Ukraine Russia War : ಉಕ್ರೇನ್‌ಗೆ ಮುಂದಿನ 24 ಗಂಟೆ ತುಂಬಾ ಕಷ್ಟಕರ ಎಂದ ಅಧ್ಯಕ್ಷ ಝೆಲೆನ್ಸ್ಕಿ

ಬ್ರಿಟನ್ ಮತ್ತು ಇತರ ಮಿತ್ರರಾಷ್ಟ್ರಗಳಿಂದ ರಕ್ಷಣಾತ್ಮಕ ನೆರವು ಉಕ್ರೇನ್(Ukraine) ತಲುಪುವುದನ್ನು ಖಚಿತಪಡಿಸಿಕೊಳ್ಳಲು ತಾನು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಜಾನ್ಸನ್ ತಿಳಿಸಿದ್ದಾರೆ.

Written by - Channabasava A Kashinakunti | Last Updated : Feb 28, 2022, 09:21 PM IST
  • ಮುಂದಿನ 24 ಗಂಟೆಗಳು ರಷ್ಯಾದೊಂದಿಗಿನ ಉಕ್ರೇನ್‌ನ ಯುದ್ಧಕ್ಕೆ ನಿರ್ಣಾಯಕ
  • ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಾಹಿತಿ
  • ಸೋಮವಾರ ಬೆಳಿಗ್ಗೆ ರಷ್ಯಾದ ಪಡೆಗಳು ಬರ್ಡಿಯಾನ್ಸ್ಕ್ ನಗರವನ್ನು ವಶಪಡಿಸಿಕೊಂಡಿವೆ
Ukraine Russia War : ಉಕ್ರೇನ್‌ಗೆ ಮುಂದಿನ 24 ಗಂಟೆ ತುಂಬಾ ಕಷ್ಟಕರ ಎಂದ ಅಧ್ಯಕ್ಷ ಝೆಲೆನ್ಸ್ಕಿ title=

ನವದೆಹಲಿ : ಮುಂದಿನ 24 ಗಂಟೆಗಳು ರಷ್ಯಾದೊಂದಿಗಿನ ಉಕ್ರೇನ್‌ನ ಯುದ್ಧಕ್ಕೆ ನಿರ್ಣಾಯಕವಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರೊಂದಿಗಿನ ದೂರವಾಣಿ ಸಂಭಾಷಣೆಯಲ್ಲಿ ಹೇಳಿದ್ದಾರೆ ಎಂದು ಉಕ್ರೇನ್ ರಾಷ್ಟ್ರೀಯ ಸುದ್ದಿ ಸಂಸ್ಥೆ (Ukrinform) ವರದಿ ಮಾಡಿದೆ. 

ಬ್ರಿಟನ್ ಮತ್ತು ಇತರ ಮಿತ್ರರಾಷ್ಟ್ರಗಳಿಂದ ರಕ್ಷಣಾತ್ಮಕ ನೆರವು ಉಕ್ರೇನ್(Ukraine) ತಲುಪುವುದನ್ನು ಖಚಿತಪಡಿಸಿಕೊಳ್ಳಲು ತಾನು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಜಾನ್ಸನ್ ತಿಳಿಸಿದ್ದಾರೆ.

ಇದನ್ನೂ ಓದಿ : ಉಕ್ರೇನ್ ವಿಷಯದಲ್ಲಿ ಭಾರತ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿರುವುದೇಕೆ?

ಪ್ರಾದೇಶಿಕ ಸರ್ಕಾರದ ಪ್ರಕಾರ, ದಕ್ಷಿಣ ಉಕ್ರೇನ್‌ನಲ್ಲಿರುವ ಬರ್ಡಿಯಾನ್ಸ್ಕ್ ನಗರವನ್ನು ಸೋಮವಾರ ಬೆಳಿಗ್ಗೆ ರಷ್ಯಾ()ದ ಪಡೆಗಳು ವಶಪಡಿಸಿಕೊಂಡಿವೆ. ಉಕ್ರೇನಿಯನ್ ಸೇನೆ(Russian Troops)ಯು ಕೈವ್‌ನಲ್ಲಿನ ಪರಿಸ್ಥಿತಿ ಇನ್ನೂ ತನ್ನ ನಿಯಂತ್ರಣದಲ್ಲಿದೆ ಎಂದು ಸೋಮವಾರ ಹೇಳಿದೆ.

ಇತ್ತೀಚಿನ ಬೆಳವಣಿಗೆಯ ಪ್ರಕಾರ, ಸೋಮವಾರ ಬೆಲಾರಸ್‌ನ ಗೊಮೆಲ್ ಪ್ರದೇಶದಲ್ಲಿ ರಷ್ಯಾದ ಕಡೆಯ ಮಾತುಕತೆಗಾಗಿ ಉಕ್ರೇನಿಯನ್ ನಿಯೋಗ(Ukrainian Delegation)ವು ಸ್ಥಳಕ್ಕೆ ಆಗಮಿಸಿದೆ ಎಂದು ಸ್ಪುಟ್ನಿಕ್ ವರದಿ ಮಾಡಿದೆ.

ಇದನ್ನೂ ಓದಿ : Video Viral:ಉಕ್ರೇನ್ ಬಂಕರ್‌ನಲ್ಲಿ ಅಡಗಿರುವ ಭಾರತೀಯ ವಿದ್ಯಾರ್ಥಿ.. ಸಾಕು ನಾಯಿ ಜತೆ ಸ್ಥಳಾಂತರಕ್ಕೆ ಮನವಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News