ಇದು ಗೊರಿಲ್ಲಾನಾ ಅಥವಾ ಕಾಗೆನಾ? ನೀವೂ ಕನ್ಫ್ಯೂಸ್ ಆಗ್ಬೇಡಿ, Video ನೋಡಿ!

ಜಪಾನ್‌ನ ನಾಗೋಯಾ ಎಂಬಲ್ಲಿನ ಈ ವೀಡಿಯೋ ನೋಡಿ, ಅದರಲ್ಲಿರುವುದು ಕಾಗೆಯೋ ಅಥವಾ ಗೊರಿಲ್ಲಾನೋ ಎಂದು ಅಲ್ಲಿನ ಜನರೇ ಗೊಂದಲಕ್ಕೀಡಾದ ಘಟನೆ ನಡೆದಿದೆ.

Last Updated : Jun 26, 2019, 12:32 PM IST
ಇದು ಗೊರಿಲ್ಲಾನಾ ಅಥವಾ ಕಾಗೆನಾ? ನೀವೂ ಕನ್ಫ್ಯೂಸ್ ಆಗ್ಬೇಡಿ, Video ನೋಡಿ! title=

ನವದೆಹಲಿ: ನೀವು ಎಂದಾದರೂ ಗೊರಿಲ್ಲಾ ನೋಡಿದ್ದೀರಾ? ನಿಜವಾಗಿ ಅಲ್ಲದಿದ್ದರೂ ಟಿವಿಯಲ್ಲಂತೂ ನೋಡೇ ಇರ್ತೀರ... ಒಂದು ವೇಳೆ ನಾನೇನಾದರೂ ಕಾಗೆ ನೋಡಿದ್ದೀರಾ? ಅಂತ ಕೇಳಿದ್ರೆ 'ಅದ್ಯಾವ ದೊಡ್ಡ ವಿಷಯ, ದಿನಾ ನೋಡ್ತೀವಲ್ಲ ಅಂತಾ ಹೇಳೋದು ಖಂಡಿತ. ಆದರೆ, ಈ ವೀಡಿಯೋ ನೋಡಿದ್ರೆ, ಅದರಲ್ಲಿರೋದು ಕಾಗೆಯೋ ಅಥವಾ ಗೊರಿಲ್ಲಾವೋ ಅನ್ನೋದು ನಿಮಗೇ ತಿಳಿಯುತ್ತೆ...

ಜಪಾನ್‌ನ ನಾಗೋಯಾ ಎಂಬಲ್ಲಿನ ಈ ವೀಡಿಯೋ ನೋಡಿ, ಅದರಲ್ಲಿರುವುದು ಕಾಗೆಯೋ ಅಥವಾ ಗೊರಿಲ್ಲಾನೋ ಎಂದು ಅಲ್ಲಿನ ಜನರೇ ಗೊಂದಲಕ್ಕೀಡಾದ ಘಟನೆ ನಡೆದಿದೆ. ಅದು ಮೇಲೆ ಹಾರಿದಾಗಲೇ ಕಾಗೆ ಎಂಬುದು ಮನವರಿಕೆಯಾಗಿದೆ. ಸದ್ಯ ಆ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

Trending News