ISI ಜೊತೆಗೆ ಪೆರೋಲ್ ಮೇಲೆ ಕೆಲಸ ಮಾಡುತ್ತಿದ್ದನಂತೆ ಹಿಜ್ಬುಲ್ ಮುಖ್ಯಸ್ಥ ಸಯ್ಯದ್ ಸಲಾವುದ್ದೀನ್

ವಿಶ್ವದ ಕಣ್ಣಲ್ಲಿ ಮಣ್ಣೇರೆಚಲು ಇತ್ತೀಚೆಗಷ್ಟೇ ಪಾಕಿಸ್ತಾನ ಒಟ್ಟು 88 ಉಗ್ರರ ಪಟ್ಟಿ ಜಾರಿಗೊಳಿಸಿತ್ತು

Last Updated : Sep 6, 2020, 05:34 PM IST
  • ಭಾರತೀಯ ಗುಪ್ತಚರ ಇಲಾಖೆ ಕೈ ಸೇರಿದೆ ISI ಪತ್ರ.
  • ಸೈಯದ್ ಸಲಾವುದ್ದೀನ್ ಗೆ ಲಭಿಸಿವೆ ವಿಶೇಷ ಸವಲತ್ತುಗಳು.
  • ಚೀನಾ ವಿರುದ್ಧ ಪ್ರತಿಭಟನೆಗಿಳಿದ ಮುಖಂಡರ ಮೇಲೆ ಗುರಿ.
ISI ಜೊತೆಗೆ ಪೆರೋಲ್ ಮೇಲೆ ಕೆಲಸ ಮಾಡುತ್ತಿದ್ದನಂತೆ ಹಿಜ್ಬುಲ್ ಮುಖ್ಯಸ್ಥ ಸಯ್ಯದ್ ಸಲಾವುದ್ದೀನ್  title=

ಶ್ರೀನಗರ್: ವಿಶ್ವದ ಕಣ್ಣಲ್ಲಿ ಮಣ್ಣೇರೆಚಲು ಇತ್ತೀಚೆಗಷ್ಟೇ ಪಾಕಿಸ್ತಾನ (Pakistan) ಒಟ್ಟು 88 ಉಗ್ರರ ಪಟ್ಟಿ ಜಾರಿಗೊಳಿಸಿತ್ತು. FATF ಸಭೆಗೂ ಮುನ್ನ ಜಾರಿಗೊಲಿಸಲಾಗಿದ್ದ ಈ ಪಟ್ಟಿಯ ಮೂಲಕ ತಾನು ಭಯೋತ್ಪಾದನೆಯ ವಿರುದ್ಧ ಎಷ್ಟೊಂದು ಗಂಭೀರವಾಗಿರುವುದಾಗಿ ಹೇಳಲು ಪಾಕಿಸ್ತಾನ ಪ್ರಯತ್ನಿಸಿತ್ತು. 

ಭಾರತೀಯ ಗುಪ್ತಚರ ಇಲಾಖೆ ಕೈ ಸೇರಿದೆ ISI ಪತ್ರ
ಆದರೆ ಪಾಕಿಸ್ತಾನ ತಾನೆಂದಿಗೂ ಕೂಡ ಸುಧಾರಿಸುವುದಿಲ್ಲ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ. ಭಾರತೀಯ ಗುಪ್ತಚರ ಇಲಾಖೆ ಕೈಗೆ ಪಾಕಿಸ್ತಾನದ ಗುಪ್ತಚರ ಏಜೆನ್ಸಿ ISI ಪತ್ರವೊಂದು ಲಭಿಸಿದ್ದು, ಪತ್ರದಲ್ಲಿ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಮುಖ್ಯಸ್ಥ ಸಯ್ಯದ್ ಸಲಾವುದ್ದೀನ್ ISI ಅಧಿಕಾರಿಯಾಗಿದ್ದು, ಆತ ISI ಪೆರೋಲ್ ಮೇಲೆ ಕೆಲಸ ಮಾಡುತ್ತಾನೆ ಎಂಬುದು ಉಲ್ಲೇಖಿಸಲಾಗಿದೆ.

