ವಿಶ್ವದ ಅತ್ಯಂತ ಶಕ್ತಿಶಾಲಿ Missile ಅನಾವರಣಗೊಳಿಸಿದ ಉತ್ತರ ಕೊರಿಯಾ

ತನ್ನ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸುವ ತವಕದಲ್ಲಿರುವ, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ಈ ಹಿಂದೆ ಅಂತಹ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಇದು ವಿಶ್ವದ ಅತಿದೊಡ್ಡ ಖಂಡಾಂತರ ಖಂಡಾಂತರ ಕ್ಷಿಪಣಿ ಎಂದೇ ಪರಿಗಣಿಸಲಾಗುತ್ತಿದೆ.

Last Updated : Nov 16, 2020, 12:43 PM IST
  • ವಿಶ್ವದ ಎದುರು ತನ್ನ 'ಛುಪಾ ರುಸ್ತಂ' ಪ್ರದರ್ಶಿಸಿದ ಕಿಮ್ ಜೊಂಗ್.
  • ಪರೇಡ್ ನಲ್ಲಿ 4 ಅಪಾಯಕಾರಿ ಕ್ಷಿಪಣಿಗಳ ಪ್ರದರ್ಶನ.
  • ಒಂದು ಮಹಾದ್ವೀಪದಿಂದ ಮತ್ತೊಂದು ಮಹಾದ್ವೀಪದವರೆಗೆ ಮಾರಕ ಕ್ಷಮತೆಯನ್ನು ಈ ಕ್ಷಿಪಣಿಗಳು ಹೊಂದಿವೆ.
ವಿಶ್ವದ ಅತ್ಯಂತ ಶಕ್ತಿಶಾಲಿ Missile ಅನಾವರಣಗೊಳಿಸಿದ ಉತ್ತರ ಕೊರಿಯಾ title=

ಪ್ಯೊಂಗ್ಯಾಂಗ್: ತನ್ನ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸುವ ತವಕದಲ್ಲಿರುವ, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ (Kim Jong Un) ಈ ಹಿಂದೆ ಅಂತಹ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಇದು ವಿಶ್ವದ ಅತಿದೊಡ್ಡ ಖಂಡಾಂತರ ಖಂಡಾಂತರ ಕ್ಷಿಪಣಿ ಎಂದೇ ಪರಿಗಣಿಸಲಾಗುತ್ತಿದೆ. ಕ್ಷಿಪಣಿ ಗಾತ್ರದಲ್ಲಿ ಎಷ್ಟು ದೊಡ್ಡದಾಗಿತ್ತೆಂದರೆ ಅದನ್ನು 22 ಗಾಲಿಗಳ ಟ್ರಕ್‌ ಸಹಾಯದಿಂದ ಮಿಲಿಟರಿ ಪರೇಡ್ ಗೆ ತರಲಾಗಿತ್ತು.

ಇದನ್ನು ಓದಿ- ನಿರಂಕುಶಾಧಿಕಾರಿ Kim Jong ಹೊರಡಿಸಿರುವ ತುಘಲಕ್ ಫರ್ಮಾನ್ ಕೇಳಿ ನೀವು ದಂಗಾಗುವಿರಿ

ವಿಶ್ವದ ಎದುರು ತನ್ನ 'ಛುಪಾ ರುಸ್ತಂ' ಪ್ರದರ್ಶಿಸಿದ ಕಿಮ್ ಜೊಂಗ್
ಜಗತ್ತನ್ನೇ ಬೆಚ್ಚಿಬೀಳಿಸುವುದು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ನ ಹಳೆ ಚಾಳಿಯಾಗಿದೆ. ತಮ್ಮ ಕಾರ್ಮಿಕರ ಪಕ್ಷದ 75 ನೇ ಪ್ರತಿಷ್ಠಾಪನಾ ದಿನದ ಅದ್ಭುತ ಆಚರಣೆಯ ಸಂದರ್ಭದಲ್ಲಿ, ಕಿಮ್ ಜೊಂಗ್ ಉನ್ ಮತ್ತೊಮ್ಮೆ ಇಡೀ ಜಗತ್ತನ್ನು ಬೆಚ್ಚಿಬೀಲಿಸಿದ್ದಾರೆ.  ಈ ಸಂದರ್ಭದಲ್ಲಿ ನಡೆದ ಮಿಲಿಟರಿ ಪೆರೇಡ್‌ನಲ್ಲಿ ಹೊಸ ಖಂಡಾಂತರ ಖಂಡಾಂತರ ಕ್ಷಿಪಣಿ (ICBM) ಅನ್ನು ಪ್ರದರ್ಶಿಸಲಾಗಿದೆ. ಇದು ವಿಶ್ವದ ಅತಿದೊಡ್ಡ ಖಂಡಾಂತರ ಕ್ಷಿಪಣಿ ಎಂದೇ ಹೇಳಲಾಗುತ್ತಿದೆ.

ಇದನ್ನು ಓದಿ- ಉತ್ತರ ಕೊರಿಯಾದ ಕಿಮ್ ಜೊಂಗ್-ಯುನ್ ನ ಐಷಾರಾಮಿ ಜೀವನಶೈಲಿಯ 10 ಅಂಶಗಳು

ಪರೇಡ್ ನಲ್ಲಿ 4 ಅಪಾಯಕಾರಿ ಕ್ಷಿಪಣಿಗಳ ಪ್ರದರ್ಶನ
ಪರೇಡ್ ನಲ್ಲಿ ಉತ್ತರ ಕೊರಿಯಾ ಇಂತಹ ಒಂದಲ್ಲ ಒಟ್ಟು 4 ಕ್ಷಿಪಣಿಗಳನ್ನು ಪ್ರದರ್ಶಿಸಿದೆ. ಪಯೋಂಗ್ಯಾಂಗ್‌ಗೆ ಹೋಗುವ ರಸ್ತೆಯಲ್ಲಿ ಖಂಡಾಂತರ ಕ್ಷಿಪಣಿಯ ಬೆಂಗಾವಲುಪಡೆ  ಹಾದುಹೋಗುವಾಗ ಆಕಾಶದಲ್ಲಿ ಪಟಾಕಿ ಸಿಡಿಸಲಾಗಿತ್ತು. ವಿಶ್ವದ ಅತ್ಯಂತ ಶಕ್ತಿಶಾಲಿ ಕ್ಷಿಪಣಿಯನ್ನು ಸ್ವಾಗತಿಸಲು ಸರ್ವಾಧಿಕಾರಿ ಕಿಮ್ ಜೊಂಗ್-ಉನ್ ಕೂಡ ಉಪಸ್ಥಿತನಿದ್ದ. ಬಹುಶಃ ಅವನು ತನ್ನ ಶತ್ರು ದೇಶಗಳಿಗೆ ಸಂದೇಶ ನೀಡಲು ಪ್ರಯತ್ನಿಸುತ್ತಿದ್ದ. ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಿದ ಕಿಮ್ ಜೊಂಗ್ ಉನ್, ಆತ್ಮರಕ್ಷಣೆ ಮತ್ತು ದಾಳಿಗೆ ಸ್ಪಂದಿಸಲು ಉತ್ತರ ಕೊರಿಯಾ ತನ್ನ ಮಿಲಿಟರಿಯನ್ನು ಬಲಪಡಿಸುವುದನ್ನು ಮುಂದುವರಿಸಲಿದೆ ಎಂದು ಹೇಳಿದ್ದಾನೆ.

Trending News