ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ಭಾರತವು ಫ್ರಾನ್ಸ್ ಜೊತೆಗಿದೆ: ನರೇಂದ್ರ ಮೋದಿ

ಫ್ರಾನ್ಸ್ ನಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಖಂಡಿಸಿದ್ದಾರೆ.ಸಂತ್ರಸ್ತ ಪರಿವಾರಕ್ಕೆ ತಮ್ಮ ಸಂತಾಪ ವ್ಯಕ್ತ ಪಡಿಸಿದ್ದಾರೆ.ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ, ಭಯೋತ್ಪಾದನೆಯ ವಿರುದ್ಧದ ಸಮರದಲ್ಲಿ (fight against terrorism) ಭಾರತವು  ಫ್ರಾನ್ಸ್ ಜೊತೆಗಿದೆ ಎಂದು ಭರವಸೆ ನೀಡಿದ್ದಾರೆ. 

Last Updated : Oct 30, 2020, 01:52 PM IST
ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ಭಾರತವು  ಫ್ರಾನ್ಸ್ ಜೊತೆಗಿದೆ: ನರೇಂದ್ರ ಮೋದಿ title=
file photo

ನವದೆಹಲಿ : ಫ್ರಾನ್ಸ್ ನಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಖಂಡಿಸಿದ್ದಾರೆ.ಸಂತ್ರಸ್ತ ಪರಿವಾರಕ್ಕೆ ತಮ್ಮ ಸಂತಾಪ ವ್ಯಕ್ತ ಪಡಿಸಿದ್ದಾರೆ.ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ, ಭಯೋತ್ಪಾದನೆಯ ವಿರುದ್ಧದ ಸಮರದಲ್ಲಿ (fight against terrorism) ಭಾರತವು  ಫ್ರಾನ್ಸ್ ಜೊತೆಗಿದೆ ಎಂದು ಭರವಸೆ ನೀಡಿದ್ದಾರೆ. 

ಚೀನಾ-ಪಾಕಿಸ್ತಾನದ ವಿರುದ್ಧ ಭಾರತದ ಜೊತೆಗೆ ನಿಂತಿದೆ ಈ ಪ್ರಬಲ ದೇಶ

ಫ್ರಾನ್ಸ್ ನಲ್ಲಿ ಮತ್ತೆ ಮಹಿಳೆಯ ಶಿರಚ್ಛೇದನ:

ಫ್ರಾನ್ಸ್ ನಲ್ಲಿ ಗುರುವಾರವೂ ಶಂಕಿತ ಭಯೋತ್ಪಾದನಾ ದಾಳಿ (terrorist attack) ನಡೆದಿದೆ. ಚಾಕು ಝಳಪಿಸುತ್ತಾ ಬಂದ ಯುವಕನೊಬ್ಬ ಮಹಿಳೆಯ ಶಿರಚ್ಛೇದನ ಮಾಡಿ, ಇತರ ಇಬ್ಬರನ್ನು ಹತ್ಯೆ ಗೈದಿದ್ದಾನೆ. ಈ ಹಿನ್ನೆಲೆಯಲ್ಲಿಯೇ ಪ್ರಧಾನಿ ಟ್ವೀಟ್ ಮಾಡಿದ್ದಾರೆ. “ನೈಸ್ ನಲ್ಲಿ  ಚರ್ಚ್ ಒಳಗಡೆ ನಡೆದ ಕ್ರೂರ ದಾಳಿಯೂ ಸೇರಿದಂತೆ, ಫ್ರಾನ್ಸ್ ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದನಾ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಘಟನೆಯಿಂದ ನೊಂದ ಸಂತ್ರಸ್ತರ ಪರಿವಾರಕ್ಕೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಈ ಸಂದರ್ಭದಲ್ಲಿ ಭಾರತವು ಫ್ರಾನ್ಸ್ ಜೊತೆಗಿದೆ” ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಭಾರತಕ್ಕೆ 200 ಮಿಲಿಯನ್ ಯುರೋ ನೆರವು ನೀಡುವುದಾಗಿ ಘೋಷಿಸಿದ ಫ್ರಾನ್ಸ್ 

ಶಂಕಿತ ದಾಳಿಕೋರನ ಹತ್ಯೆ:

ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  ಇವರಲ್ಲಿ ಮಹಿಳೆಯ ಶಿರಚ್ಛೇದನ ಮಾಡಲಾಗಿದೆ.  ವಶಕ್ಕೆ ಪಡೆಯುವ ಕಾರ್ಯಾಚರಣೆ ವೇಳೆ ಪೊಲೀಸ್  ಗುಂಡು ಶಂಕಿತ ದಾಳಿಕೋರನಿಗೆ ತಗುಲಿದೆ. ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. 

ವಿದೇಶಾಂಗ ಇಲಾಖೆಯಿಂದಲೂ ಖಂಡನೆ:

ಬುಧವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದ ಭಾರತದ ವಿದೇಶಾಂಗ  ಇಲಾಖೆ, ಫ್ರೆಂಚ್ ಶಿಕ್ಷಕನ ಶಿರಚ್ಛೇದ ಘಟನೆಯನ್ನು ಖಂಡಿಸಿತ್ತು. ಇದೇ ವೇಳೆ ಫ್ರೆಂಚ್ ಅಧ್ಯಕ್ಷ ಇಮಾನ್ಯುಲ್ ಮಾಕ್ರೋನಿ ವಿರುದ್ಧ ಹಲವರು ಮಾಡಿರುವ ವಯುಕ್ತಿಕ ನಿಂದನಾತ್ಮಕ ಹೇಳಿಕೆಗಳನ್ನು ಬಲವಾಗಿ ಖಂಡಿಸಿತ್ತು.
 

Trending News