Pakistan ಚಿತ್ರಣವನ್ನು ಬದಲಾಯಿಸಲು ಪತ್ರಕರ್ತರ ಮೊರೆ ಹೋದ ಪಾಕಿಸ್ತಾನ, ನೀಡಿದೆ ಈ ದೊಡ್ಡ ಜವಾಬ್ದಾರಿ

ISI: ಪಾಕಿಸ್ತಾನದ ISI ದೇಶದ 9 ಜನ ಪತ್ರಕರ್ತರ ಪ್ಯಾನೆಲ್ ವೊಂದನ್ನು ರಚಿಸಿದ್ದು, ವಿಶ್ವಾದ್ಯಂತ ಪಾಕಿಸ್ತಾನದ ಕುರಿತಾದ ಚಿತ್ರಣವನ್ನು ಬದಲಾಯಿಸುವ ಜವಾಬ್ದಾರಿ ನೀಡಲಾಗಿದೆ. ಕೇವಲ ಈ ಪತ್ರಕರ್ತರು ಮಾತ್ರ ವಿದೇಶಿ ಮಾಧ್ಯಮಗಳಲ್ಲಿ ಪ್ಯಾನೆಲ್ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.

Written by - Nitin Tabib | Last Updated : Aug 27, 2021, 04:46 PM IST
  • ದೇಶದ 50 ಸಂಸದರಿಗೆ ರಾವಲ್ಪಿಂಡಿ ಮುಖ್ಯಾಲಯಕ್ಕೆ ಬುಲಾವ್ ಕಳುಹಿಸಿದ ಪಾಕ್ ISI
  • ರಾವಲ್ಪಿಂಡಿಯಲ್ಲಿ ನಡೆಯಲಿರುವ ಸಭೆಯಲ್ಲಿ ISI ಅಧಿಕಾರಿಗಳೂ ಕೂಡ ಶಾಮೀಲಾಗಲಿದ್ದಾರೆ.
  • ಜೊತೆಗೆ ದೇಶದ 9 ಪತ್ರಕರ್ತರಿಗೆ ಪಾಕ್ ಇಮೇಜ್ ಸುಧಾರಿಸುವ ಜವಾಬ್ದಾರಿ.
Pakistan ಚಿತ್ರಣವನ್ನು ಬದಲಾಯಿಸಲು ಪತ್ರಕರ್ತರ ಮೊರೆ ಹೋದ ಪಾಕಿಸ್ತಾನ, ನೀಡಿದೆ ಈ ದೊಡ್ಡ ಜವಾಬ್ದಾರಿ title=
Imran Khan (File Photo)

ಇಸ್ಲಾಮಾಬಾದ್: ISI - ಆಫ್ಘಾನಿಸ್ತಾನದಲ್ಲಿ (Afghanistan) ಉಗ್ರಸಂಘಟನೆಗಳೊಂದಿಗೆ ಸಂಬಂಧ ಹಾಗೂ ವಿಶ್ವಾದ್ಯಂತ ಆಗುತ್ತಿರುವ ದೇಶದ ಅವಮಾನವನ್ನು ತಡೆಯಲು ಪಾಕಿಸ್ತಾನ ಒಂದು ವಿಶೇಷ ಪ್ಯಾನೆಲ್ ರಚಿಸುತ್ತಿದ್ದು, ಈ ಪ್ಯಾನಲ್ ನಲ್ಲಿ 9 ಜನ ಪತ್ರಕರ್ತರು ಇರಲಿದ್ದಾರೆ. ಇದಲ್ಲದೆ ಪಾಕ್ ಸೇನೆಯು (Pakistan Army) ದೇಶದ ಒಟ್ಟು 50 ಸಂಸದರನ್ನು ರಾವಲ್ಪಿಂಡಿಯ ಸೇನಾ ಕೇಂದ್ರ ಕಚೇರಿಗೆ ಬರಮಾಡಿಕೊಂಡಿದೆ. ಇದರಲ್ಲಿ ಕೆಲ ಮಾಜಿ ಸಂಸದರು ಕೂಡ ಶಾಮೀಲಾಗಿದ್ದಾರೆ.

