#ClothesHaveNoGender: ಇನ್ಮುಂದೆ ವಿದ್ಯಾರ್ಥಿನಿಯರು ಅಷ್ಟೇ ಅಲ್ಲ ವಿದ್ಯಾರ್ಥಿಗಳು ಕೂಡ ಶಾಲೆಯಲ್ಲಿ ಸ್ಕರ್ಟ್ ಧರಿಸಬಹುದಂತೆ!

Primary school asks boys to wear skirts to ‘promote equality’: ಕೆಲ ಸಮಯದ ಹಿಂದೆ ಸ್ಕರ್ಟ್ ಹಾಕಿಕೊಂಡು ಬಂದಿದ್ದಕ್ಕೆ ವಿದ್ಯಾರ್ಥಿಯೊಬ್ಬನನ್ನು ಶಾಲೆಯಿಂದ ಹೊರಹಾಕಲಾಗಿತ್ತು. ಆ ವಿದ್ಯಾರ್ಥಿಗೆ ನ್ಯಾಯ ದೊರಕಿಸಿಕೊಡಲು ಪುರುಷ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕೂಡ ಸ್ಕರ್ಟ್ ಧರಿಸಿ ತರಗತಿಗೆ ಬರುತ್ತಿದ್ದರು. ಅಂದಿನಿಂದ ಈ ಆಂದೋಲನ ಭಾರಿ ವೇಗ ಪಡೆದುಕೊಂಡಿದೆ. 

Written by - Nitin Tabib | Last Updated : Nov 9, 2021, 06:59 PM IST
  • ಇದೀಗ ವಿದ್ಯಾರ್ಥಿಗಳೂ ಕೂಡ ಶಾಲೆಯಲ್ಲಿ ಸ್ಕರ್ಟ್ ಧರಿಸಲಿದ್ದಾರೆಯೇ?
  • ವಿದ್ಯಾರ್ಥಿಗಳಿಗೂ ಕೂಡ ಶಾಲೆಗೆ ಸ್ಕರ್ಟ್ ಧರಿಸಿ ಬರುವಂತೆ ಸೂಚನೆ.
  • ಮತ್ತೆ ಚರ್ಚೆ ಹುಟ್ಟುಹಾಕಿದ #ClothesHaveNoGender
#ClothesHaveNoGender: ಇನ್ಮುಂದೆ ವಿದ್ಯಾರ್ಥಿನಿಯರು ಅಷ್ಟೇ ಅಲ್ಲ ವಿದ್ಯಾರ್ಥಿಗಳು ಕೂಡ ಶಾಲೆಯಲ್ಲಿ ಸ್ಕರ್ಟ್ ಧರಿಸಬಹುದಂತೆ! title=
#ClothesHaveNoGender (File Photo)

ನವದೆಹಲಿ: Primary school asks boys to wear skirts to ‘promote equality’- ಈ ಜಗತ್ತು ದೊಡ್ಡ ದೊಡ್ಡ ಬದಲಾವಣೆಗಳನ್ನೇ ಕಂಡಿದೆ. ಇಲ್ಲಿ ದೊಡ್ಡ ದೊಡ್ಡ ಸರ್ವಾಧಿಕಾರಿಗಳೇ ಸರ್ವನಾಶವಾಗಿರುವಾಗ ಓರ್ವ ಪ್ರಿನ್ಸಿಪಾಲ್ ಆದೇಶ ಯಾವ ಲೆಕ್ಕಕ್ಕೆ ಮತ್ತು ಅದು ಎಷ್ಟು ಕಾಲ ಉಳಿಯಲಿದೆ? ಸ್ಪ್ಯಾನಿಷ್ ಆಂದೋಲನದ ಕುರಿತು ಹೇಳುವುದಾದರೆ ಅದು ಮತ್ತೆ ಇದೀಗ  ವೇಗವನ್ನು ಪಡೆಯುತ್ತಿದೆ. ನಾವು ಬಟ್ಟೆಗಳನ್ನು ಪುರುಷರು ಮತ್ತು ಮಹಿಳೆಯರ ದೃಷ್ಟಿಕೋನದಿಂದ ನೋಡಿದರೆ, ಈ ಆಂದೋಲನವು ನಿಮಗೆ 'ಬಟ್ಟೆಗೆ ಲಿಂಗವಿಲ್ಲ' (Clothes Have No Gender) ಎಂದು ಸಾರಿ ಹೇಳುತ್ತದೆ. ಈ ಆಂದೋಲನವು ಸ್ಪೇನ್‌ನಲ್ಲಿ  (Spain) ಪ್ರಾರಂಭವಾಯಿತು, ಆದರೆ ಇದೀಗ ಈ ಚಳುವಳಿ ಸ್ಕಾಟ್ಲೆಂಡ್ ಮತ್ತು ಬ್ರಿಟನ್  (UK)ನಲ್ಲಿ ಭಾರಿ ವೇಗವನ್ನು ಪಡೆಯುತ್ತಿದೆ.

