ಪರಸ್ಪರ ಕೈ ಹಿಡಿದುಕೊಂಡೇ ಕೊನೆಯುಸಿರೆಳೆದ ಡಚ್ ಮಾಜಿ ಪ್ರಧಾನಿ ಹಾಗೂ ಪತ್ನಿ

Former Dutch PM And Wife Die: 93 ವರ್ಷದ ಡ್ರೈಸ್ ವ್ಯಾನ್ ಆಗ್ಟ್ ಹಾಗೂ ಅವರ ಪತ್ನಿ ಯುಜೆನಿ ದಯಾಮರಣಕ್ಕೆ ಅನುಮತಿ ಕೋರಿದ್ದರು. ಈ ಮನವಿಗೆ ಅನುಮತಿ ಸಿಕ್ಕಿತ್ತು.

Written by - Chetana Devarmani | Last Updated : Feb 15, 2024, 12:24 PM IST
  • ಡಚ್ ಮಾಜಿ ಪ್ರಧಾನಿ ಹಾಗೂ ಪತ್ನಿ ನಿಧನ
  • ಕೈ ಹಿಡಿದುಕೊಂಡೇ ಕೊನೆಯುಸಿರೆಳೆದ ಜೋಡಿ
  • ದಯಾಮರಣ ಹೊಂದಿದ ಡಚ್ ಮಾಜಿ ಪ್ರಧಾನಿ ಹಾಗೂ ಪತ್ನಿ
ಪರಸ್ಪರ ಕೈ ಹಿಡಿದುಕೊಂಡೇ ಕೊನೆಯುಸಿರೆಳೆದ ಡಚ್ ಮಾಜಿ ಪ್ರಧಾನಿ ಹಾಗೂ ಪತ್ನಿ title=

ನೆದರ್ಲ್ಯಾಂಡ್: ಡಚ್ ಮಾಜಿ ಪ್ರಧಾನಿ ಡ್ರೈಸ್ ವ್ಯಾನ್ ಆಗ್ಟ್ ಮತ್ತು ಅವರ ಪತ್ನಿ ವಿಧಿವಾಶರಾಗಿದ್ದಾರೆ. 93 ವರ್ಷ ವಯಸ್ಸಿನ ಈ ದಂಪತಿ ಪರಸ್ಪರ ಕೈ ಹಿಡಿದುಕೊಂಡೇ ಕೊನೆಯುಸಿರೆಳೆದಿದ್ದಾರೆ.  

93 ವರ್ಷದ ಡ್ರೈಸ್ ವ್ಯಾನ್ ಆಗ್ಟ್ ಹಾಗೂ ಅವರ ಪತ್ನಿ ಯುಜೆನಿ ದಯಾಮರಣಕ್ಕೆ ಅನುಮತಿ ಕೋರಿದ್ದರು. ಈ ಮನವಿಗೆ ಅನುಮತಿ ಸಿಕ್ಕಿತ್ತು. ಈ ಹಿನ್ನೆಲೆ ಇಬ್ಬರೂ ದಯಾಮರಣದ ಮೂಲಕ ವಿಧಿವಶರಾಗಿದ್ದಾರೆ. ತಮ್ಮ ಹುಟ್ಟೂರಾದ ನಿಜ್ಮೆಗನ್‌ನಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ.

ಇದನ್ನೂ ಓದಿ: Poisonous plant: ವಿಶ್ವದ ಅತ್ಯಂತ ಅಪಾಯಕಾರಿ ಸಸ್ಯ, ಮುಟ್ಟಿದ ತಕ್ಷಣ ಸಾವು ಖಚಿತ.!

ಆಗ್ಟ್ ಮತ್ತು ಪತ್ನಿ ಇಬ್ಬರೂ ಸಾವಿಗೂ ಮುನ್ನ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ರೈಟ್ಸ್ ಫಾರಂ ಸಂಸ್ಥೆ ಈಗ ಈ ಹಿರಿಯ ದಂಪತಿ ನಿಧನದ ವಿಚಾರವನ್ನು ಅಧಿಕೃತಪಡಿಸಿದೆ. ಫೆಬ್ರವರಿ 5 ರಂದು ಇಹಲೋಕ ತ್ಯಜಿಸಿದ್ದಾರೆ.  

ಡ್ರೈಸ್ ವ್ಯಾನ್ ಆಗ್ಟ್ 1977ರಿಂದ 1982ರವರೆಗೆ ನೆದರ್ಲ್ಯಾಂಡ್‌ ಪ್ರಧಾನ ಮಂತ್ರಿಯಾಗಿದ್ದರು. ಪ್ರಧಾನಿಯಾದ ಸಮಯದಲ್ಲಿ ಅಲ್ಲಿನ ಕ್ರಿಶ್ಚಿಯನ್ ಡೆಮಾಕ್ರಟಿಕ್ ಅಪೀಲ್ ಪಕ್ಷದ ಸ್ಥಾಪಕ ನಾಯಕರಾದರು. ತಮ್ಮ ಅಧಿಕಾರದ ನಂತರವೂ ಅವರು ತಮ್ಮ ರಾಜಕೀಯ ನಿಲುವುಗಳಿಗೆ ಬದ್ಧರಾಗಿ ಪ್ರಬುದ್ಧ ನಾಯಕ ಎಂದೇ ಪ್ರಸಿದ್ಧರಾದರು. 2009ರಲ್ಲಿ ಇವರು ದಿ ರೈಟ್ಸ್ ಫೋರಮ್ ಎಂಬ ಸಂಸ್ಥೆ ಸ್ಥಾಪಿಸಿದರು. ದಿ ರೈಟ್ಸ್ ಫೋರಮ್ ಸಂಸ್ಥೆ ಪ್ಯಾಲೇಸ್ಟಿನಿಯನ್ ಹಕ್ಕುಗಳಿಗಾಗಿ ಹೋರಾಡಲು ಮೀಸಲಾಗಿತ್ತು.

ಇದನ್ನೂ ಓದಿ: ಶ್ರೀಮಂತರ ಖಾದ್ಯ ಎಂದೇ ಫೇಮಸ್ ಈ ಮೀನಿನ ಮೊಟ್ಟೆ, ವಿಶ್ವದ ಅತ್ಯಂತ ದುಬಾರಿ ಆಹಾರ ಪದಾರ್ಥ  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News