ಈ ವಿಷಕಾರಿ ಹಾವಿನ ರಕ್ತ ಇಷ್ಟೆಲ್ಲ ಕಾಯಿಲೆಗೆ ಮದ್ದು.. ಸೌಂದರ್ಯದ ಜೊತೆ ಆರೋಗ್ಯಕ್ಕಾಗಿ ಇಲ್ಲಿನ ಜನ ಕುಡಿಯೋದು ಇದನ್ನೇ!!

Health benefits of snake blood: ಇಲ್ಲೊಂದು ಕಡೆ ಹುಡುಗಿಯರು ಸೌಂದರ್ಯ ಮತ್ತು ಆರೋಗ್ಯಕ್ಕಾಗಿ ಈ ವಿಷಕಾರಿ ಹಾವಿನ ರಕ್ತವನ್ನು ಕುಡಿಯುತ್ತಾರಂತೆ. 

Written by - Chetana Devarmani | Last Updated : Mar 26, 2024, 03:50 PM IST
  • ಹಾವು ಭೂಮಿಯ ಮೇಲಿನ ಅತ್ಯಂತ ವಿಷಕಾರಿ ಜೀವಿ
  • ಸೌಂದರ್ಯ ವೃದ್ಧಿಸುತ್ತದೆ ಹಾವಿನ ರಕ್ತ
  • ಆರೋಗ್ಯಕ್ಕಾಗಿ ಇಲ್ಲಿನ ಜನ ಕುಡಿಯೋದು ಈ ಹಾವಿನ ರಕ್ತ
ಈ ವಿಷಕಾರಿ ಹಾವಿನ ರಕ್ತ ಇಷ್ಟೆಲ್ಲ ಕಾಯಿಲೆಗೆ ಮದ್ದು.. ಸೌಂದರ್ಯದ ಜೊತೆ ಆರೋಗ್ಯಕ್ಕಾಗಿ ಇಲ್ಲಿನ ಜನ ಕುಡಿಯೋದು ಇದನ್ನೇ!!  title=

Snake blood health benefits: ಹಾವು ಭೂಮಿಯ ಮೇಲಿನ ಅತ್ಯಂತ ಅಪಾಯಕಾರಿ ಮತ್ತು ವಿಷಕಾರಿ ಜೀವಿ ಎಂದು ಪರಿಗಣಿಸಲಾಗಿದೆ. ಈ ವಿಷಕಾರಿ ಹಾವನ್ನು ನೋಡಿದರೆ ಅನೇಕ ಜನರು ಭಯಭೀತರಾಗುತ್ತಾರೆ. ಆದರೆ ಇಲ್ಲೊಂದು ಕಡೆ ಹುಡುಗಿಯರು ಸೌಂದರ್ಯ ಮತ್ತು ಆರೋಗ್ಯಕ್ಕಾಗಿ ಈ ವಿಷಕಾರಿ ಹಾವಿನ ರಕ್ತವನ್ನು ಕುಡಿಯುತ್ತಾರಂತೆ. 

ಇಂಡೋನೇಷಿಯನ್ನರು ಹಾವಿನ ರಕ್ತವನ್ನು ಕುಡಿಯುತ್ತಾರೆ. ದೇಹವನ್ನು ಫಿಟ್ ಆಗಿಡಲು ಮತ್ತು ಸುಂದರ ತ್ವಚೆ ಪಡೆಯಲು ಈ ದೇಶದ ಜನರು ಹಾವಿನ ರಕ್ತವನ್ನು ಕುಡಿಯುತ್ತಾರೆ. ಹಾವಿನ ರಕ್ತ ಕುಡಿಯಲು ಮಾರುಕಟ್ಟೆಯಲ್ಲಿ ಜನಜಂಗುಳಿಯೇ ನೆರೆದಿರುತ್ತದಂತೆ. 
ಜಕಾರ್ತಾದಲ್ಲಿ ಹಾವಿನ ರಕ್ತ ಕುಡಿದಿದೆ.

ಇಲ್ಲಿವೆ ಹಾವಿನ ರಕ್ತವನ್ನು ಮಾರುವ ಅಂಗಡಿಗಳು

ಇಂಡೋನೇಷ್ಯಾದ ರಾಜಧಾನಿ ಜಕಾರ್ತದಲ್ಲಿ ಹಾವಿನ ರಕ್ತ ಕುಡಿಯುವುದು ಬಹಳ ಸಾಮಾನ್ಯ. ಹಾವಿನ ರಕ್ತವನ್ನು ಮಾರುವ ಅಂಗಡಿಗಳು ಇಲ್ಲಿ ಎಲ್ಲೆಂದರಲ್ಲಿ ಕಂಡುಬರುತ್ತವೆ. ಇಲ್ಲಿನ ಜನರು ಬಹಳ ಸಂತೋಷದಿಂದ ಹಾವಿನ ರಕ್ತವನ್ನು ಕುಡಿಯುತ್ತಾರೆ.