ಸ್ಕಾಟಿಷ್ ಶಾಲೆಯ ನಿರ್ಧಾರ 
ಹಾಗೆ ನೋಡಿದರೆ ಈ ಆಂದೋಲನವು 2020 ರಲ್ಲಿ ಪ್ರಾರಂಭವಾಗಿದೆ. ಆದರೆ ಪ್ರಸ್ತುತ ಸ್ಕಾಟ್ಲೆಂಡ್‌ನ ಶಾಲೆಯು ತನ್ನ ಮಕ್ಕಳಿಗೆ ಹೊಸ ಆದೇಶವನ್ನು ನೀಡಿದೆ. ಇದರಲ್ಲಿ ವಿದ್ಯಾರ್ಥಿಗಳು ಕೂಡ ಶಾಲೆಗೆ ಸ್ಕರ್ಟ್ ಧರಿಸಿ ಬರುವಂತೆ ತಿಳಿಸಲಾಗಿದೆ. ಇದರ ಅಡಿಯಲ್ಲಿ ಲಿಂಗ ಅಸಮಾನತೆಯನ್ನು ಹೋಗಲಾಡಿಸುವ ಸಂದೇಶವನ್ನು ಸಹ ನೀಡಲಾಗಿದೆ. ಎಡಿನ್‌ಬರ್ಗ್‌ನ ಕ್ಯಾಸಲ್‌ವ್ಯೂ ಪ್ರಾಥಮಿಕ ಶಾಲೆಯು (Edinburg Castleview Primary School) ಈ ಆದೇಶವನ್ನು ಹೊರಡಿಸಿದೆ. ‘ವಿಯರ್ ಎ ಸ್ಕರ್ಟ್ ಟು ಸ್ಕೂಲ್’ (Wear A Skirt To School) ಅಭಿಯಾನದಲ್ಲಿ ಈ ಶಾಲೆಯ ಮಕ್ಕಳು ಕೂಡ ಪಾಲ್ಗೊಂಡಿದ್ದಾರೆ.  #ClothesHaveNoGender ಆಂದೋಲನದ ಭಾಗವೂ ಕೂಡ ಅವರು ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಆಂದೋಲನಕ್ಕೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ-Viral News: 30 ವರ್ಷಗಳಿಂದ ಹೇರ್ ಕಟ್ ಮಾಡಿಲ್ಲ, ಈ ಮಹಿಳೆಗೆ ಏನಾಗಿದೆ ನೋಡಿ..!

ಇದನ್ನೂ ಓದಿ-China: ಈ ನಗರದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಇರ್ತಾರೆ ಒಂದಕ್ಕಿಂತ ಹೆಚ್ಚು Girl Friend, ಕಾರಣ ಏನು ಗೊತ್ತಾ?

ಆಂದೋಲನ ಆರಂಭಗೊಂಡಿದ್ದಾದರು ಹೇಗೆ?
ಸ್ಪೇನ್ ನಲ್ಲಿ ಕೆಲ ಸಮಯದ ಹಿಂದೆ ಸ್ಕರ್ಟ್ ಹಾಕಿಕೊಂಡು ಬಂದಿದ್ದಕ್ಕೆ ವಿದ್ಯಾರ್ಥಿಯೊಬ್ಬನನ್ನು ಶಾಲೆಯಿಂದ ಹೊರಹಾಕಲಾಗಿತ್ತು. ಆ ವಿದ್ಯಾರ್ಥಿಗೆ ನ್ಯಾಯ ದೊರಕಿಸಿಕೊಡಲು ಪುರುಷ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸ್ಕರ್ಟ್ ಧರಿಸಿ ತರಗತಿಗೆ ಬರಲು ಆರಂಭಿಸಿದ್ದರು. ಅಂದಿನಿಂದ ಈ ಆಂದೋಲನವು ಪ್ರಪಂಚದ ಇತರ ಕೆಲವು ದೇಶಗಳಲ್ಲಿ ವೇಗವನ್ನು ಪಡೆಯುತ್ತಿದೆ. ಲಿಂಗ ಸಮಾನತೆಯ ಹೆಸರಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅದೇ ಸಮಯದಲ್ಲಿ, ಈ ಸ್ಕಾಟಿಷ್ ಶಾಲೆಯ ಆದೇಶದ ನಂತರ, ಮತ್ತೊಮ್ಮೆ ಈ ಚಳುವಳಿಯು ಭಾರಿ ಸುದ್ದಿ ಮಾಡುತ್ತಿದೆ.

ಇದನ್ನೂ ಓದಿ-Hindu Temple: ಪಾಕಿಸ್ತಾನದಲ್ಲಿ ಮತ್ತೆ ಹಿಂದೂಗಳ ವಿರುದ್ಧ ತಾರತಮ್ಯ, ದೇವಸ್ಥಾನಕ್ಕೆ ಭೂಮಿ ನೀಡಲು ನಿರಾಕರಿಸಿದ ಸರ್ಕಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News