Tax Free Liquor: ಈ ಮುಸ್ಲಿಂ ದೇಶದಲ್ಲಿ ಇನ್ಮುಂದೆ ಟ್ಯಾಕ್ಸ್ ಫ್ರೀ ಆಗಲಿದೆ ಮದ್ಯ

Tax Free Liquor: ಈ ಮೊದಲೂ ಕೂಡ ಮದ್ಯಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ತೀರ್ಮಾನ ಕೈಗೊಂಡಿರುವ ದುಬೈನಲ್ಲಿ ಇದೀಗ ಮತ್ತೊಂದು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈಗ ಈ ಮುಸ್ಲಿಂ ದೇಶದಲ್ಲಿ ಮದ್ಯ ತೆರಿಗೆ ಮುಕ್ತವಾಗಲಿದೆ. 

Written by - Yashaswini V | Last Updated : Jan 2, 2023, 02:44 PM IST
  • ಈ ದೇಶದಲ್ಲಿ ಈ ಮೊದಲು ಮದ್ಯಕ್ಕೆ ಸಂಬಂಧಿಸಿದ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ
  • ಉದಾಹರಣೆಗೆ ರಂಜಾನ್ ತಿಂಗಳಲ್ಲಿ, ಹಗಲಿನಲ್ಲಿ ಮದ್ಯವನ್ನು ಮಾರಾಟ ಮಾಡಲು ಸಹ ಅನುಮತಿಸಲಾಗಿದೆ.
  • ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಮದ್ಯದ ಹೋಂ-ಡೆಲಿವರಿಯನ್ನು ಸಹ ಪ್ರಾರಂಭಿಸಲಾಯಿತು.
Tax Free Liquor: ಈ ಮುಸ್ಲಿಂ ದೇಶದಲ್ಲಿ ಇನ್ಮುಂದೆ ಟ್ಯಾಕ್ಸ್ ಫ್ರೀ ಆಗಲಿದೆ ಮದ್ಯ  title=
Tax Free Liquor

Tax Free Liquor: ಪ್ರಪಂಚದಾದ್ಯಂತ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ರಾಷ್ಟ್ರ ದುಬೈ. ದುಬೈ ಆಡಳಿತ ಪ್ರವಾಸಿಗರಿಗಾಗಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಲೇ ಇರುತ್ತದೆ. ಹೊಸ ವರ್ಷದ ಸಂದರ್ಭದಲ್ಲಿ ದುಬೈ ಆಡಳಿತವು ಮದ್ಯದ ಮೇಲಿನ ತೆರಿಗೆ ಮತ್ತು ಪರವಾನಗಿ ಶುಲ್ಕವನ್ನು ರದ್ದುಗೊಳಿಸುವುದಾಗಿ ಘೋಷಿಸಿದೆ. ಈ ಮೂಲಕ ದುಬೈ ಸ್ಥಳೀಯರಿಗೆ ಮಾತ್ರವಲ್ಲದೆ, ಪ್ರವಾಸಿಗರಿಗೂ ಭರ್ಜರಿ ಉಡುಗೊರೆಯನ್ನು ನೀಡಿದೆ. 

ವಾಸ್ತವವಾಗಿ, ದುಬೈನ ಎರಡು ಸರ್ಕಾರಿ ಮದ್ಯದ ಕಂಪನಿಗಳಾದ ಮೆರಿಟೈಮ್ ಮತ್ತು ಮರ್ಕೆಂಟೈಲ್ ಇಂಟರ್‌ನ್ಯಾಶನಲ್ ಮದ್ಯದ ಮೇಲಿನ ತೆರಿಗೆ ಮತ್ತು ಪರವಾನಗಿ ಶುಲ್ಕವನ್ನು ರದ್ದುಗೊಳಿಸುವುದಾಗಿ ಘೋಷಿಸಿವೆ. ಈ ಎರಡೂ ಕಂಪನಿಗಳು ಎಮಿರೇಟ್ಸ್ ಸಮೂಹದ ಭಾಗವಾಗಿವೆ ಎಂಬುದು ಗಮನಾರ್ಹವಾಗಿದೆ.

ಇದನ್ನೂ ಓದಿ- Omicron Variant: ವ್ಯಾಕ್ಸಿನ್ ಗೂ ಬಗ್ಗದ, ಕೊರೊನಾಕ್ಕಿಂತ 120 ಪ್ರತಿಶತ ಹೆಚ್ಚು ಅಪಾಯಕಾರಿ ವೈರಸ್!! ರೋಗಲಕ್ಷಣ ಏನುಗೊತ್ತಾ?

ಆಡಳಿತಾರೂಢ ಅಲ್ ಮಖ್ತೂಮ್ ಕುಟುಂಬದ ಆದೇಶದ ಮೇರೆಗೆ ಈ ಘೋಷಣೆ ಮಾಡಲಾಗಿದೆ. ಆದಾಗ್ಯೂ, ಈ ಘೋಷಣೆಯಿಂದಾಗಿ ಎರಡೂ ಕಂಪನಿಗಳಿಗೆ ಆದಾಯದ ದೊಡ್ಡ ಮೂಲ ತಪ್ಪಿದಂತಾಗುತ್ತದೆ. ವಾಸ್ತವವಾಗಿ, ಈ ಮೊದಲು ದುಬೈನಲ್ಲಿ ಮದ್ಯದ ಮೇಲೆ 30% ತೆರಿಗೆ ಮತ್ತು ಮದ್ಯದ ಪರವಾನಗಿ ಪಡೆದವರು ನಿರ್ದಿಷ್ಟ ಶುಲ್ಕವನ್ನು ಪಾವತಿಸಬೇಕಾಗಿತ್ತು. 

ಇದನ್ನೂ ಓದಿ- New Year Resolutions: ಹೊಸ ವರ್ಷಕ್ಕೆ 5 ದೃಢಸಂಕಲ್ಪಗಳು, ಆದ್ರೆ ಯಾರೂ ಪಾಲಿಸಲ್ಲ!

ದುಬೈನಲ್ಲಿ ಮದ್ಯ ಸೇವನೆ ಕಾನೂನು?
* ಪ್ರವಾಸಿಗರ ಅತ್ಯಾಕರ್ಷಕ ಕೇಂದ್ರವಾಗಿರುವ ದುಬೈನ ಕಾನೂನಿನ ಪ್ರಕಾರ, ಮುಸ್ಲಿಮೇತರರು ಮದ್ಯ ಸೇವಿಸಲು 21 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು. 
* ಮದ್ಯ ಸೇವಿಸುವವರು ಬಿಯರ್, ವೈನ್ ಮತ್ತು ಮದ್ಯವನ್ನು ಖರೀದಿಸಲು, ಸಾಗಿಸಲು ಮತ್ತು ಸೇವಿಸಲು ಅನುಮತಿಸುವ ದುಬೈ ಪೊಲೀಸರು ನೀಡಿದ ಪ್ಲಾಸ್ಟಿಕ್ ಕಾರ್ಡ್ ಅನ್ನು ಹೊಂದಿರಬೇಕು. 
* ಮದ್ಯ ಸೇವನೆಗಾಗಿ ದುಬೈ ಪೊಲೀಸರಿಂದ ಪ್ಲಾಸ್ಟಿಕ್ ಕಾರ್ಡ್ ಹೊಂದಿಲ್ಲದಿದ್ದರೆ ದಂಡ ಮತ್ತು ಬಂಧನಕ್ಕೆ ಕಾರಣವಾಗಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News