ಕಾಬೂಲ್ :ಶನಿವಾರದಂದು ಇಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ 40 ಜನರು ಮೃತಪಟ್ಟು,140 ಮಂದಿ ಗಾಯಗೊಂಡಿದ್ದಾರೆ. ಈ ಸ್ಪೋಟದ ಹೊಣೆಯನ್ನು ತಾಲಿಬಾನ್ ಉಗ್ರರು ಹೊತ್ತುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
#WATCH: Spot of the bomb blast in Kabul which killed 17, injuring 110 #Afghanistan pic.twitter.com/jenhdgdlQI
— ANI (@ANI) 27 January 2018
ಈ ಬಾಂಬ್ ಸ್ಪೋಟದ ನಂತರ ಹತ್ತಿರದ ಕಟ್ಟಡಗಳು ಕಿಡಿಗಳು ಸ್ಪೋಟದ ತೀವ್ರತೆಗೆ ಅಲುಗಾಡಿವೆ ಎಂದು ಸ್ಥಳಿಯರು ತಿಳಿಸಿದ್ದಾರೆ. ಈ ಬಾಂಬ್ ಸ್ಫೋಟದ ನಂತರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಪ್ರಮಾಣದ ಹೋಗೆ ಬರುತ್ತಿರುವ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಅಘಾನಿಸ್ತಾನದಲ್ಲಿನ ಆಸ್ಪತ್ರೆಯಲ್ಲಿ ತುರ್ತುಸ್ಥಿತಿ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿರುವ ಇಟಲಿಯ ಡೆಜನ್ ಪ್ಯಾನಿಕ್ ಇದೊಂದು ಸಾರ್ವಜನಿಕ ಹತ್ಯಾಕಾಂಡ ಎಂದು ಹೇಳಿದ್ದಾರೆ.
ಈ ಬಾಂಬ್ ಸ್ಪೋಟವು ಆಂತರಿಕ ಸಚಿವಾಲಯ, ಐರೋಪ್ಯ ಒಕ್ಕೂಟ ಮತ್ತು ಹೈ ಪೀಸ್ ಕೌನ್ಸಿಲ್, ಮತ್ತು ಕಾಬೂಲ್ ಪೋಲಿಸ್ ಪ್ರಧಾನ ಕಛೇರಿಗಳನ್ನು ಹೊಂದಿರುವ ನಗರದ ಮಧ್ಯಭಾಗದಲ್ಲಿ ಸಂಭವಿಸಿದೆ, ಎಂದು ಆಂತರಿಕ ಇಲಾಖೆಯ ಉಪ ವಕ್ತಾರ ನಸ್ರತ್ ರಹೀಮಿ ತಿಳಿಸಿದ್ದಾರೆ.