How To Check BP At Home: ಎರಡು ಭುಜಗಳಲ್ಲಿನ BP ಅಂತರ ಅಪಾಯದ ಸಂಕೇತವೇ? ತಜ್ಞರು ಹೇಳುವುದೇನು?

Right Procedure To Check Blood Pressure At Home: ಸಾಮಾನ್ಯವಾಗಿ, ರಕ್ತದೊತ್ತಡವನ್ನು ಪರೀಕ್ಷಿಸುವಾಗ, ಜನರು ಒಂದೇ ಕೈಯಿಂದ BP ರೀಡಿಂಗ್ ಪಡೆಯುವ ಮೂಲಕ ತಮ್ಮ ಆರೋಗ್ಯ ಮತ್ತು ಅನಾರೋಗ್ಯದ ಕುರಿತು ತಿಳಿದುಕೊಳ್ಳುತ್ತಾರೆ. ಆದರೆ ರಕ್ತದೊತ್ತಡವನ್ನು ಪರೀಕ್ಷಿಸಲು ಇದು ನಿಜವಾಗಿಯೂ ಸರಿಯಾದ ಮಾರ್ಗವೇ? ರಕ್ತದೊತ್ತಡದ ಬಗ್ಗೆ ನಡೆಸಲಾಗಿರುವ ಈ ಸಂಶೋಧನೆ ನಿಮ್ಮನ್ನೂ ಕೂಡ ಬೆಚ್ಚಿಬೀಳಿಸಲಿದೆ.  

Written by - Nitin Tabib | Last Updated : Jul 10, 2021, 07:33 PM IST
  • ನಮ್ಮ ಎರಡೂ ಭುಜಗಳಲ್ಲಿನ BP ಅಂತರ ಅಪಾಯಕಾರಿಯೇ.
  • ಶಾಸ್ತ್ರಜ್ಞರು ಈ ಕುರಿತು ಹೇಳುವುದೇನು?
  • ಇದು ಏನನ್ನು ಸೂಚಿಸುತ್ತದೆ ಮತ್ತು ಇದಕ್ಕೆ ಮಾಡಬೇಕಾದ ಉಪಾಯವೇನು.
How To Check BP At Home: ಎರಡು ಭುಜಗಳಲ್ಲಿನ BP ಅಂತರ ಅಪಾಯದ ಸಂಕೇತವೇ? ತಜ್ಞರು ಹೇಳುವುದೇನು? title=
Right Procedure To Check Blood Pressure At Home (File Photo)

Right Procedure To Check Blood Pressure At Home: ಸಾಮಾನ್ಯವಾಗಿ, ರಕ್ತದೊತ್ತಡವನ್ನು ಪರೀಕ್ಷಿಸುವಾಗ, ಜನರು ಒಂದೇ ಕೈಯಿಂದ BP ರೀಡಿಂಗ್ ಪಡೆಯುವ ಮೂಲಕ ತಮ್ಮ ಆರೋಗ್ಯ ಮತ್ತು ಅನಾರೋಗ್ಯದ ಕುರಿತು ತಿಳಿದುಕೊಳ್ಳುತ್ತಾರೆ. ಆದರೆ ರಕ್ತದೊತ್ತಡವನ್ನು ಪರೀಕ್ಷಿಸಲು ಇದು ನಿಜವಾಗಿಯೂ ಸರಿಯಾದ ಮಾರ್ಗವೇ? ರಕ್ತದೊತ್ತಡದ ಬಗ್ಗೆ ನಡೆಸಲಾಗಿರುವ ಈ ಸಂಶೋಧನೆ ನಿಮ್ಮನ್ನೂ ಕೂಡ ಬೆಚ್ಚಿಬೀಳಿಸಲಿದೆ.  ಹೌದು, ಈ ಸಂಶೋಧನೆಯಲ್ಲಿ ಎರಡೂ ಕೈಗಳ ರಕ್ತದೊತ್ತಡದಲ್ಲಿ ಭಾರಿ ಅಸಮಾನತೆ ಇದ್ದರೆ, ಅದು ವ್ಯಕ್ತಿಯ ಅಕಾಲಿಕ ಸಾವಿಗೆ (Early Death) ಕಾರಣವಾಗಬಹುದು ಎಂದು ಹೇಳಲಾಗಿದೆ.