ಇದನ್ನೂ ಓದಿ- Kabul Airport Attack: ಈ ಗಾಯವನ್ನು ನಾವು ಮರೆಯುವುದಿಲ್ಲ, ಇದಕ್ಕೆ ಕಾರಣರಾದವರನ್ನು ಹುಡುಕಿ ಕೊಲ್ಲುತ್ತೇವೆ- ಅಮೇರಿಕ ಅಧ್ಯಕ್ಷ ಜೋ ಬಿಡೆನ್

ಈ ಸಭೆಯಲ್ಲಿ ISI ಅಧಿಕಾರಿಗಳೂ ಕೂಡ ಇರಲಿದ್ದಾರೆ
ರಾವಲ್ಪಿಂಡಿಯ ಸೇನಾ ಮುಖ್ಯಾಲಯದಲ್ಲಿ 50 ಸಂಸದರ ಜೊತೆಗೆ ಮುಂದಿನ ವಾರ ನಡೆಯಬೇಕಿರುವ ಸಭೆಯಲ್ಲಿ ISI ಅಧಿಕಾರಿಗಳು ಕೂಡ ಶಾಮೀಲಾಗಲಿದ್ದಾರೆ ಎನ್ನಲಾಗಿದೆ. ಇದಲ್ಲದೆ ಸಭೆಯಲ್ಲಿ ಇಸಿ ಪೆರೋಲ್ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಕೆಲ ಪತ್ರಕರ್ತರಿಗೂ ಕೂಡ ಬುಲಾವ್ ಕಳುಹಿಸಲಾಗಿದೆ. ವಿಶ್ವಾದ್ಯಂತ ದೇಶದ ಅವಮಾನ ನಡೆಯುತ್ತಿದ್ದು, ಪಾಕ್ ಆರ್ಮಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಆರ್ಮಿ ಹಾಳಾಗುತ್ತಿರುವ ದೇಶದ ಚಿತ್ರಣವನ್ನು ಸುಧಾರಿಸಲು ಹಾಗೂ ವಿಶ್ವದಲ್ಲಿ ಪಾಕ್ ಗೆ (Pakistan) ಸಂಬಂಧಿಸಿರುವ ವಿಚಾರಗಳನ್ನು ಬಳಲಾವಣೆ ಮಾಡಲು ಬಯಸುತ್ತಿದೆ.

ಇದನ್ನೂ ಓದಿ- Kabul Airport: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮೂರನೇ ಸ್ಫೋಟ, 10 ಯುಎಸ್ ಕಮಾಂಡೋಗಳು ಸೇರಿದಂತೆ 64 ಸಾವು

ಇಮೇಜ್ ಸುಧಾರಣೆಗೆ ಪತ್ರಕರ್ತರಿಗೆ ಜವಾಬ್ದಾರಿ
ಪಾಕಿಸ್ತಾನದ ಐಎಸ್‌ಐ ದೇಶದ 9 ಪತ್ರಕರ್ತರ  (Journalists)ಸಮಿತಿಯನ್ನು ರಚಿಸಿದ್ದು, ವಿಶ್ವದಾದ್ಯಂತ ಪಾಕಿಸ್ತಾನದ ಇಮೇಜ್ ಸುಧಾರಿಸುವ ಜವಾಬ್ದಾರಿಯನ್ನು ಅವರಿಗೆ ನೀಡಿದೆ. ಇನ್ಮುಂದೆ ಈ ಪತ್ರಕರ್ತರಿಗಷ್ಟೇ ವಿದೇಶಿ ಮಾಧ್ಯಮದೊಂದಿಗೆ ಮಾತನಾಡಲು ಅಥವಾ ಪ್ಯಾನೆಲ್‌ನಲ್ಲಿ ಕುಳಿತುಕೊಳ್ಳಲು ಆವಕಾಶ ಕಲ್ಪಿಸಲಾಗುವುದು ಎನ್ನಲಾಗಿದೆ. ಇದಲ್ಲದೇ, ಸಭೆಗೆ ಕರೆದ 50 ಸಂಸದರಿಗೆ ಮಾತ್ರ ಅಫ್ಘಾನಿಸ್ತಾನ ಅಥವಾ ತಾಲಿಬಾನ್ ಕುರಿತು ಟಿವಿ ಚರ್ಚೆಗಳಲ್ಲಿ ಮಾತನಾಡಲು ಅಥವಾ ಭಾಗವಹಿಸಲು ಅವಕಾಶ ನೀಡಲಾಗುವುದು ಎನ್ನಲಾಗಿದೆ.

ಇದನ್ನೂ ಓದಿ-ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜೈರನ್ನು ಗೃಹ ಬಂಧನದಲ್ಲಿರಿಸಿದ ತಾಲಿಬಾನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News