ಅಮೆರಿಕದಲ್ಲಿ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ, 20 ನಗರಗಳಲ್ಲಿ ‘ಭಾರತ್ ಏಕತಾ’ ಮೆರವಣಿಗೆ!

ನರೇಂದ್ರ ಮೋದಿ ಅಮೆರಿಕ ಭೇಟಿ 2023: ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಜೂನ್‌ನಲ್ಲಿ ತಮ್ಮ ಮೊದಲ ರಾಜ್ಯ ಪ್ರವಾಸದ ಪ್ರಯುಕ್ತ ಅಮೆರಿಕಕ್ಕೆ ಹೋಗಲಿದ್ದಾರೆ. ಭಾರತೀಯ-ಅಮೆರಿಕನ್ನರು ಪ್ರಧಾನಿ ಮೋದಿಗೆ ಭವ್ಯವಾದ ಸ್ವಾಗತವನ್ನು ನೀಡಲು ಪ್ಲಾನ್ ಮಾಡಿದ್ದಾರೆ.

Written by - Puttaraj K Alur | Last Updated : May 22, 2023, 03:39 PM IST
  • ಪ್ರಧಾನಿ ನರೇಂದ್ರ ಮೋದಿಯವರು ಮುಂದಿನ ತಿಂಗಳು ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ
  • ಭಾರತೀಯ-ಅಮೆರಿಕನ್ನರು ಪ್ರಧಾನಿ ಮೋದಿಯವರಿಗೆ ಭವ್ಯ ಸ್ವಾಗತ ನೀಡಲು ಪ್ಲಾನ್ ಮಾಡಿದ್ದಾರೆ
  • ಜೂನ್ 18ರಂದು ಅಮೆರಿಕದ 20 ನಗರಗಳಲ್ಲಿ 'ಭಾರತ್ ಏಕತಾ ದಿವಸ್' ಮೆರವಣಿಗೆ ಆಯೋಜನೆ
ಅಮೆರಿಕದಲ್ಲಿ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ, 20 ನಗರಗಳಲ್ಲಿ ‘ಭಾರತ್ ಏಕತಾ’ ಮೆರವಣಿಗೆ! title=
ಪ್ರಧಾನಿ ಮೋದಿ ಅಮೆರಿಕ ಪ್ರವಾಸ!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮುಂದಿನ ತಿಂಗಳು ಅಮೆರಿಕ ಪ್ರವಾಸ ಕೈಗೊಳ್ಳಲಿರುವ ಬಗ್ಗೆ ಅಮೆರಿಕದಲ್ಲಿರುವ ಭಾರತೀಯ ಸಮುದಾಯದಲ್ಲಿ ಭಾರೀ ಕ್ರೇಜ್ ಇದೆ. ಪಿಟಿಐ ಪ್ರಕಾರ ಭಾರತೀಯ-ಅಮೆರಿಕನ್ನರು ಪ್ರಧಾನಿ ಮೋದಿಯವರಿಗೆ ಭವ್ಯವಾದ ಸ್ವಾಗತ ನೀಡಲು ಯೋಜಿಸುತ್ತಿದ್ದಾರೆ. ಇದಕ್ಕಾಗಿ 'ಭಾರತ್ ಏಕತಾ ದಿವಸ್' ಮೆರವಣಿಗೆಯನ್ನು ಜೂನ್ 18ರಂದು ಅಮೆರಿಕದ 20 ದೊಡ್ಡ ನಗರಗಳಲ್ಲಿ ಆಯೋಜಿಸಲಾಗಿದೆ.

ಈ ಬಗ್ಗೆ ಮಾತನಾಡಿರುವ ಭಾರತೀಯ ಅಮೆರಿಕನ್ ಸಮುದಾಯದ ನಾಯಕ ಮತ್ತು 'ಓವರ್‌ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿ'-ಯುಎಸ್‌ಎ ರಾಷ್ಟ್ರೀಯ ಅಧ್ಯಕ್ಷ ಅಡಪ ಪ್ರಸಾದ್, ‘ಭಾರತೀಯ ಅಮೆರಿಕನ್ ಸಮುದಾಯವು ಪ್ರಧಾನಿ ಮೋದಿಯವರ ಭೇಟಿಯ ಬಗ್ಗೆ ಬಹಳ ಉತ್ಸುಕವಾಗಿದೆ. ಸಮುದಾಯವು ಜೂನ್ 18 ರಂದು ವಾಷಿಂಗ್ಟನ್ DCಯಲ್ಲಿರುವ ರಾಷ್ಟ್ರೀಯ ಸ್ಮಾರಕದಲ್ಲಿ ಒಟ್ಟುಗೂಡುತ್ತಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿಗೆ ಆಟೋಗ್ರಾಪ್ ಬೇಕೆಂದ ಯುಎಸ್ ಅಧ್ಯಕ್ಷ ಬಿಡೆನ್..!

