Pakistan CM On Imran: 'Imran Khan ಪ್ರಧಾನಿಯಾಗಲು ಲಾಯಕ್ಕಿಲ್ಲ' ಹೀಗಂತ ಹೇಳಿದ್ಯಾರು ಗೊತ್ತಾ?

Pak CM Calls Imran Khan Imature For PM Post - ಪಾಕಿಸ್ತಾನದ ಪಿಟಿಐ ಸರ್ಕಾರ (PTI Government) ಉಗುಳಲು ಆಗದ ಅಥವಾ ಅರಗಿಸಿಕೊಳ್ಳಲು ಸಾಧ್ಯವಾಗದಂತಹ ಕೆಲಸ ಮಾಡುತ್ತದೆ ಎಂದು ಪಾಕ್ ನಲ್ಲಿ ಮುಖ್ಯಮಂತ್ರಿಯಾಗಿರುವ ಮುರಾದ್ ಅಲಿ ಶಾ ಹೇಳಿದ್ದಾರೆ. ಪಾಕಿಸ್ತಾನದ ಹಿತಾಸಕ್ತಿಯಲ್ಲಿ ಕುಳಿತು ಯೋಚಿಸುವಂತೆ ಅವರು ಎಲ್ಲಾ ಸ್ಟೆಕ್ ಹೋಲ್ಡರ್ ಗಳಿಗೆ ಕರೆ ನೀಡಿದ್ದಾರೆ. 

Written by - Nitin Tabib | Last Updated : Nov 1, 2021, 10:20 PM IST
  • ಇಮ್ರಾನ್ ಖಾನ್ ಮೇಲೆ ಮೇಲೆ ಹರಿಹಾಯ್ದ ಪಾಕ್ ಮುಖ್ಯಮಂತ್ರಿ.
  • ಪ್ರಧಾನಿ ಹುದ್ದೆಗೆ ಇಮ್ರಾನ್ ಅಪ್ರಭುದ್ಧ
  • PCB ಹುದ್ದೆಗೆ ಇಮ್ರಾನ್ ಲಾಯಕ್ಕು ಎಂದ ಮುರಾದ್ ಅಲಿ ಶಾಹ್
Pakistan CM On Imran: 'Imran Khan ಪ್ರಧಾನಿಯಾಗಲು ಲಾಯಕ್ಕಿಲ್ಲ' ಹೀಗಂತ ಹೇಳಿದ್ಯಾರು ಗೊತ್ತಾ? title=
Pak CM Calls Imran Khan Imature For PM Post (File Photo)

ಇಸ್ಲಾಮಾ ಬಾದ್: Pak CM Calls Imran Khan Imature For PM Post - ಪಾಕ್ ಪ್ರಧಾನಿ ಇಮ್ರಾನ್ ಖಾನ್ (Imran Khan) ತಮ್ಮದೇ ಆದ ದೇಶದಲ್ಲಿ ನಾಲ್ಕು ದಿಕ್ಕುಗಳಿಂದ ಸುತ್ತುವರೆಯಲ್ಪಟ್ಟಿದ್ದಾರೆ. ಪ್ರತಿ ಪಕ್ಷ ನಾಯಕರು ಅವರ ಮೇಲೆ ನಿರಂತರ ಹಲ್ಲೆಗಳನ್ನು ನಡೆಸುತ್ತಲೇ ಇರುತ್ತಾರೆ. ಇನ್ನೊಂದೆಡೆ ಮಿಲಿಟರಿ ಒತ್ತಡದ ಹಿನ್ನೆಲೆ ಅವರ ಕುರ್ಚಿಯ ಮೇಲೆ ಕತ್ತಿ ತೂಗುತ್ತಲೇ ಇದೆ. ಇದೀಗ ಸಿಂಧ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿರುವ (Sindh Chief Minister) ಮುರಾದ್ ಅಲಿ ಶಾಹ್ (Murad Ali Shah), ಇಮ್ರಾನ್ ಖಾನ್ ಅವರನ್ನು ಪ್ರಧಾನಿ ಹುದ್ದೆಗೆ ಅಪ್ರಭುದ್ಧ ಎಂದು ಹೇಳಿದ್ದಾರೆ. 

PCB ಸೇರಿದ್ದರೆ ಉತ್ತಮ ಸೇವೆ ಮಾಡಬಹುದಿತ್ತು
ಪ್ರಧಾನಿ ಇಮ್ರಾನ್ ಖಾನ್ ಅವರು ದೇಶದ ಮುಖ್ಯಸ್ಥರಾಗಿ ಕೆಲಸ ಮಾಡುವುದಕ್ಕಿಂತ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ (PCB) ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಪಾಕಿಸ್ತಾನದ ಸಿಂಧ್ ಮುಖ್ಯಮಂತ್ರಿ ಹೇಳಿದ್ದಾರೆ. ಜಿಯೋ ನ್ಯೂಸ್ ವರದಿ ಪ್ರಕಾರ, ಇಸ್ಲಾಮಾಬಾದ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿಂಧ್ ಸಿಎಂ ಮುರಾದ್ ಅಲಿ ಇಮ್ರಾನ್ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. 

