Coronavirus In India: ಭಾರತದಲ್ಲಿ ದೀರ್ಘಕಾಲದವರೆಗೆ ಕೊರೊನಾ ಇರಲಿದೆ, ಬೇಗ ಮುಕ್ತಿ ಸಿಗಲ್ಲ : WHO

Coronavirus In India - ಭಾರತದ ಗಾತ್ರ ಮತ್ತು ವಿವಿಧ ಪ್ರದೇಶಗಳಲ್ಲಿನ ಜನಸಂಖ್ಯೆಯ ವೈವಿಧ್ಯತೆಯನ್ನು ಗಮನಿಸಿದರೆ, ಭಾರತೀಯ ಜನರು ಕೊರೊನಾ ವೈರಸ್ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿದ್ದಾರೆ ಮತ್ತು ಇದರಿಂದ ಭಾರತದಲ್ಲಿ ದೀರ್ಘಕಾಲದವರೆಗೆ ಕೊರೊನಾ ಸಾಂಕ್ರಾಮಿಕ ಜಾರಿಯಲ್ಲಿರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಮುಖ ವಿಜ್ಯಾನಿ ಸೌಮ್ಯಾ ಸ್ವಾಮಿನಾಥನ್ (WHO Chief Scientist Soumya Swaminathan)ಹೇಳಿದ್ದಾರೆ.

Written by - Nitin Tabib | Last Updated : Aug 25, 2021, 10:43 AM IST
  • ಭಾರತದಲ್ಲಿ ಕೊರೊನಾ ದೀರ್ಘಕಾಲದವರೆಗೆ ಇರಲಿದೆ.
  • ವಿಶ್ವ ಆರೋಗ್ಯ ಸಂಸ್ಥೆಯ ಪ್ರಮುಖ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಅಭಿಪ್ರಾಯ.
  • ಭಾರತದಲ್ಲಿ ಕೊರೊನಾ ಸ್ಥಳೀಯ ಹಂತವನ್ನು ತಲುಪುತ್ತಿದೆ ಎಂದ ಡಾ.ಸೌಮ್ಯಾ.
Coronavirus In India: ಭಾರತದಲ್ಲಿ ದೀರ್ಘಕಾಲದವರೆಗೆ ಕೊರೊನಾ ಇರಲಿದೆ, ಬೇಗ ಮುಕ್ತಿ ಸಿಗಲ್ಲ : WHO title=
Coronavirus in India (File Photo)

ನವದೆಹಲಿ: Coronavirus In India - ಭಾರತದಲ್ಲಿ ಕೊರೊನಾ ವೈರಸ್ ಸೋಂಕು(Corona Infection) ಕ್ಷೀಣಿಸಿದರೂ  ಕೂಡ ವಿಶ್ವ ಸಂಸ್ಥೆಯ ಪ್ರಮುಖ ವಿಜ್ಞಾನಿ ಮಾತ್ರ ಇದನ್ನು ಭಾರತದ ಪಾಲಿಗೆ ನೆಮ್ಮದಿಯ ಸಂಗತಿ ಎಂದು ಭಾವಿಸುವುದಿಲ್ಲ. ಭಾರತದಲ್ಲಿ ಕೊರೊನಾ ಮಹಾಮಾರಿಯ ಒಂದು ರೀತಿ ಸ್ಥಳೀಯ (Endemic Stage) ಹಂತದಲ್ಲಿದ್ದು, ನಿಮ್ನ ಹಾಗೂ ಮಧ್ಯಮ ಮಟ್ಟದ ಸೋಂಕು ಇನ್ನೂ ಜಾರಿಯಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಮುಖ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ (Dr Soumya Swaminathan) ಹೇಳಿದ್ದಾರೆ.

ಒಂದು ನಿರ್ಧಿಷ್ಟಪ್ರಮಾಣದ ಜನಸಂಖ್ಯೆ ಯಾವುದೇ ವೈರಸ್ ನೊಂದಿಗೆ ಬದುಕಲು ಕಲಿತುಕೊಂಡಾಗ ಅದನ್ನು ಸ್ಥಳೀಯ ಹಂತ ಎಂದು ಹೇಳುತ್ತಾರೆ. WHO ತಾಂತ್ರಿಕ ತಂಡ ಭಾರತದ ಕೊವ್ಯಾಕ್ಸಿನ್ ಲಸಿಕೆಯನ್ನು ತನ್ನ ಅಧಿಕೃತ ಲಸಿಕೆಗಳಲ್ಲಿ ಶಾಮೀಲುಗೊಳಿಸಲು ಅನುಮೋದನೆ ನೀಡುವ ಸಾಧ್ಯೆ ಇದೆ ಎಂದು ಡಾ.ಸೌಮ್ಯಾ ಹೇಳಿದ್ದಾರೆ. ಸೆಪ್ಟೆಂಬರ್ ಮಧ್ಯದವರೆಗೆ ಈ ಅನುಮೋದನೆ ಸಿಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ- COVID 22!: ಮೊದಲಿಗಿಂತ ಹೆಚ್ಚು ಮಾರಕವಾಗಲಿದೆ ಕೊರೊನಾ? ವಿಜ್ಞಾನಿಗಳಿಗೆ ಕಾಡುತ್ತಿದೆ Covid-22 ಭಯ

