ಮಾಲಿಯಲ್ಲಿ ಫ್ರಾನ್ಸ್ ಏರ್ ಸ್ಟ್ರೈಕ್, 50ಕ್ಕೂ ಹೆಚ್ಚು ಜಿಹಾದಿಗಳ ಹತ್ಯೆ

ಇಸ್ಲಾಮಿಕ್ ಬಂಡಾಯವನ್ನು ಹಿಮ್ಮೆಟ್ಟಿಸಲು ಸರ್ಕಾರಿ ಪಡೆಗಳು ಹೆಣಗಾಡುತ್ತಿರುವ ಬುರ್ಕಿನಾ ಫಾಸೊ ಮತ್ತು ನೈಜರ್‌ನ ಗಡಿಗಳ ಬಳಿ ಶುಕ್ರವಾರ ಈ ದಾಳಿ ನಡೆದಿದೆ ಎಂದು ಫ್ರೆಂಚ್ ರಕ್ಷಣಾ ಸಚಿವರು ತಿಳಿಸಿದ್ದಾರೆ.

Last Updated : Nov 3, 2020, 03:40 PM IST
  • ಫ್ರಾನ್ಸ್ ಭಯೋತ್ಪಾದನೆ ವಿರುದ್ಧ ಏರ್ ಸ್ಟ್ರೈಕ್
  • ಮಾಲಿಯಲ್ಲಿ ಅಲ್ ಖೈದಾದ 50ಕ್ಕೂ ಹೆಚ್ಚು ಜಿಹಾದಿಗಳ ಹತ್ಯೆ
  • ಟ್ವೀಟ್ ಮೂಲಕ ಮಾಹಿತಿ ನೀಡಿದ ರಕ್ಷಣಾ ಸಚಿವ ಫ್ಲಾರೆನ್ಸ್ ಪಾರ್ಲಿ
ಮಾಲಿಯಲ್ಲಿ ಫ್ರಾನ್ಸ್ ಏರ್ ಸ್ಟ್ರೈಕ್,  50ಕ್ಕೂ ಹೆಚ್ಚು ಜಿಹಾದಿಗಳ ಹತ್ಯೆ title=

ಬಮಾಕೊ, ಮಾಲಿ: ಮಧ್ಯ ಮಾಲಿಯಲ್ಲಿ ನಡೆದ ವೈಮಾನಿಕ ದಾಳಿ (Air Strike) ಯಲ್ಲಿ ಅಲ್ ಖೈದಾಗೆ ಹೊಂದಿಕೊಂಡಿದ್ದ 50ಕ್ಕೂ ಹೆಚ್ಚು ಜಿಹಾದಿಗಳನ್ನು ತನ್ನ ಪಡೆಗಳು ಕೊಂದಿವೆ ಎಂದು ಫ್ರೆಂಚ್ ಸರ್ಕಾರ ಸೋಮವಾರ ತಿಳಿಸಿದೆ.

ಬುರ್ಕಿನಾ ಫಾಸೊ ಮತ್ತು ನೈಜರ್‌ನ ಗಡಿಯ ಸಮೀಪವಿರುವ ಪ್ರದೇಶದಲ್ಲಿ ಶುಕ್ರವಾರ ಈ ದಾಳಿ ನಡೆದಿದ್ದು, ಇಸ್ಲಾಮಿಕ್ ದಂಗೆಯನ್ನು ಹಿಮ್ಮೆಟ್ಟಿಸಲು ಸರ್ಕಾರಿ ಪಡೆಗಳು ಹೆಣಗಾಡುತ್ತಿವೆ ಎಂದು ಫ್ರೆಂಚ್ ರಕ್ಷಣಾ ಸಚಿವ ಫ್ಲಾರೆನ್ಸ್ ಪಾರ್ಲಿ ಮಾಲಿಯ ಪರಿವರ್ತನಾ ಸರ್ಕಾರದ ಸದಸ್ಯರನ್ನು ಭೇಟಿಯಾದ ನಂತರ ಹೇಳಿದರು.

ಈ ಎರಡು ದೇಶಗಳಲ್ಲಿ ಕರೋನಾ ನಡುವೆ ಪ್ರವಾಹದ ರಣಕೇಕೆ, ಗಡಿಯಲ್ಲಿ ಸಮಾಧಿ ಮಾಡಲಾದ ಶವಗಳು ..!