ಪ್ರತಿಷ್ಠಿತ ಸ್ಥಳಗಳಲ್ಲಿ ಸ್ವಾಗತ ಮೆರವಣಿಗೆ ನಡೆಸಲಾಗುವುದು ಮತ್ತು ವಾಷಿಂಗ್ಟನ್ ಸ್ಮಾರಕದಿಂದ ಲಿಂಕನ್ ಸ್ಮಾರಕದವರೆಗೆ 'ಭಾರತದ ಏಕತಾ ದಿನ' ಮೆರವಣಿಗೆಯ ಮೂಲಕ ಪ್ರಧಾನಿ ಮೋದಿಯವರನ್ನು ಸ್ವಾಗತಿಸಲಾಗುವುದು ಎಂದು ಪ್ರಸಾದ್ ಹೇಳಿದ್ದಾರೆ. ಇದಲ್ಲದೆ ಅಮೆರಿಕದಾದ್ಯಂತ ಪೂರ್ವದಿಂದ ಪಶ್ಚಿಮಕ್ಕೆ, ಉತ್ತರದಿಂದ ದಕ್ಷಿಣಕ್ಕೆ ಸುಮಾರು 20 ಸ್ಥಳಗಳಲ್ಲಿ ಸ್ವಾಗತ ಮೆರವಣಿಗೆಗಳು ನಡೆಯಲಿದ್ದು, ಪ್ರಮುಖ ನಗರಗಳು, ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದ ಗೋಲ್ಡನ್ ಬ್ರಿಡ್ಜ್‌ನಂತಹ ಸಾಂಪ್ರದಾಯಿಕ ಸ್ಥಳಗಳನ್ನು ಒಳಗೊಂಡಿದೆ ಎಂದು ಅವರು ತಿಳಿಸಿದ್ದಾರೆ. ಇದಕ್ಕಾಗಿ ಸಕಲ ಸಿದ್ಧತೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.

ಬೋಸ್ಟನ್, ಚಿಕಾಗೋ, ಅಟ್ಲಾಂಟಾ, ಮಿಯಾಮಿ, ಟ್ಯಾಂಪಾ, ಡಲ್ಲಾಸ್, ಹೂಸ್ಟನ್, ಲಾಸ್ ಏಂಜಲೀಸ್, ಸ್ಯಾಕ್ರಮೆಂಟೊ, ಸ್ಯಾನ್ ಫ್ರಾನ್ಸಿಸ್ಕೋ, ಕೊಲಂಬಸ್ ಮತ್ತು ಸೇಂಟ್ ಲೂಯಿಸ್ ಮೆರವಣಿಗೆಗಳು ನಡೆಯುವ ಇತರ ನಗರಗಳಾಗಿವೆ.

ಇದನ್ನೂ ಓದಿ: Photo Gallery: ಪ್ರಧಾನಿ ಮೋದಿ ಕಾಲು ಮುಟ್ಟಿ ನಮಸ್ಕರಿಸಿದ ಪಪುವಾ ನ್ಯೂ ಗಿನಿಯಾದ ಪ್ರಧಾನಿ!

ಪಿಎಂ ಮೋದಿ ಮೊದಲ ಬಾರಿಗೆ ರಾಜ್ಯ ಪ್ರವಾಸ 

ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಜೂನ್‌ನಲ್ಲಿ ತಮ್ಮ ಮೊದಲ ರಾಜ್ಯ ಪ್ರವಾಸಕ್ಕೆ ಅಮೆರಿಕಕ್ಕೆ ಹೋಗಲಿದ್ದಾರೆ. ಜೂನ್ 22ರಂದು ಅಮೆರಿಕದ ಅಧ್ಯಕ್ಷರು ಮತ್ತು ಪ್ರಥಮ ಮಹಿಳೆ ಮೋದಿಯವರಿಗೆ ರಾಜ್ಯ ಭೋಜನಕ್ಕೆ ಆತಿಥ್ಯ ನೀಡಲಿದ್ದಾರೆ.

2014ರಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಪ್ರಧಾನಿ ಮೋದಿ ಹಲವು ಬಾರಿ ಅಮೆರಿಕಕ್ಕೆ ಭೇಟಿ ನೀಡಿರುವುದು ಉಲ್ಲೇಖಾರ್ಹ. ಅವರು ಮಾಜಿ ಅಧ್ಯಕ್ಷರಾದ ಬರಾಕ್ ಒಬಾಮಾ, ಡೊನಾಲ್ಡ್ ಟ್ರಂಪ್ ಮತ್ತು ಹಾಲಿ ಅಧ‍್ಯಕ್ಷ ಜೋ ಬಿಡೆನ್ ಅವರೊಂದಿಗೆ ಸಭೆಗಳನ್ನು ನಡೆಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News