ಪಿಟಿಐ ಪಕ್ಷ ಪಾಕ್ ಚುನಾವಣೆಯಲ್ಲಿ ಹೇಗೆ ಗೆದ್ದಿದೆ ಎಂಬುದು ಪಾಕಿಸ್ತಾನದ ಎಲ್ಲರಿಗೂ ತಿಳಿದಿದೆ ಎಂದು ಮುರಾದ್ ಅಲಿ ಶಾ ಹೇಳಿದ್ದಾರೆ. ನಿಷೇಧಿತ ತೆಹ್ರೀಕ್-ಎ-ಲಬ್ಬೈಕ್ ಪಾಕಿಸ್ತಾನ್ (ಟಿಎಲ್‌ಪಿ) ಪ್ರತಿಭಟನೆಯ ನಂತರ ಪಿಟಿಐ ಸರ್ಕಾರವು ದೇಶದಲ್ಲಿನ ಅವ್ಯವಸ್ಥೆಯನ್ನು ಹೇಗೆ ನಿರ್ವಹಿಸಿತು ಎಂಬುದರ ಕುರಿತು ಮಾತನಾಡಿದ ಸಿಎಂ, ಟಿಎಲ್‌ಪಿ (TLP) ವಿಷಯದಲ್ಲಿ ಸರ್ಕಾರದ ವೈಫಲ್ಯವು ಅಮೂಲ್ಯ ಜೀವಗಳನ್ನು ಕಳೆದುಕೊಳ್ಳಲು ಕಾರಣವಾಯಿತು ಎಂದು ಹೇಳಿದ್ದಾರೆ. 

ಇದನ್ನೂ ಓದಿ-ICC T20 World Cup 2021: Ind vs Pak ಪಂದ್ಯಕ್ಕೂ ಮುನ್ನ ಬೋಲ್ಡ್ ಹೇಳಿಕೆ ನೀಡಿದ ಪಾಕ್ ಪಿಎಂ!

ವಿಶ್ವ ಕಪ್ ನಲ್ಲಿ ಪಾಕ್ ಗೆಲ್ಲಬೇಕು
ಪಿಟಿಐ ಸರ್ಕಾರವು ಉಗುಳಲು ಆಗದ  ಅಥವಾ ಅರಗಿಸಿಕೊಳ್ಳಲು ಸಾಧ್ಯವಾಗದಂತಹ ಕೆಲಸವನ್ನು ಮಾಡುತ್ತದೆ ಎಂದು ಸಿಎಂ ಶಾ ಹೇಳಿದ್ದಾರೆ. ದೇಶದ ಹಿತಾಸಕ್ತಿಯಲ್ಲಿ ಕುಳಿತು ಆಲೋಚಿಸಬೇಕು ಎಂದು ಅವರು ಎಲ್ಲ ಸ್ಟೆಕ್ ಹೋಲ್ಡರ್ ಗಳಿಗೆ ಕರೆ ನೀಡಿದ್ದಾರೆ. 

ಇದನ್ನೂ ಓದಿ-Pakistan: ಐಎಸ್‌ಐ ಮುಖ್ಯಸ್ಥರ ರಾಜೀನಾಮೆಗೆ ಹೆಚ್ಚಿದ ಬೇಡಿಕೆ

ಟಿ20 ವಿಶ್ವಕಪ್‌ನಲ್ಲಿ (T20 World Cup) ಪಾಕ್ ಕ್ರಿಕೆಟ್ ತಂಡಕ್ಕೆ (Pakistan Cricket Team) ಗೆಲುವಿನ ಭರವಸೆಯನ್ನು ವ್ಯಕ್ತಪಡಿಸಿದ ಸಿಎಂ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮಿಂದಲೇ ಪಾಕಿಸ್ತಾನ ತಂಡ ಉತ್ತಮವಾಗಿ ಆಡುತ್ತಿದೆ ಎಂದು ಹೇಳಿರುವುದನ್ನು ನಾನು ಕೇಳಿದ್ದೇನೆ ಎಂದಿದ್ದಾರೆ.  ಪ್ರಧಾನಿ ಇಮ್ರಾನ್ ಖಾನ್ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ (Pakistan Cricket Board) ಕೆಲಸ ಮಾಡುವುದು ಉತ್ತಮ ಎಂದು ನಾನು ಈ ಹಿಂದೆಯೂ ಹೇಳಿದ್ದೆ ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ-Inflation in Pakistan: ಪಾಕಿಸ್ತಾನದಲ್ಲಿ ಒಂದು ಕಪ್ ಚಹಾದ ಬೆಲೆ ಎಷ್ಟೆಂದು ಕೇಳಿದರೆ ಶಾಕ್ ಆಗ್ತೀರಾ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News