ನವದೆಹಲಿ: ಪಾಕಿಸ್ತಾನದ ಕರಾಚಿ-ರಾವಲ್ಪಿಂಡಿ ತೇಜ್ಗಮ್ ಎಕ್ಸ್‌ಪ್ರೆಸ್ ಗುರುವಾರ ಬೆಳಿಗ್ಗೆ ಇದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಈವರೆಗೆ 46ಕ್ಕೂ ಅಧಿಕ ಪ್ರಯಾಣಿಕರು ಸಾವನ್ನಪ್ಪಿದ್ದರೆ, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ತಲುಪಿದ ಪೊಲೀಸರು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಆದರೆ, ಈವರೆಗೆ ರೈಲಿನಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣ ಏನೆಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.
Pakistan: Death toll rises to 16, in incident where fire broke out in Karachi-Rawalpindi Tezgam express train in Liaqatpur near Rahim Yar Khan today. pic.twitter.com/wDmxPfN6gh
— ANI (@ANI) October 31, 2019
ಮಾಹಿತಿಯ ಪ್ರಕಾರ, ಪಾಕಿಸ್ತಾನದ ಕರಾಚಿ-ರಾವಲ್ಪಿಂಡಿ ತೇಜ್ಗಮ್ ಎಕ್ಸ್‌ಪ್ರೆಸ್ ಗುರುವಾರ ಬೆಳಿಗ್ಗೆ ರಹೀಂ ಯಾರ್ ಖಾನ್ ರೈಲ್ವೆ ನಿಲ್ದಾಣದ ಬಳಿಯ ಲಿಯಾಕತ್‌ಪುರಕ್ಕೆ (ಲಿಯಾಕತ್‌ಪುರ) ತಲುಪಿದ ಸಂದರ್ಭದಲ್ಲಿ ರೈಲಿನ ಬೋಗಿಯೊಂದಕ್ಕೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಈ ಬೆಂಕಿ ಎಷ್ಟು ವೇಗವಾಗಿ ಹರಡಿತು ಎಂದರೆ ಪ್ರಯಾಣಿಕರಿಗೆ ತಪ್ಪಿಸಿಕೊಳ್ಳಲು ಸಹ ಅವಕಾಶ ಸಿಗಲಿಲ್ಲ.
ಈ ಅಪಘಾತ ಸಂಭವಿಸಿದ ಸಮಯದಲ್ಲಿ ಪ್ರಯಾಣಿಕರು ರೈಲಿನಲ್ಲಿ ಮಲಗಿದ್ದರು ಎಂದು ಹೇಳಲಾಗುತ್ತಿದೆ. ಬೆಂಕಿಯಿಂದ ಈವರೆಗೆ 16 ಜನರು ಸಾವನ್ನಪ್ಪಿದ್ದರೆ, 13 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.