ಸುಮಾರು 230 ಜನರ ಮೇಲೆ ನಡೆಸಿರುವ  ಒಂದು ಸಂಶೋಧನೆಯ ಬಳಿಕ ಬ್ರಿಟನ್ ವಿಜ್ಞಾನಿಗಳು ಆ ಜನರಿಗೆ ಅಧಿಕ ರಕ್ತದೊತ್ತಡದ ಕಾಯಿಲೆ ಇದ್ದು, ಅವರ ಎರಡೂ  ಭುಜಗಳ BP ರೀಡಿಂಗ್ ನಲ್ಲಿ ಭಾರಿ ಅಂತರ ಇರುವುದರಿಂದ, ಹೃದ್ರೋಗ, ಆಘಾತ ಅಥವಾ ಬೇರೆ ಯಾವುದೇ ಒಂದು ಕಾರಣದಿಂದ ಅವರ ಅಕಾಲಿಕ ಸಾವು ಸಂಭವಿಸುವ ಸಾಧ್ಯತೆ ಇದೆ ಎಂದಿದ್ದಾರೆ. ಏಕ್ಸ್ಟರ್ ವಿಶ್ವವಿದ್ಯಾಲಯದ ಪೆನಿನ್ಸುಲಾ ಕಾಲೇಜ್ ಆಫ್ ಮೆಡಿಸಿನ್ ಅಂಡ್ ಡೆಂಟಿಸ್ಟ್ರಿ ಸಂಬಂಧಿಸಿದ ಡಾ. ಕ್ಲಾರ್ಕ್ ಅವರು ಈ ಸಂಶೋಧನೆಯ ಮುಖ್ಯ ಸಂಶೋಧಕರಾಗಿದ್ದಾರೆ.

"ಈ ಸಂಶೋಧನೆ ರಕ್ತದೊತ್ತಡವನ್ನು (Blood Pressure) ಪರೀಕ್ಷಿಸುವಾಗ, ಎರಡೂ ಕೈಗಳ ರಕ್ತದೊತ್ತಡವನ್ನು ಪರೀಕ್ಷಿಸಬೇಕು ಎಂದು ಖಚಿತಪಡಿಸುತ್ತದೆ. ಇದೇ ವೇಳೆ ಎರಡೂ ಕೈಗಳ ರಕ್ತದೊತ್ತಡದಲ್ಲಿ ಸ್ವಲ್ಪ ಪ್ರಮಾಣದ ವ್ಯತ್ಯಾಸ ಸಾಮಾನ್ಯವಾಗಿದೆ" ಎಂದು ಬ್ರಿಟಿಶ್ ಹಾರ್ಟ್ ಫೌಂಡೇಶನ್ ನ (British Heart Foundation) ಹಿರಿಯ ಹೃದ್ರೋಗ ನರ್ಸ್ ಮೌರಿನ್ ಟೈಲ್ಬಾಟ್ ಸ್ಪಷ್ಟಪಡಿಸಿದ್ದಾರೆ.

ಬಿಬಿಸಿ ಸುದ್ದಿವಾಹಿನಿಗೆ ನೀಡಿರುವ ತಮ್ಮ ಸಂದರ್ಶನದಲ್ಲಿ ಮಾತನಾಡಿರುವ ಈ ಸಂಶೋಧನೆಯ ಮುಖ್ಯ ಸಂಶೋಧಕ ಕ್ಲಾರ್ಕ್, "ವೈದ್ಯರು ರೋಗಿಗಳ ರಕ್ತದೊತ್ತಡವನ್ನು ಪರೀಕ್ಷಿಸುವಾಗ, ಅವರು ಎರಡೂ ತೋಳುಗಳಿಗೆ ಸೂಚಿಸಲಾದ ರಕ್ತದೊತ್ತಡದ ರಾಷ್ಟ್ರೀಯ ಮಾನದಂಡವನ್ನು ಅನುಸರಿಸಬೇಕು" ಎಂದು ಹೇಳಿದ್ದಾರೆ.

