Double Hike In LPG Price! ಇಲ್ಲಿ ಸಿಲಿಂಡರ್ ಮೌಲ್ಯ 2657 ರೂ., 1 ಲೀ. ಹಾಲಿನ ಬೆಲೆ 1195ರೂ.

Double Hike In LPG Price: ಇಲ್ಲಿನ ಸರ್ಕಾರ ಇತ್ತೀಚೆಗೆ ಅಗತ್ಯ ವಸ್ತುಗಳ ಬೆಲೆ ಮಿತಿಯನ್ನು ತೆಗೆದುಹಾಕುವುದಾಗಿ ಘೋಷಿಸಿದೆ, ನಂತರ ಎಲ್‌ಪಿಜಿಯ ಚಿಲ್ಲರೆ ಬೆಲೆಗಳು ಸುಮಾರು 90 ಪ್ರತಿಶತದಷ್ಟು ಹೆಚ್ಚಾಗಿದೆ. ಈ ಅನುಕ್ರಮದಲ್ಲಿ, ಈಗ ಎಲ್‌ಪಿಜಿ ಅನಿಲದ ಬೆಲೆ ಪ್ರತಿ ಸಿಲಿಂಡರ್‌ಗೆ 2657 ರೂ. ತಲುಪಿದೆ.   

Written by - Yashaswini V | Last Updated : Oct 13, 2021, 10:43 AM IST
  • ಅಗತ್ಯ ವಸ್ತುಗಳ ಬೆಲೆ ಮಿತಿಯನ್ನು ಸರ್ಕಾರ ರದ್ದುಪಡಿಸಿದೆ
  • ಇದರ ನಂತರ, ಪ್ರತಿ ಸಿಲಿಂಡರ್ ದರ 2,657 ರೂ. ತಲುಪಿದೆ
  • ಬೆಲೆ ಏರಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜನರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ
Double Hike In LPG Price! ಇಲ್ಲಿ ಸಿಲಿಂಡರ್ ಮೌಲ್ಯ 2657 ರೂ., 1 ಲೀ. ಹಾಲಿನ ಬೆಲೆ  1195ರೂ. title=
LPG Price almost Double In Sri lanka

ನವದೆಹಲಿ: Double Hike In LPG Price- ಹಣದುಬ್ಬರದ ಪರಿಣಾಮ ಭಾರತದಲ್ಲಿ ಮಾತ್ರವಲ್ಲ, ಇತರ ದೇಶಗಳಲ್ಲೂ ಸದ್ದು ಮಾಡುತ್ತಿದೆ. ಭಾರತದಲ್ಲಿ ಎಲ್‌ಪಿಜಿಯ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ಆದರೆ ಭಾರತದಲ್ಲಿ ಮಾತ್ರವಲ್ಲ ನೆರೆಯ ದೇಶಗಳಲ್ಲೂ ಎಲ್‌ಪಿಜಿ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ವಾಸ್ತವವಾಗಿ, ನಮ್ಮ ನೆರೆಯ ದೇಶ ಶ್ರೀಲಂಕಾದಲ್ಲಿ ಎಲ್‌ಪಿಜಿಯ ಬೆಲೆ ಬಹುತೇಕ ದುಪ್ಪಟ್ಟಾಗಿದೆ.

ವಾಸ್ತವವಾಗಿ, ಇಲ್ಲಿನ ಸರ್ಕಾರ ಇತ್ತೀಚೆಗೆ ಅಗತ್ಯ ವಸ್ತುಗಳ ಬೆಲೆ ಮಿತಿಯನ್ನು ತೆಗೆದುಹಾಕುವುದಾಗಿ ಘೋಷಿಸಿದೆ, ನಂತರ ಎಲ್‌ಪಿಜಿಯ (LPG) ಚಿಲ್ಲರೆ ಬೆಲೆಗಳು ಸುಮಾರು 90 ಪ್ರತಿಶತದಷ್ಟು ಹೆಚ್ಚಾಗಿದೆ. ಈ ಅನುಕ್ರಮದಲ್ಲಿ, ಈಗ ಎಲ್‌ಪಿಜಿ ಅನಿಲದ ಬೆಲೆ ಪ್ರತಿ ಸಿಲಿಂಡರ್‌ಗೆ 2657 ರೂ. ತಲುಪಿದೆ. ಶ್ರೀಲಂಕಾದಲ್ಲಿನ ಅಡುಗೆ ಅನಿಲ ದರಗಳಿಗೆ ಹೋಲಿಸಿದರೆ 14.2 ಕೆಜಿ ದೇಶೀಯ ಎಲ್‌ಪಿಜಿ ಸಿಲಿಂಡರ್ ಭಾರತದಲ್ಲಿ ಇನ್ನೂ 1000 ರೂ.ಗಿಂತ ಕಡಿಮೆ ಇದೆ.

ಇದನ್ನೂ ಓದಿ- ಚೀನಾದೊಂದಿಗೆ 13 ನೇ ಸುತ್ತಿನ ಮಿಲಿಟರಿ ಮಾತುಕತೆ ನಡೆಸಿದ ಭಾರತ

ಶ್ರೀಲಂಕಾ (Srilanka) ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ವಿದೇಶಿ ವಿನಿಮಯ ಖಾಲಿಯಾಗದಂತೆ ತಡೆಯಲು ಆಮದುಗಳ ಮೇಲೆ ನಿರ್ಬಂಧ ಹೇರಿದರು. ಅಗತ್ಯ ವಸ್ತುಗಳ ಮೇಲಿನ ಬೆಲೆ ನಿಯಂತ್ರಣವನ್ನು ತೆಗೆದುಹಾಕಲು ಸರ್ಕಾರ ನಿರ್ಧರಿಸಿದೆ. ಇದರೊಂದಿಗೆ ದರಗಳು ಗಗನಕ್ಕೇರಿವೆ. ಗ್ಯಾಸ್ ಸಿಲಿಂಡರ್ ಮಾತ್ರವಲ್ಲದೆ ಇತರ ವಸ್ತುಗಳ ಬೆಲೆಯೂ ಕೂಡ ಆಕಾಶ ಮುಟ್ಟುತ್ತಿದೆ.  

