AstraZeneca vaccine Latest Update - ಈ ಕುರಿತು ಹೇಳಿಕೆ ನೀಡಿರುವ UK ಔಷಧಿ ನಿಯಂತ್ರಕ, ಕೊರೊನಾ ವೈರಸ್ ವಿರೋಧಿ ಲಸಿಕೆ ಹಾಕಿಸಿಕೊಂಡ ಬಳಿಕ ರಕ್ತ ಹೆಪ್ಪುಗಟ್ಟಿದ (Blood Clotting) ಒಟ್ಟು 30 ಪ್ರಕರಣಗಳನ್ನು ಗುರುತಿಸಲಾಗಿದ್ದು, ಅವರಲ್ಲಿ 7 ಜನರು ಸಾವನ್ನಪ್ಪಿದ್ದಾರೆ. ಎಂದು ಹೇಳಿದೆ. ಆದರೆ, ಈ ಅಪಾಯದ ಹೋಲಿಕೆಯಲ್ಲಿ ಲಸಿಕೆಯ(Astrazeneca Vaccine) ಲಾಭಗಳು ಅಧಿಕವಾಗಿವೆ ಎಂದು ಹೇಳಿದೆ.
ಔಷಧಿ ಹಾಗೂ ಆರೋಗ್ಯ ರಕ್ಷಣೆ ನಿಯಂತ್ರಕ ಸಂಸ್ಥೆಯ ಹೇಳಿಕೆಯ ಪ್ರಕಾರ ರಕ್ತ ಹೆಪ್ಪುಗಟ್ಟುವಿಕೆಯಿಂದಾಗುವ ಅಪಾಯ ತೀರಾ ಕಡಿಮೆಯಾಗಿದ್ದು, ಜನರು ಲಸಿಕೆ (Corona Vaccine) ಹಾಕಿಸುವುದನ್ನು ಮುಂದುವರೆಸಬೇಕು ಎಂದು ಹೇಳಿದೆ.
ಈ ಎಲ್ಲಾ ಪ್ರಕರಣಗಳು ಮಾರ್ಚ್ 24ರವರೆಗೆ ಮಾತ್ರ ಬೆಳಕಿಗೆ ಬಂದಿವೆ. ಮಾರ್ಚ್ 24ರವರೆಗೆ ಸುಮಾರು 1.81 ಕೋಟಿ ಲಸಿಕೆಯ ಪ್ರಮಾಣಗಳನ್ನು ನೀಡಲಾಗಿದೆ ಹಾಗೂ ಫೈಜರ್-ಬಯೋ-ಎನ್-ಟೆಕ್ ಲಸಿಕೆಗೆ ಸಂಬಂಧಿಸಿದಂತೆ ಈ ರೀತಿಯ ಯಾವುದೇ ವರದಿಗಳು ಇದುವರೆಗೆ ಗಮನಿಸಲಾಗಿಲ್ಲ ಎಂದಿದೆ.
ಇದನ್ನೂ ಓದಿ-Covid 19: ತಾರಕಕ್ಕೇರಿದ ಕರೋನಾ, ಫ್ರಾನ್ಸ್‌ನಲ್ಲಿ ಮೂರನೇ ಬಾರಿಗೆ ಲಾಕ್‌ಡೌನ್ ಘೋಷಣೆ
Astrazenecaಗೆ ಸಂಬಂಧಿಸಿದ ಈ ಆತಂಕದ ಹಿನ್ನೆಲೆ ಕೆನಡಾ, ಫ್ರಾನ್ಸ್, ಜರ್ಮನಿ ಹಾಗೂ ನೆದರ್ಲ್ಯಾಂಡ್ ಗಳಂತಹ ಕೆಲ ದೇಶಗಳಲ್ಲಿ ವೃದ್ಧರಿಗೆ ಈ ಲಸಿಕೆಯನ್ನು ಹಾಕದಿರಲು ಸೂಚಿಸಲಾಗಿದೆ.
ಇದನ್ನೂ ಓದಿ-ಭಾರತದ ಜೊತೆಗಿನ ವ್ಯಾಪಾರ ಪುನರಾರಂಭದ ವಿಚಾರವಾಗಿ ಯೂಟರ್ನ್ ಹೊಡೆದ ಪಾಕ್
ವಿಶ್ವಆರೋಗ್ಯ ಸಂಘಟನೆ ವಿವಿಧ ದೇಶಗಳಿಗೆ ಈ ಲಸಿಕೆಯ ಬಳಕೆಯನ್ನು ಜಾರಿಯಲ್ಲಿಡುವಂತೆ ಆಗ್ರಹಿಸಿದೆ.
ಇದನ್ನೂ ಓದಿ- Yoga: ಈ ದೇಶದಲ್ಲಿ 28 ವರ್ಷಗಳಿಂದ ಯೋಗ ಬ್ಯಾನ್, ಕಾರಣ ಏನ್ ಗೊತ್ತಾ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.