ಇದೇ ವೇಳೆ ಈ ವಿಷಯಕ್ಕೆ ಸಂಬಂಧಿಸಿದಂತೆ ಅಮೆರಿಕದ ಮ್ಯಾಸಚೂಸೆಟ್ಸ್ ಆಸ್ಪತ್ರೆಯಲ್ಲಿ 40 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 3400 ರೋಗಿಗಳನ್ನು ಪರೀಕ್ಷಿಸಲಾಗಿದೆ. ಇವರು ಹೃದ್ರೋಗದ ಮೊದಲಿನ ಲಕ್ಷಣಗಳಿಲ್ಲದ ರೋಗಿಗಳಾಗಿದ್ದರು. ಪರೀಕ್ಷೆಯಲ್ಲಿ ಒಂದು ತೋಳಿನ  ಸಿಸ್ಟೊಲಿಕ್ ಮತ್ತು ಡಯಾಸ್ಟೋಲಿಕ್ ಪ್ರಮಾಣ ಇನ್ನೊಂದು ತೋಳಿಗಿಂತ 5 ಅಂಕಗಳ ವ್ಯತ್ಯಾಸ ಕಂಡುಬಂದಿದೆ.  ಆದರೆ ಅವರಲ್ಲಿನ ಶೇ.10 ರಷ್ಟು ಜನರಲ್ಲಿ ಈ ಅಂತರ 10 ಕ್ಕಿಂತ ಹೆಚ್ಚಾಗಿತ್ತು. 13 ವರ್ಷಗಳವರೆಗೆ ಈ ಜನರ ಮೇಲೆ ನಿಗಾವಹಿಸಲಾಯಿತು. 10 ಕ್ಕಿಂತ ಅಧಿಕ ಅಂತರ ಇರುವ ಸುಮಾರು ಶೇ.38ರಷ್ಟು ಜನರಲ್ಲಿ ಹಾರ್ಟ್ ಅಟ್ಯಾಕ್, ಹಾರ್ಟ್ ಸ್ಟ್ರೋಕ್  ಹಾಗೂ ಹೃದ್ರೋಗದ ಲಕ್ಷಣಗಳು ಕಂಡುಬಂದವು. ಹೈಪರ್ ಟೆನ್ಶನ್ ಕಾಯಿಲೆಯಿಂದ ಬಳಲುತ್ತಿರುವವರ ಎರಡು ಭುಜಗಳ BP ಗಳಲ್ಲಿ 10ಕ್ಕಿಂತ ಹೆಚ್ಚು ಅಂದರವಿದ್ದರೆ, ಅವರಿಗೆ ಹೃದಯಾಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಒಂದು ವೇಳೆ ರಕ್ತದೊತ್ತಡ ಅಲೆಯುವಾಗ ಎರಡು ಭುಜಗಳ ರಕ್ತದೊತ್ತಡದಲ್ಲಿನ ಅಂತರ 10 ಕ್ಕಿಂತ ಜಾಸ್ತಿಯಾಗಿದ್ದರೆ, ಇದು ಭುಜಗಳ ನಾಳಗಳಲ್ಲಿ ಬ್ಲಾಕೆಜ್ ಇರುವುದನ್ನು ಸೂಚಿಸುತ್ತದೆ. ಪೆರಿಫೆರಲ್ ಆರ್ಟರಿಗಳಲ್ಲಿ ಅಡಚಣೆ ಇರುವುದರಿಂದ ಹೃದಯ ಮತ್ತು ಮೆದುಳಿನಲ್ಲಿ ಬ್ಲಾಕೆಜ್ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯಾಘಾತ (Heart Attack) ಅಥವಾ ಸ್ಟ್ರೋಕ್ (Brain Stroke) ಸಾಧ್ಯತೆ ಕೂಡ ಹೆಚ್ಚಾಗುತ್ತದೆ. 

ಸೈನ್ಸ್ ಮ್ಯಾಗಜಿನ್ 'ದಿ ಲ್ಯಾನ್ಸೆಟ್' ನಲ್ಲಿ ಪ್ರಕಟಗೊಂಡ 28 ಶೋಧ ಪತ್ರಿಕೆಗಳಲ್ಲಿಯೂ ಕೂಡ ಈ ಅಂಶವನ್ನೇ ಹೇಳಲಾಗಿದೆ. ಅಂದರೆ, ಎರಡೂ ಕೈಗಳಲ್ಲಿನ ರಕ್ತದೊತ್ತಡದ ಅಂತರ ಜಾಸ್ತಿ ಇದ್ದರೆ ನರಗಳಿಗೆ ಸಂಬಂಧಿಸಿದ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ-Covaxin ತುರ್ತು ಬಳಕೆಗಾಗಿ ಶೀಘ್ರದಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಅಂತಿಮ ನಿರ್ಧಾರ