ಫ್ರೆಂಚ್ ನೇತೃತ್ವದ ಜಿಹಾದಿ ವಿರೋಧಿ ಆಪರೇಷನ್ ಬಾರ್ಖೇನ್ ಅನ್ನು ಉಲ್ಲೇಖಿಸಿ ಮಧ್ಯ ಮಾಲಿಯಲ್ಲಿ ಮಿಲಿಟರಿ ಕಾರ್ಯಾಚರಣೆಯ ಸಮಯದಲ್ಲಿ, ಅವರು ಅಲ್-ಖೈದಾ ಭಯೋತ್ಪಾದಕರಿಗೆ ಸಂಬಂಧಿಸಿದ 50 ಕ್ಕೂ ಹೆಚ್ಚು ಉಗ್ರರನ್ನು ಕೊಂದಿರುವುದಾಗಿ ಫ್ರೆಂಚ್ ಸರ್ಕಾರ ಹೇಳಿಕೊಂಡಿದೆ. ಫ್ರೆಂಚ್ ರಕ್ಷಣಾ ಸಚಿವ ಫ್ಲಾರೆನ್ಸ್ ಪಾರ್ಲಿ ಅವರು ಟ್ವೀಟ್ ಮಾಡುವ ಮೂಲಕ ಈ ಮಾಹತಿ ಮಾಹಿತಿ ನೀಡಿದ್ದಾರೆ. 

ಫ್ರೆಂಚ್ ರಕ್ಷಣಾ ಸಚಿವ ಫ್ಲಾರೆನ್ಸ್ ಪಾರ್ಲಿ, 'ಮಾಲಿಯಲ್ಲಿ ಅಕ್ಟೋಬರ್ 30 ರಂದು ನಮ್ಮ ಸೈನಿಕರು ಅತ್ಯಂತ ಪ್ರಮುಖ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಿದ್ದು 50ಕ್ಕೂ ಹೆಚ್ಚು ಜಿಹಾದಿಗಳನ್ನು ಹತ್ಯೆಗೈದಿದ್ದಾರೆ. ಸೇನೆಯು ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡಿದೆ. ನಮ್ಮ ಸೈನಿಕರ ಬದ್ಧತೆಗೆ ನಾನು ವಂದಿಸುತ್ತೇನೆ. ನಮ್ಮ ಗಡಿಯಿಂದ ದೂರದಲ್ಲಿ, ಅವರು ನಮ್ಮ ಸುರಕ್ಷತೆಗಾಗಿ ಕೆಲಸ ಮಾಡುತ್ತಾರೆ ಎಂದು ಹೇಳಿದ್ದಾರೆ.

ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ಭಾರತವು ಫ್ರಾನ್ಸ್ ಜೊತೆಗಿದೆ: ನರೇಂದ್ರ ಮೋದಿ

ಭಯೋತ್ಪಾದನೆ ವಿರುದ್ಧದ ಹೋರಾಟ ಮುಂದುವರೆದಿದೆ :-
ಫ್ರಾನ್ಸ್ (France) ಬುರ್ಕಿನಾ ಫಾಸೊ ಮತ್ತು ನೈಜರ್ ಗಡಿಯ ಬಳಿ ಈ ಕಾರ್ಯಾಚರಣೆಯನ್ನು ನಡೆಸಿದೆ. ಇಲ್ಲಿನ ಫ್ರೆಂಚ್ ಸೈನ್ಯವು ಧಾರ್ಮಿಕ ಮೂಲಭೂತವಾದಿಗಳ ವಿರುದ್ಧ ಹೋರಾಡುತ್ತಿದೆ. ಭಯೋತ್ಪಾದಕರ ವಿರುದ್ಧದ ಹೋರಾಟ ಮುಂದುವರಿಯುತ್ತದೆ. ಭಯೋತ್ಪಾದಕರಿಂದ ಸೋಲೊಪ್ಪಲು ಸಾಧ್ಯವಿಲ್ಲ ಎಂದು ಫ್ರಾನ್ಸ್ ಹೇಳಿದೆ.

Trending News