'ದಿ ವೈರ್'ಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ಡಾ. ಸೌಮ್ಯಾ, ಭಾರತದ ಗಾತ್ರ ಮತ್ತು ವಿವಿಧ ಪ್ರದೇಶಗಳಲ್ಲಿನ ಜನಸಂಖ್ಯೆಯ ವೈವಿಧ್ಯತೆಯನ್ನು ಗಮನಿಸಿದರೆ, ಭಾರತೀಯ ಜನರು ಕೊರೊನಾ ವೈರಸ್ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿದ್ದಾರೆ ಮತ್ತು ಇದರಿಂದ ಭಾರತದಲ್ಲಿ ದೀರ್ಘಕಾಲದವರೆಗೆ ಕೊರೊನಾ ಸಾಂಕ್ರಾಮಿಕ ಜಾರಿಯಲ್ಲಿರಲಿದೆ ಎಂದು ಹೇಳಿದ್ದಾರೆ. ಜೊತೆಗೆ ಮುಂದಿನ ಕೆಲ ವರ್ಷಗಳ ವರೆಗೆ ಇದೆ ರೀತಿಯ ಕೊರೊನಾ ಏರಿಳಿತಗಳು ನೋಡಲು ಸಿಗುವ ಸಾಧ್ಯತೆ ಇದೆ ಎಂದಿದ್ದಾರೆ. 

ಇದನ್ನೂ ಓದಿ-Viral News: ಚಿಂಪಾಜಿಯೊಡನೆ ಸಂಬಂಧ; ಮಹಿಳೆಗೆ ಮೃಗಾಲಯಕ್ಕೆ ಬರದಂತೆ ನಿಷೇಧ..!

ಸದ್ಯದ ಕರೋನ ಪರಿಸ್ಥಿತಿಯನ್ನು ನೋಡಿದರೆ, ನಾವು ಕರೋನಾ ಸೋಂಕಿನ ಸ್ಥಳೀಯ ಹಂತವನ್ನು (Corona Epidemic) ಪ್ರವೇಶಿಸಿದ್ದೇವೆ ಎಂದು ಹೇಳಬಹುದು. ಪ್ರಸ್ತುತ, ಭಾರತದಲ್ಲಿ ಕಡಿಮೆ ಮತ್ತು ಮಧ್ಯಮ ಮಟ್ಟದ ಸೋಂಕು ಜಾರಿಯಲ್ಲಿದೆ. ಕರೋನಾ ಸೋಂಕಿನ ವೇಗವು ದೀರ್ಘಕಾಲದವರೆಗೆ ಸ್ಥಿರವಾಗಿದೆ ಮತ್ತು ಇದು ದೀರ್ಘಕಾಲದವರೆಗೆ ಯಾವುದೇ ದೊಡ್ಡ ಹಂತವನ್ನು ತಲುಪಿಲ್ಲ. ಭಾರತದ ಜನಸಂಖ್ಯೆ ಮತ್ತು ಆದರೆ ಪ್ರತಿರಕ್ಷೆಯ ಸ್ಥಿತಿಯನ್ನು ನೋಡಿದ ನಂತರ, ಇದೇ ರೀತಿಯ ಏರಿಳಿತಗಳು ಭವಿಷ್ಯದಲ್ಲಿಯೂ ಮುಂದುವರೆಯಲಿದೆ ಎಂದು ಹೇಳಬಹುದು ಎಂದು ಡಾ. ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.

ಇದನ್ನೂ ಓದಿ-Covid-19 Research: ಕೊವಿಡ್ ನಿಂದ ಬಳಲುತ್ತಿರುವ ಅಧಿಕ BP ಹಾಗೂ ಮಧುಮೇಹದ ಯುವಕರಲ್ಲಿ Brain Stroke ಅಪಾಯ ಹೆಚ್ಚು- ಅಧ್ಯಯನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News