ಇದನ್ನೂ ಓದಿ: ಇದನ್ನು ತಿಂದ ತಕ್ಷಣ ಹೆಚ್ಚುತ್ತದೆ ಇನ್ಸುಲಿನ್ ! ನಾರ್ಮಲ್ ಆಗಿರುತ್ತದೆ Blood Sugar

ಜಕಾರ್ತದಲ್ಲಿ ಹಾವಿನ ರಕ್ತಕ್ಕೆ ಭಾರೀ ಬೇಡಿಕೆ ಇದೆ. ಇದರಿಂದಾಗಿ ಇಲ್ಲಿ ಪ್ರತಿದಿನ ಸಾವಿರಾರು ಹಾವುಗಳನ್ನು ಕತ್ತರಿಸಲಾಗುತ್ತದೆ. ಹಾವಿನ ರಕ್ತವನ್ನು ಕುಡಿದ ಬಳಿಕ 3-4 ಗಂಟೆಗಳ ಕಾಲ ಚಹಾ ಅಥವಾ ಕಾಫಿ ಕುಡಿಯಬಾರದು. ಇದರಿಂದ ರಕ್ತವು ದೇಹಕ್ಕೆ ಪ್ರವೇಶಿಸಿ ತನ್ನ ಕೆಲಸವನ್ನು ಮಾಡುತ್ತದೆ. ಈ ಅಂಗಡಿಗಳಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೂ ಹಾವಿನ ರಕ್ತ ಕುಡಿಯಲು ಜನಜಂಗುಳಿ ನೆರೆದಿರುತ್ತದೆ.

ಹಾವಿನ ರಕ್ತ ಕುಡಿಯಲು ಕಾರಣ

ಈ ದೇಶದ ಜನರು ಆರೋಗ್ಯವಾಗಿರಲು ಹಾವಿನ ರಕ್ತವನ್ನು ಕುಡಿಯುತ್ತಾರೆ. ಮಹಿಳೆಯರು ತಮ್ಮ ಸೌಂದರ್ಯವನ್ನು ಹೆಚ್ಚಿಸಲು ಹಾವಿನ ರಕ್ತವನ್ನು ಕುಡಿಯುತ್ತಾರೆ. ಹಾವಿನ ರಕ್ತವನ್ನು ಕುಡಿಯುವುದರಿಂದ ಚರ್ಮವು ಹೊಳೆಯುತ್ತದೆ ಮತ್ತು ದೇಹವು ಆರೋಗ್ಯಕರವಾಗಿರುತ್ತದೆ ಎಂಬುದು ಈ ಜನರ ನಂಬಿಕೆಯಾಗಿದೆ.

ಇಂಡೋನೇಷ್ಯಾದಲ್ಲಿ ಹಾವಿನ ರಕ್ತವನ್ನು ಕುಡಿಯುವ ಸಂಪ್ರದಾಯವು ಬಹಳ ಹಳೆಯದು. ಇಲ್ಲಿ ಹಾವುಗಳನ್ನೂ ತಿನ್ನುತ್ತಾರೆ. ಇಲ್ಲಿನ ಜನರು ಹಾವುಗಳನ್ನು ನಿಂಬೆ ಹುಲ್ಲಿನೊಂದಿಗೆ ಕುದಿಸಿ ಅಥವಾ ಹುರಿದು ತಿನ್ನುತ್ತಾರೆ. ಹಾವಿನ ರಕ್ತವನ್ನು ಅಕ್ಕಿ ವೈನ್‌ನೊಂದಿಗೆ ಬೆರೆಸಿ ಸೇವಿಸುತ್ತಾರೆ.

ಇದನ್ನೂ ಓದಿ: ಹಾಲಿನ ಜೊತೆ ಗುಲ್ಕಂದ್‌ ಬೆರೆಸಿ ಕುಡಿಯುವುದರ ಆರೋಗ್ಯ ಪ್ರಯೋಜನ

(ಸೂಚನೆ: ಹಾವಿನ ರಕ್ತವನ್ನು ಯಾವುದೇ ಅರಿವಿಲ್ಲದೇ ಕುಡಿಯುವುದು ಜೀವಕ್ಕೆ ಅಪಾಯಕಾರಿ. ಈ ಸುದ್ದಿ ಕೇವಲ ಮಾಹಿತಿಗಾಗಿ ಮಾತ್ರ ನೀಡಲಾಗಿದೆ. ಈ ರೀತಿಯ ಪ್ರಯೋಗಗಳನ್ನು ನಿಮ್ಮ ಮನೆಯಲ್ಲಿ ಮಾಡುವುದು ಅಪಾಯ ತಂದೊಡ್ಡಬಹುದು. ಇದು ಸಾಮಾನ್ಯ ಮಾಹಿತಿಯನ್ನು ಆಧರಿಸಿದ್ದು, ZEE Kannada News ಯಾವುದೇ ರೀತಿಯಲ್ಲೂ ಹೊಣೆಯಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News