Gaza : ಗಾಜಾಪಟ್ಟಿಯ ಯುದ್ಧ ಪೀಡಿತ ಪ್ರದೇಶಗಳಲ್ಲಿರು ನಿರಾಶ್ರಿತರಿಗೆ ವಿಮಾನದ ಮೂಲಕ ರವಾನಿಸಿದ ಆಹಾರ ಪದಾರ್ಥಗಳು ಮೇಲೆ ಬಿದ್ದುಹಲವಾರು ಸಾವನ್ನಪ್ಪಿದ್ದಾರೆ.
ಅಹಾರ ಮತ್ತು ಇತರೆ ಅಗತ್ಯವಸ್ತುಗಳಿದ್ದ ಪಾರ್ಸೆಲ್ ನ ಪ್ಯಾರಾಚೂಟ್ ತೆರೆಯುವಲ್ಲಿ ವಿಫಲವಾಗಿದ್ದು, ಈ ವೇಳೆ ಅದು ನೇರವಾಗಿ ಜನ ವಸತಿ ಪ್ರದೇಶದ ಮೇಲೆ ಬಿದ್ದಿದೆ. ಗಾಜಾಪಟ್ಟಿಯ ನಿರಾಶ್ರಿತ ಮಹಿಳೆಯರು ಮತ್ತು ಪುರುಷರು ಅದರಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ.
ಇದನ್ನು ಓದಿ : ICC World Test Championship: ಇಂಗ್ಲೆಂಡ್ ವಿರುದ್ಧ 4-1 ಅಂತರದಲ್ಲಿ ಗೆದ್ದು, ಅಗ್ರ ಸ್ಥಾನಕ್ಕೇರಿದ ಭಾರತ
ಆಹಾರ ಮತ್ತು ಅಗತ್ಯ ವಸ್ತುಗಳನ್ನು ಒಳಗೊಂಡ ಪಾರ್ಸೆಲ್ ಅಲ್-ಶಾತಿ ನಿರಾಶ್ರಿತರ ಶಿಬಿರದ ಸಮೀಪವಿರುವ ಮನೆಯ ಛಾವಣಿಯ ಮೇಲೆ ರಾಕೆಟ್‌ನಂತೆ ಬಿದ್ದಿದೆ. ಈ ವೇಳೆ ಭಾರವಾದ ಈ ಪಾರ್ಸೆಲ್ ಅದರ ಕೆಳಗೆ ಇದ್ದ ಜನರ ಮೇಲೆ ಬಿದ್ದಿದ್ದು ಅದರ ಭಾರಕ್ಕೆ ಹಲವರು ಸಾವನ್ನಪ್ಪಿದ್ದಾರೆ. ಮೂಲಗಳ ಪ್ರಕಾರ ಮಕ್ಕಳು ಸೇರಿದಂತೆ ಈ ದುರಂತದಲ್ಲಿ 5 ಮಂದಿ ಸಾವಿಗೀಡಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
Today, a cargo shipment of food air dropped by a C-17A Globemaster III transport aircraft of the #USAF killed five Palestinians of #Gaza as its parachute failed to deploy! pic.twitter.com/5ew8Go8l5K
— Babak Taghvaee - The Crisis Watch (@BabakTaghvaee1) March 8, 2024
ಅಪಘಾತದ ಸಂತ್ರಸ್ತರನ್ನು ಗಾಜಾ ನಗರದ ಅಲ್-ಶಿಫಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಗಾರ್ಡಿಯನ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