ತಜ್ಞರ ಸಲಹೆ ಏನು?
ಈ ಕುರಿತು ಸಲಹೆ ನೀಡಿರುವ ಬ್ರಿಟಿಶ್ ಹಾರ್ಟ್ ಫೌಂಡೇಶನ್ ನಲ್ಲಿನ ಈ ಸಂಶೋಧನೆಯ ಮುಖ್ಯ ಸಂಶೋಧಕ ಡಾ. ಕ್ಲಾರ್ಕ್, ಅಧಿಕ ರಕ್ತದೊತ್ತಡದ ಇಂತಹ ರೋಗಿಗಳು ತಮ್ಮ ಮನೆಯಲ್ಲಿಯೇ ರಕ್ತದೊತ್ತಡದ ಪರೀಕ್ಷೆ ನಡೆಸುತ್ತಾರೆ ಮತ್ತು ಅವರು ತಮ್ಮ ವೈದ್ಯರ ಸಲಹೆಗಳನ್ನು ಪಡೆದುಕೊಳ್ಳಬೇಕು ಎಂದಿದ್ದಾರೆ. "ಒಂದು ವೇಳೆ ರಕ್ತದೊತ್ತಡದ ಚಿಕಿತ್ಸೆ ಪಡೆಯುತ್ತಿದ್ದು, ಎರಡು ಭುಜಗಳ ರಕ್ತದೊತ್ತಡದಲ್ಲಿ ಅಧಿಕ ಅಂತರ ಇದ್ದರೆ, ಅವರ ಚಿಕಿತ್ಸೆ ಭವಿಷ್ಯದಲ್ಲಿ ಸಂಭವಿಸಲಿರುವ ಅಕಾಲಿಕ ಮೃತ್ಯುವನ್ನು ಗಮನದಲ್ಲಿಟ್ಟು ಕೊಂಡು ನಡೆಸಬೇಕು "ಎಂದು  ಡಾ. ಕ್ಲಾರ್ಕ್ ಹೇಳಿದ್ದಾರೆ.

ಇದನ್ನೂ ಓದಿ-Diabetes Care in Monsoon : ಮಧುಮೇಹ ರೋಗಿಗಳಿಗೆ ಅಪಾಯಕಾರಿ ಮಳೆಗಾಲ : ಅವರಿಗಾಗಿ ಇಲ್ಲಿದೆ ಬಹಳ ಮುಖ್ಯ ಸಲಹೆಗಳು 

ರಕ್ತದೊತ್ತಡ ತಪಾಸುವ ಮುನ್ನ ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಿ
>> ರಕ್ತದೊತ್ತಡ ತಪಾಸಣೆಗೂ ಅರ್ಧ ಗಂಟೆ ಮುನ್ನ ವೈನ್ ಅಥವಾ ನಿಕೋಟಿನ್ ಸೇವನೆಯಿಂದ ದೂರ ಉಳಿಯಿರಿ.
>> ರಕ್ತದೊತ್ತಡ ಅಲೆಯುವಾಗ ಕೆಲ ನಿಮಿಷ ಮೊದಲು ವಿಶ್ರಾಮ ಸ್ಥಿತಿಯಲ್ಲಿ ನೇರವಾಗಿ ಕುಳಿತು ತಮ್ಮ ಕಾಳುಗಳನ್ನು ಚಾಚಿ.
>> ರಕ್ತದೊತ್ತಡ ಅಳೆಯುವ ಸಮಯದಲ್ಲಿ ನಿಮ್ಮ ಭುಜ ನಿಮ್ಮ ಹೃದಯಕ್ಕೆ ಸಮಾನಾಂತರ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಿ.
>> ಬಳಿಕ ಯಂತ್ರದ ಪಟ್ಟಿಯನ್ನು ತೋಳಿಗೆ ಸುತ್ತಿ, ಯಂತ್ರದ ಸೂಚನೆಯಿಂತೆ BP ಪರೀಕ್ಷಿಸಿ.

ಇದನ್ನೂ ಓದಿ-Health Tips : ಹಾಲಿನ ಜೊತೆ ಸೇವಿಸಬೇಡಿ ಈ ಆಹಾರವಗಳನ್ನ : ನಿಮಗೆ ಲಾಭದ ಬದಲು ಅಪಾಯವೇ ಜಾಸ್ತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News