ವಾಷಿಂಗ್ಟನ್: ಯುಎಸ್ ಅಧ್ಯಕ್ಷ ಜೋ ಬಿಡನ್ (Joe Biden) ಫಿಟ್ ಆಗಿದ್ದಾರೆಯೇ? ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಿಂದ ಈ ಪ್ರಶ್ನೆ ಉದ್ಭವಿಸಿದೆ, ಇದರಲ್ಲಿ ವಿಮಾನದ ಮೆಟ್ಟಿಲುಗಳನ್ನು ಏರುವಾಗ ಜೋ ಬಿಡನ್ ಎಡವಿ ಬಿದ್ದಿದ್ದಾರೆ. ವಾಸ್ತವವಾಗಿ ಅಮೇರಿಕ ಅಧ್ಯಕ್ಷ ಜೋ ಬಿಡನ್ ಅಟ್ಲಾಂಟಾಗೆ ತೆರಳಲು ವಿಮಾನ ಹತ್ತುವ ವೇಳೆ ಮೂರು ಬಾರಿ ಎಡವಿ ಬಿದ್ದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ವೇತಭವನವು ಗಾಳಿಯನ್ನು ದೂಷಿಸಿದೆ.
ಇದ್ದಕ್ಕಿದ್ದಂತೆ ಹದಗೆಟ್ಟ ಬ್ಯಾಲೆನ್ಸ್:
ಅಮೇರಿಕ ಅಧ್ಯಕ್ಷ ಜೋ ಬಿಡನ್ (Joe Biden) ಅವರು ಶುಕ್ರವಾರ ಅಟ್ಲಾಂಟಾ (Atlanta)ಗೆ ಭೇಟಿ ನೀಡುತ್ತಿದ್ದರು, ಅಲ್ಲಿ ಅವರು ಏಷ್ಯನ್-ಅಮೇರಿಕನ್ ಸಮುದಾಯದ ಮುಖಂಡರನ್ನು ಭೇಟಿಯಾಗಬೇಕಿತ್ತು. 'ದಿ ಸನ್' ವರದಿಯ ಪ್ರಕಾರ, ಅವರು ಅಟ್ಲಾಂಟಾಗೆ ತೆರಳಲು ಏರ್ ಫೋರ್ಸ್ ಒನ್ ವಿಮಾನ ಹತ್ತಲು ಮೆಟ್ಟಿಲುಗಳನ್ನು ಏರಲು ಮುಂದಾದಾಗ ಬ್ಯಾಲೆನ್ಸ್ ತಪ್ಪಿ ಅವರು ಮೆಟ್ಟಿಲುಗಳ ಮೇಲೆ ಎಡವಿದರು. ಈ ಘಟನೆ ಬಿಡೆನ್ಗೆ ಒಮ್ಮೆ ಅಲ್ಲ ಮೂರು ಬಾರಿ ಸಂಭವಿಸಿದೆ. ಆದ್ದರಿಂದ ಅವರ ಆರೋಗ್ಯದ ಬಗ್ಗೆ ಪ್ರಶ್ನೆಗಳು ಎದ್ದಿವೆ.
It had to be done. pic.twitter.com/7PsDHGKbiC
— Caleb Hull (@CalebJHull) March 19, 2021
ಇದನ್ನೂ ಓದಿ - H-1B visa ಪಾಲಿಸಿ ಬಗ್ಗೆ ಬಿಡೆನ್ ಮಹತ್ವದ ನಿರ್ಧಾರ
ಸೈಡ್ ರೇಲಿಂಗ್ ಬೆಂಬಲ :
ವಿಮಾನದ ಮೆಟ್ಟಿಲುಗಳ ಮೇಲೆ ಬಿಡೆನ್ ಮೂರು ಬಾರಿ ಎಡವಿ ಬಿದ್ದಿರುವುದು ವೈರಲ್ ವೀಡಿಯೊದಲ್ಲಿ ಕಂಡುಬರುತ್ತದೆ. ಮೊದಲೆರಡು ಬಾರಿ ಕೈ ಅಡ್ಡ ನೀಡಿ ಬೀಳುವುದರಿಂದ ಬಚಾವ್ ಆದ ಅಧ್ಯಕ್ಷ ಜೋ ಬಿಡನ್ ಮೂರನೆಯ ಬಾರಿ ಅವನು ಮೊಣಕಾಲುಗಳ ಮೇಲೆ ಬಿದ್ದರು. ಇದರ ನಂತರ ಅಧ್ಯಕ್ಷರು ಮೆಟ್ಟಿಲುಗಳ ಸೈಡ್ ರೇಲಿಂಗ್ ಅನ್ನು ಹಿಡಿದುಕೊಂಡು ವಿಮಾನವನ್ನು ಹತ್ತಿದರು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ಈವರೆಗೆ ಹಲವು ಮಂದಿ ನೋಡಿದ್ದು ರಾಷ್ಟ್ರಪತಿಗಳ ಆರೋಗ್ಯದ ಬಗ್ಗೆ ಜನರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ - ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಕ್ಷಮಾಪಣೆಗೆ ಪಟ್ಟು ಹಿಡಿದ ರಷ್ಯಾ
ಶ್ವೇತಭವನದ ಪ್ರತಿಕ್ರಿಯೆ:
ಅದೇ ಸಮಯದಲ್ಲಿ ಪ್ರತಿಕ್ರಿಯೆ ನೀಡಿರುವ ಶ್ವೇತಭವನದ (White House) ಪತ್ರಿಕಾ ಕಾರ್ಯದರ್ಶಿ ಕರಿನ್ ಜೀನ್-ಪಿಯರೆ, ಅಧ್ಯಕ್ಷರು 100% ಆರೋಗ್ಯವಾಗಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದರು. ವಿಮಾನದ ಮೆಟ್ಟಿಲು ಏರುವಾಗ ಬ್ಯಾಲೆನ್ಸ್ ತಪ್ಪಿ ಈ ಘಟನೆ ಸಂಭವಿಸಿದೆ. ಅಧ್ಯಕ್ಷರು ಫಿಟ್ ಆಗಿದ್ದಾರೆ ಎಂದವರು ತಿಳಿಸಿದ್ದಾರೆ.
ಜೀನ್-ಪಿಯರೆ ಪ್ರಕಾರ, ಮೆಟ್ಟಿಲುಗಳನ್ನು ಹತ್ತುವಾಗ ಗಾಳಿಯ ಹರಿವು ತುಂಬಾ ವೇಗವಾಗಿತ್ತು. ಹಾಗಾಗಿ ಬಹುಶಃ 78 ವರ್ಷದ ಜೋ ಬಿಡೆನ್ ಅವರ ಬ್ಯಾಲೆನ್ಸ್ ತಪ್ಪಿದ್ದೆ ಎಂದವರು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.