ನವದೆಹಲಿ: ಮತ್ತೊಂದು ವಿವಾದದಲ್ಲಿ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಗುರುವಾರ ಭಯೋತ್ಪಾದಕ ಮತ್ತು 9/11 ಮಾಸ್ಟರ್ ಮೈಂಡ್ ಒಸಾಮಾ ಬಿನ್ ಲಾಡೆನ್ ಅವರನ್ನು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಹುತಾತ್ಮರೆಂದು ಕರೆದಿದ್ದಾರೆ.
ರಾಷ್ಟ್ರೀಯ ಅಸೆಂಬ್ಲಿಯನ್ನುದ್ದೇಶಿಸಿ ಮಾತನಾಡಿದ ಅವರು, "ಅಮೆರಿಕನ್ನರು ಅಬೋಟಾಬಾದ್‌ಗೆ ಬಂದು ಒಸಾಮಾ ಬಿನ್ ಲಾಡೆನ್‌ನನ್ನು ಕೊಂದು ಹುತಾತ್ಮರನ್ನಾಗಿ ಮಾಡಿದ ಈ ಒಂದು ಘಟನೆ ನಮಗೆ ನಾಚಿಕೆಗೇಡಿನ ಸಂಗತಿಯಾಗಿದೆ" ಎಂದು ಹೇಳಿದರು.ಪತ್ರಕರ್ತ ನೈಲಾ ಇನಾಯತ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ ವಿಡಿಯೋ ತುಣುಕು, ಪಿಬಿಐ ನಾಯಕ ಅಬೋಟಾಬಾದ್ನಲ್ಲಿ ಲಾಡೆನ್ ಹೇಗೆ ಕೊಲ್ಲಲ್ಪಟ್ಟಿದ್ದಾನೆಂದು ತೋರಿಸಿದೆ. "ಶಾಹೀದ್ ಕರ್ ದಿಯಾ" ಎಂದು ಖಾನ್ ಹೇಳಿದ್ದಾರೆ.
ಇದನ್ನೂ ಓದಿ: ಮಿಲಿಟರಿ ಹಿಡಿತಕ್ಕೆ ಒಳಗಾಗಲಿದೆಯೇ ಪಾಕಿಸ್ತಾನ? ನೆರೆ ರಾಷ್ಟ್ರದಲ್ಲಿ ಏನಾಗುತ್ತಿದೆ..! ಇಲ್ಲಿದೆ ಸ್ಪೋಟಕ ಮಾಹಿತಿ
ಖಾನ್ ಹೇಳಿಕೆಯ ನಂತರ, ಪಿಎಂಎಲ್-ಎನ್ ನಾಯಕ ಖವಾಜಾ ಆಸಿಫ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಎಂದು ಪಾಕಿಸ್ತಾನ ಮಾಧ್ಯಮ ಡಾನ್ ವರದಿ ಮಾಡಿದೆ. "ಇಮ್ರಾನ್ ಖಾನ್ ಒಸಾಮಾ ಬಿನ್ ಲಾಡೆನ್ ಶಾಹೀದ್ ಎಂದು ಕರೆದರು. ಬಿನ್ ಲಾಡೆನ್ ನಮ್ಮ ಭೂಮಿಗೆ ಭಯೋತ್ಪಾದನೆಯನ್ನು ತಂದರು, ಅವರು ಭಯೋತ್ಪಾದಕರಾಗಿದ್ದರು ಮತ್ತು ಪ್ರಧಾನಿ ಅವರನ್ನು ಶಹೀದ್ ಎಂದು ಕರೆಯುತ್ತಾರೆ?" ಎಂದು ಅವರು ಹೇಳಿದ್ದಾರೆ.
PM Pakistan Imran Khan considers Osama bin Laden a martyr. pic.twitter.com/tax0t3V5wg
— Naila Inayat नायला इनायत (@nailainayat) June 25, 2020
ಡಾನ್ ಪ್ರಕಾರ, ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ವಕ್ತಾರ ಮುಸ್ತಫಾ ನವಾಜ್ ಖೋಖರ್ ಅವರು ಖಾನ್ ಅವರನ್ನು "ರಾಷ್ಟ್ರೀಯ ಭದ್ರತಾ ಬೆದರಿಕೆ" ಎಂದು ಹೇಳಿದ್ದಾರೆ. "ಒಸಾಮಾ ಬಿನ್ ಲಾಡೆನ್ ಅವರನ್ನು ಹುತಾತ್ಮರೆಂದು ಹಣೆಪಟ್ಟಿ ಕಟ್ಟುವ ಮೂಲಕ, ಇಮ್ರಾನ್ ಖಾನ್ ರಾಷ್ಟ್ರೀಯ ಭದ್ರತಾ ಬೆದರಿಕೆಯಾಗಿದ್ದಾರೆ. ಅವರು ಹುತಾತ್ಮರಾಗಿದ್ದರೆ, ಅಲ್ ಖೈದಾದ ದಾಳಿಯಲ್ಲಿ ಹುತಾತ್ಮತೆಯನ್ನು ಸ್ವೀಕರಿಸಿದ ನಾಗರಿಕರು ಮತ್ತು ನಮ್ಮ ಸಶಸ್ತ್ರ ಪಡೆಗಳ ಸಾವಿರಾರು ಸದಸ್ಯರ ಸ್ಥಿತಿ ಏನು?. ಅಲ್ ಖೈದಾದ ದಾಳಿಯಲ್ಲಿ ನಾಗರಿಕರು ಮತ್ತು ಯುವಕರು ಹುತಾತ್ಮರಾದರು "ಎಂದು ಅವರು ಪ್ರಶ್ನಿಸಿದ್ದಾರೆ.
ಯುವ ಪೀಳಿಗೆಗೆ ಕಲಿಸಲು ಪ್ರಧಾನಿ ಪ್ರಯತ್ನಿಸುತ್ತಿರುವ ಪಾಠವನ್ನೂ ಖೋಖರ್ ಪ್ರಶ್ನಿಸಿದ್ದಾರೆ ಎಂದು ಡಾನ್ ವರದಿ ಮಾಡಿದೆ. "ಇಂದು ಇಮ್ರಾನ್ ಖಾನ್ ಅವರು ಸಂಸತ್ತಿನಲ್ಲಿ 'ತಾಲಿಬಾನ್ ಖಾನ್' ಎಂದು ಸಾಬೀತುಪಡಿಸಿದ್ದಾರೆ. ಇಮ್ರಾನ್ ಖಾನ್-ತಾಲಿಬಾನ್ ಸಂಬಂಧವು ಇಬ್ಬರ ನಡುವಿನ ಸಭೆಗಳಿಂದ ಸ್ಪಷ್ಟವಾಗಿದೆ ' ಎಂದಿದ್ದಾರೆ.