ವಿಜ್ಞಾನಿಗಳು ಕಂಡು ಹಿಡಿದ ಆ ಹೊಸ ನಕ್ಷತ್ರ ಯಾವುದು ಗೊತ್ತೇ ?

ವಿಜ್ಞಾನಿಗಳು ನಾಲ್ಕು ಗುರುಗ್ರಹ ಮತ್ತು ಶನಿಗ್ರಹದ ಗಾತ್ರದ ಗ್ರಹಗಳೊಂದಿಗೆ ಸುತ್ತುವರಿದ ಯುವ ನಕ್ಷತ್ರವನ್ನು ಗುರುತಿಸಿದ್ದಾರೆ.

Last Updated : Oct 17, 2018, 01:30 PM IST
ವಿಜ್ಞಾನಿಗಳು ಕಂಡು ಹಿಡಿದ ಆ ಹೊಸ ನಕ್ಷತ್ರ ಯಾವುದು ಗೊತ್ತೇ ? title=

ಲಂಡನ್: ವಿಜ್ಞಾನಿಗಳು ನಾಲ್ಕು ಗುರುಗ್ರಹ ಮತ್ತು ಶನಿಗ್ರಹದ ಗಾತ್ರದ ಗ್ರಹಗಳೊಂದಿಗೆ ಸುತ್ತುವರಿದ ಯುವ ನಕ್ಷತ್ರವನ್ನು ಗುರುತಿಸಿದ್ದಾರೆ.

ಈ ಸೌರಮಂಡಲದಲ್ಲಿ ಇದೆ ಮೊದಲ ಬಾರಿಗೆ ಬೃಹತ್ ಗಾತ್ರದ ನಕ್ಷತ್ರವನ್ನು ಕಂಡು ಹಿಡಿದಿದ್ದಾರೆ. ಈಗ ಕಂಡು ಹಿಡಿರುವ ನಕ್ಷತ್ರವನ್ನು CI ಟಾವ್ ಎಂದು ಗುರುತಿಸಲಾಗಿದ್ದು ಇದು ಗೆಲಾಕ್ಷಿಯ ನರ್ಸರಿ ಕ್ಷೇತ್ರದಿಂದ ಸುಮಾರು 500 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ ಎಂದು ಕೇಂಬ್ರಿಜ್ ವಿಶ್ವವಿದ್ಯಾಲಯದ ಸಂಶೋಧಕರು ತಿಳಿಸಿದ್ದಾರೆ.

ಆಸ್ಟ್ರೋಫಿಸಿಕಲ್ ಜರ್ನಲ್ ಲೆಟರ್ಸ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಈ ವ್ಯವಸ್ಥೆಯು ಹೆಚ್ಚಿನ ಕಕ್ಷೆಗಳ ಪರಿಭ್ರಮಣೆಗಳನ್ನು ಹೊಂದಿದೆ. ಆದರೆ ಇವುಗಳನ್ನು ಇನ್ನು ಪತ್ತೆ ಹಚ್ಚಬೇಕಾಗಿದೆ.ಬಾಹ್ಯ ಗ್ರಹವು ಆಂತರಿಕ ಭಾಗದ ನಕ್ಷತ್ರಕ್ಕಿಂತ ಸಾವಿರಪಟ್ಟು ಅಧಿಕವಾಗಿದೆ ಎಂದು ಹೇಳಲಾಗಿದೆ.  ಆ ಮೂಲಕ ಈ ವ್ಯವಸ್ಥೆಯು ಹೇಗೆ ರೂಪುಗೊಂಡಿರಬಹುದು ಎನ್ನುವ ಕುತೂಹಲಕಾರಿ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಈ ಯುವ ನಕ್ಷತ್ರ ಕೇವಲ ಎರಡು ಮಿಲಿಯನ್ ವರ್ಷಗಳಷ್ಟು ಹಳೆಯದಾಗಿದೆ ಧೂಳು ಮತ್ತು ಮಂಜು ಇದರ ಸುತ್ತಲು ಆವರಿಸಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.ಈ ನಕ್ಷತ್ರವು ಪ್ರೊಟೊಪ್ಲಾನೆಟರಿ ಡಿಸ್ಕ್ ನಲ್ಲಿದೆ ಎಂದು ತಿಳಿದುಬಂದಿದೆ.ಗ್ರಹಗಳು, ಉಪಗ್ರಹಗಳು, ಕ್ಷುದ್ರಗ್ರಹಗಳು ಮತ್ತು ಇತರ ಖಗೋಳೀಯ ವಸ್ತುಗಳು ನಕ್ಷತ್ರಳು ಇಂತಹ ವ್ಯವಸ್ಥೆಗಳಲ್ಲಿ ರಚನೆಯಾಗುವುದರಿಂದ ಇದನ್ನು ಈ ಹೆಸರಿನಿಂದ ಕರೆಯುತ್ತಾರೆ.

Trending News