Pfizer Covid-19 vaccine ಪಡೆದ ವಿಶ್ವದ ಮೊದಲ ವ್ಯಕ್ತಿ 90 ವರ್ಷದ ಬ್ರಿಟಿಷ್ ಮಹಿಳೆ

ಮಾರ್ಗರೇಟ್ ಕೀನನ್ ಮಂಗಳವಾರ ಬೆಳಿಗ್ಗೆ 06:31 ಕ್ಕೆ ಮಧ್ಯ ಇಂಗ್ಲೆಂಡ್‌ನ ಕೊವೆಂಟ್ರಿಯಲ್ಲಿರುವ ತನ್ನ ಸ್ಥಳೀಯ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಪಡೆದರು. ಅವರು 91 ನೇ ವರ್ಷಕ್ಕೆ ಕಾಲಿಡುವ ಒಂದು ವಾರ ಮೊದಲು ಲಸಿಕೆ ಪಡೆದಿದ್ದು ತಮ್ಮ ಹುಟ್ಟು ಹಬ್ಬಕ್ಕೆ ಇದೊಂದು ಅತ್ಯುತ್ತಮ ಉಡುಗೊರೆ ಎಂದು ಬಣ್ಣಿಸಿದ್ದಾರೆ.  

Written by - Yashaswini V | Last Updated : Dec 8, 2020, 01:53 PM IST
  • ಪ್ರಯೋಗದ ಹೊರಗೆ ಫಿಜರ್ ಕೋವಿಡ್ -19 ಲಸಿಕೆಯನ್ನು ಪಡೆದ ವಿಶ್ವದ ಮೊದಲ ವ್ಯಕ್ತಿ
  • 90 ವರ್ಷದ ಅಜ್ಜಿ ಮಾರ್ಗರೆಟ್ ಕೀನನ್ ಫಿಜರ್ ಕೋವಿಡ್ -19 ಲಸಿಕೆಯನ್ನು ಪಡೆದ ವಿಶ್ವದ ಮೊದಲ ವ್ಯಕ್ತಿ
  • 91ನೇ ವರ್ಷಕ್ಕೆ ಕಾಲಿಡುವ ಒಂದು ವಾರ ಮೊದಲು ಲಸಿಕೆ ಪಡೆದ ಮಾರ್ಗರೆಟ್ ಕೀನನ್
Pfizer Covid-19 vaccine ಪಡೆದ ವಿಶ್ವದ ಮೊದಲ ವ್ಯಕ್ತಿ 90 ವರ್ಷದ ಬ್ರಿಟಿಷ್ ಮಹಿಳೆ title=
Image courtesy: Wion

ನವದೆಹಲಿ: ಬ್ರಿಟನ್‌ನ 90 ವರ್ಷದ ಅಜ್ಜಿ ಮಾರ್ಗರೆಟ್ ಕೀನನ್ ತ್ವರಿತ ಕ್ಲಿನಿಕಲ್ ಅನುಮೋದನೆಯ ನಂತರ ಪ್ರಯೋಗದ ಹೊರಗೆ ಫಿಜರ್ ಕೋವಿಡ್ -19 ಲಸಿಕೆ (Pfizer Covid 19 Vaccine)ಯನ್ನು ಪಡೆದ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮಾರ್ಗರೇಟ್ ಕೀನನ್ ಮಂಗಳವಾರ ಬೆಳಿಗ್ಗೆ 06:31 ಕ್ಕೆ ಮಧ್ಯ ಇಂಗ್ಲೆಂಡ್‌ನ ಕೊವೆಂಟ್ರಿಯಲ್ಲಿರುವ ಸ್ಥಳೀಯ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ (Covid Vaccine) ಪಡೆದರು. ಅವರು 91 ನೇ ವರ್ಷಕ್ಕೆ ಕಾಲಿಡುವ ಒಂದು ವಾರ ಮೊದಲು ಲಸಿಕೆ ಪಡೆದಿದ್ದು ತಮ್ಮ ಹುಟ್ಟು ಹಬ್ಬಕ್ಕೆ ಇದೊಂದು ಅತ್ಯುತ್ತಮ ಉಡುಗೊರೆ ಎಂದು ಬಣ್ಣಿಸಿದ್ದಾರೆ.

Corona Vaccine ತುರ್ತು ಬಳಕೆಗಾಗಿ ಅನುಮತಿ ಕೋರಿದ ಮೊದಲ ಭಾರತೀಯ ಕಂಪನಿ

ಮಹಾಮಾರಿ ಕರೋನಾವೈರಸ್ ಅನ್ನು ಮಣಿಸಲು ಬಿಡುಗಡೆಗೊಂಡಿರುವ ಫಿಜರ್ ಕೋವಿಡ್ -19 ಲಸಿಕೆಯ ಚುಚ್ಚುಮದ್ದನ್ನು ಪಡೆದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಮಾರ್ಗರೇಟ್ ಕೀನನ್, ಕೋವಿಡ್ -19 (Covid 19) ವಿರುದ್ಧದ ಯುದ್ಧದಲ್ಲಿ ಗೆಲ್ಲಲು ತಯಾರಿಸಿರುವ ವಿಶ್ವದ ಮೊದಲ ಕರೋನಾ ಲಸಿಕೆಯನ್ನು ಪಡೆಯಲು ನಾನು ತುಂಬಾ ಸವಲತ್ತು ಹೊಂದಿದ್ದೇನೆ.  ಇದು ನಾನು ಬಯಸಬಹುದಾದ ಅತ್ಯುತ್ತಮ ಹುಟ್ಟುಹಬ್ಬದ ಉಡುಗೊರೆಯಾಗಿದೆ. ಏಕೆಂದರೆ ನನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹೊಸ ವರ್ಷದಲ್ಲಿ ಸಮಯ ಕಳೆಯಲು ನಾನು ಅಂತಿಮವಾಗಿ ಎದುರುನೋಡಬಹುದು ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಪಂಚದಲ್ಲಿ ಅತಿ ಹೆಚ್ಚು ಕೋವಿಡ್‌–19 ಲಸಿಕೆ ಖರೀದಿಸಿರುವ ರಾಷ್ಟ್ರ ಯಾವುದು ಗೊತ್ತಾ?

ಮ್ಯಾಗಿ ಎಂದು ಕುಟುಂಬ ಮತ್ತು ಸ್ನೇಹಿತರಿಗೆ ಪರಿಚಿತವಾಗಿರುವ ಶ್ರೀಮತಿ ಕೀನನ್ ಮಾಜಿ ಆಭರಣ ಅಂಗಡಿ ಸಹಾಯಕರಾಗಿದ್ದು, ಅವರು ಕೇವಲ ನಾಲ್ಕು ವರ್ಷಗಳ ಹಿಂದೆ ನಿವೃತ್ತರಾದರು. ಅವರಿಗೆ ಮಗಳು, ಮಗ ಮತ್ತು ನಾಲ್ಕು ಜನ ಮೊಮ್ಮಕ್ಕಳು ಇದ್ದಾರೆ.

Trending News