯೋ ಜೊತೆಗೆ ಟ್ವೀಟ್ ಮಾಡಿದ್ದಾರೆ.
ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಮೋದಿಯವರ ಸರಳತೆಯನ್ನು ಹಲವರು ಶ್ಲಾಘಿಸಿದ್ದಾರೆ. "ಎಂತಹ ಸುಂದರವಾದ ಗೆಸ್ಚರ್. ಪದಗಳಿಲ್ಲ. ಸರಳತೆಯನ್ನು ನೋಡಿ" ಎಂದು ಟ್ವಿಟರ್ ಬಳಕೆದಾರರು ಹೇಳಿದ್ದಾರೆ. "ನಾವು ವಿನಮ್ರ ಮತ್ತು ಶಾಂತ ಪ್ರಧಾನ ಮಂತ್ರಿಯನ್ನು ಹೊಂದಿದ್ದೇವೆ" ಎಂದು ಇನ್ನೊಬ್ಬ ಟ್ವಿಟ್ಟಿಗರು ಬರೆದಿದ್ದಾರೆ.
"ಮೋದಿಜಿಯ ಸರಳತೆಯು ಅವರನ್ನು ವಿಶ್ವ ಭ್ರಾತೃತ್ವದ ಅತ್ಯಂತ ಗೌರವಾನ್ವಿತ ಮತ್ತು ಪ್ರಬಲ ನಾಯಕನನ್ನಾಗಿ ಮಾಡುತ್ತದೆ. ಅವರು ಮಾತನಾಡುವ ದೃಢನಿಶ್ಚಯ, ಸ್ಪಷ್ಟತೆಯು ಅವರ ಸಂದೇಶವನ್ನು ತಿಳಿಸುತ್ತದೆ. ರಾಷ್ಟ್ರಕ್ಕೆ ಯಾವುದು ಅತ್ಯುತ್ತಮ ಎಂದು ಅವರಿಗೆ ತಿಳಿದಿದೆ. ಅವರು ಒಳ್ಳೆಯ ಜನರಿಗೆ ಮೃದು, ಆದರೆ ರಾಷ್ಟ್ರಕ್ಕೆ ಹಾನಿ ಮಾಡಲು ಪ್ರಯತ್ನಿಸುವವರಿಗೆ ಅವರು ತುಂಬಾ ಕಠಿಣ. ಅವರು ನಿಜವಾಗಿಯೂ ನಮ್ಮ ಪ್ರಧಾನಿ "ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಐದನೇ ಪೂರ್ವ ಆರ್ಥಿಕ ವೇದಿಕೆಯಲ್ಲಿ ಪಾಲ್ಗೊಳ್ಳಲು ಮತ್ತು 20 ನೇ ಭಾರತ-ರಷ್ಯಾ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ವ್ಲಾಡಿವೋಸ್ಟಾಕ್‌ಗೆ ಎರಡು ದಿನಗಳ ಭೇಟಿಯಲ್ಲಿದ್ದರು. ಅವರು ಶುಕ್ರವಾರ ಮುಂಜಾನೆ ನವದೆಹಲಿಗೆ ಮರಳಿದರು.