ಪ್ರತಿ ಸಿಲಿಂಡರ್‌ಗೆ 2657 ರೂ.:
ಸ್ಟ್ಯಾಂಡರ್ಡ್ ಡೊಮೆಸ್ಟಿಕ್ ಎಲ್‌ಪಿಜಿ ಸಿಲಿಂಡರ್ (12.5 ಕೆಜಿ) ಕಳೆದ ಶುಕ್ರವಾರ ಶ್ರೀಲಂಕಾದಲ್ಲಿ 1400 ರೂ. ಗಳಿಗೆ ಲಭ್ಯವಿತ್ತು. ಆದರೆ, ಈಗ ಅದು 1,257 ರೂ.ಗಳಷ್ಟು ಏರಿಕೆ ಆಗಿದ್ದು ಪ್ರತಿ ಸಿಲಿಂಡರ್‌ಗೆ 2,657 ರೂ. ಪಾವತಿಸಬೇಕಾಗಿದೆ. ಇದಲ್ಲದೇ, ಒಂದು ಲೀಟರ್ ಹಾಲಿನ ಬೆಲೆ ಕೂಡ ದುಬಾರಿಯಾಗಿದೆ. ಪ್ರತಿ ಲೀಟರ್ ಹಾಲು ಈಗ 250 ರೂ. ಅಧಿಕವಾಗಿದ್ದು 1,195 ರೂ.ಗೆ ಏರಿಕೆಯಾಗಿದೆ. ಅದೇ ರೀತಿ, ಗೋಧಿ ಹಿಟ್ಟು, ಸಕ್ಕರೆ ಮತ್ತು ಸಿಮೆಂಟ್‌ನಂತಹ ಇತರ ಅಗತ್ಯ ವಸ್ತುಗಳ ಬೆಲೆಯಲ್ಲಿಯೂ ಕೂಡ ಭಾರೀ ಏರಿಕೆ ಕಂಡುಬಂದಿದೆ. 

ಇದನ್ನೂ ಓದಿ- Covid-19&Flu: Corona ಆತಂಕದ ನಡುವೆಯೇ ಎದುರಾದ ಹೊಸ ಅಪಾಯ, Twindemic ನಿಂದ ಪಾರಾಗುವುದು ಕಷ್ಟ!

ಎಲ್‌ಪಿಜಿ ದರ ಏರಿಕೆಗೆ ಅಕ್ರೋಶ ವ್ಯಕ್ತಪಡಿಸಿದ ಜನ:
ಎಲ್‌ಪಿಜಿ ಬೆಲೆಯಲ್ಲಿನ ದಾಖಲೆಯ ಹೆಚ್ಚಳವು ಇಲ್ಲಿನ ಜನರಲ್ಲಿ ಆಕ್ರೋಶವನ್ನು ಸೃಷ್ಟಿಸಿತು. ಬೆಲೆಯನ್ನು ಹಿಂಪಡೆಯುವ ಬೇಡಿಕೆಯೊಂದಿಗೆ ಜನರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. "ಕ್ಯಾಬಿನೆಟ್ ಹಾಲಿನ ಪುಡಿ, ಗೋಧಿ ಹಿಟ್ಟು, ಸಕ್ಕರೆ ಮತ್ತು ದ್ರವೀಕೃತ ಪೆಟ್ರೋಲಿಯಂ ಅನಿಲದ ಬೆಲೆ ನಿಯಂತ್ರಣವನ್ನು ತೆಗೆದುಹಾಕಲು ನಿರ್ಧರಿಸಿದೆ. ಇದು ಪೂರೈಕೆಯನ್ನು ಹೆಚ್ಚಿಸುತ್ತದೆ ಎಂಬ ಭರವಸೆಯೇ ಇದರ ಹಿಂದಿನ ಕಾರಣ. ಬೆಲೆಗಳು ಶೇಕಡಾ 37 ರಷ್ಟು ಹೆಚ್ಚಾಗಬಹುದು, ಆದರೆ ವಿತರಕರು ಅನಗತ್ಯ ಲಾಭ ಗಳಿಸಬಾರದು ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಗ್ರಾಹಕ ಸಂರಕ್ಷಣಾ ಪ್ರಾಧಿಕಾರದ ವಕ್ತಾರರು ತಿಳಿಸಿದ್ದಾರೆ.

ಗಮನಾರ್ಹವಾಗಿ, ಅಧ್ಯಕ್ಷ ಗೋಟಬಯ ರಾಜಪಕ್ಸೆ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಶ್ರೀಲಂಕಾ ಸರ್ಕಾರ ಗುರುವಾರ ರಾತ್ರಿ ಹಾಲಿನ ಪುಡಿ, ಗ್ಯಾಸ್, ಗೋಧಿ ಹಿಟ್ಟು ಮತ್ತು ಸಿಮೆಂಟ್ ಬೆಲೆ ಮಿತಿಯನ್ನು ರದ್ದುಗೊಳಿಸಲು ನಿರ್ಧರಿಸಿತು. ಅಂದಿನಿಂದ, ಬೆಲೆಗಳಲ್ಲಿ ನಿರಂತರ ಏರಿಕೆ ಕಂಡುಬಂದಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News