ಸಯ್ಯದ್ ಸಲಾವುದ್ದೀನ್ ಗೆ ಲಭಿಸಿವೆ ವಿಶೇಷ ಸವಲತ್ತುಗಳು
ISI ಡೈರೆಕ್ಟರ್/ಕಮಾಂಡಿಂಗ್ ಆಫೀಸರ್ ವಜಾಹತ್ ಅಲಿ ಖಾನ್ ವತಿಯಿಂದ ಜಾರಿಗೊಳಿಸಲಾಗಿರುವ ಈ ಪತ್ರದಲ್ಲಿ ಹಿಜ್ಬುಲ್ ಮುಖ್ಯಸ್ಥ ISIಗಾಗಿ ಕಾರ್ಯನಿರ್ವಹಿಸುತ್ತಾನೆ.  ಪತ್ರದಲ್ಲಿ ಸಯ್ಯದ್ ಸಲಾವುದ್ದೀನ್ ಸೆಕ್ಯೂರಿಟಿ ಕ್ಲಿಯರೆನ್ಸ್ ಹಾಗೂ ಕಾರ್ ನ ವಿವರಗಳ ಜೊತೆಗೆ ಸಲಾವುದ್ದೀನ್ ಅವರನ್ನು ಅನಾವಶ್ಯಕವಾಗಿ ಎಲ್ಲಿಯೂ ತಡೆಯುವಂತಿಲ್ಲ ಎಂದೂ ಕೂಡ ಹೇಳಲಾಗಿದೆ.

ಚೀನಾ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಮುಖಂಡರನ್ನು ಗುರಿಯಾಗಿಸಲಾಗಿದೆ
ಈ ಸೇವೆಗಳಿಗೆ ಪ್ರತಿಯಾಗಿ ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥ ಸಯ್ಯದ್ ಸಲಾವುದ್ದೀನ್, ಜಮ್ಮು ಮತ್ತು ಕಾಶ್ಮೀರದಲ್ಲಿ ಚೀನಾ ವಿರುದ್ಧ ಪ್ರತಿಭಟನೆ ನಡೆಸುವವರ ಮೇಲೆ ಭಯೋತ್ಪಾದಕ ದಾಳಿ ನಡೆಸುವಂತೆ ISI ಸೂಚನೆ ನೀಡಿದೆ. ಐಎಸ್‌ಐ ಸೂಚನೆಯ ಮೇರೆಗೆ ಹಿಜ್ಬುಲ್ ಮುಜಾಹಿದ್ದೀನ್ ಉತ್ತರ ಕಾಶ್ಮೀರದಲ್ಲಿ ಚೀನಾ ವಿರುದ್ಧದ ಪ್ರತಿಭಟನೆಗಳ ಮೇಲೆ ಭಯೋತ್ಪಾದಕ ದಾಳಿ ನಡೆಸಲು ಯೋಜನೆ ರೂಪಿಸಿತ್ತು. ಹಿಜ್ಪುಲ್ ದಾಳಿ ನಡೆಸಲು ಯೋಜನೆ ರೂಪಿಸಿರುವ ಈ ಪಟ್ಟಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಮುಖಂಡರೂ ಕೂಡ ಇದ್ದಾರೆ.

ಗಲ್ವಾನ್ ಘರ್ಷಣೆಯ ಬಳಿಕ ಚೀನಾ ವಿರುದ್ಧ ಅಸಮಾಧಾನಗೊಂಡಿದ್ದಾರೆ ಜನರು
ಗಾಲ್ವಾನ್ ಕಣಿವೆಯಲ್ಲಿ ಜೂನ್ 15 ರ ರಾತ್ರಿ, ಚೀನಾದ ಸೇನೆಯೊಂದಿಗೆ ನಡೆದ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಸಾವನ್ನಪ್ಪಿದ್ದಾರೆ. ಅಂದಿನಿಂದ, ಚೀನಾ ವಿರುದ್ಧ ದೇಶಾದ್ಯಂತ ಭಾರಿ ಆಕ್ರೋಶವಿದೆ. ಇಂತಹ ಪರಿಸ್ಥಿತಿಯಲ್ಲಿ, ಚೀನಾ ವಿರುದ್ಧ ಪ್ರದರ್ಶನಗಳು ನಡೆಯುತ್ತಿವೆ. ಈ ವೇಳೆ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಬಿಜೆಪಿಯ ಉನ್ನತ ನಾಯಕರನ್ನು ಗುರಿಯಾಗಿಸುವ ಸಾಧ್ಯತೆ ಇದೆ. ಈ ಮುಖಂಡರು ಚೀನಾ ವಿರುದ್ಧ ಯಾರು ನಿರಂತರವಾಗಿ ಪ್ರದರ್ಶನಗಳನ್ನು ಆಯೋಜಿಸುತ್ತಿದ್ದಾರೆ.

Trending News