coriander water : ಪ್ರತಿದಿನ 1 ಗ್ಲಾಸ್ ಕೊತ್ತಂಬರಿ ನೀರು ಕುಡಿಯಿರಿ : ಇದರಿಂದ ದೇಹಕ್ಕಿದೆ ಅದ್ಭುತ ಪ್ರಯೋಜನಗಳು!

ಕೊತ್ತಂಬರಿ ಸೊಪ್ಪಿನ ನೀರು ಆರೋಗ್ಯಕ್ಕೆ ತುಂಬಾ ಪ್ರಯೋಜನಗಳನ್ನು ಒದಗಿಸುವ ಕೆಲಸ ಮಾಡುತ್ತದೆ. ಈ ಸುದ್ದಿಯಲ್ಲಿ, ನಾವು ನಿಮಗಾಗಿ ಕೊತ್ತಂಬರಿ ನೀರಿನ ತಯಾರಿ ಮತ್ತು ಬಳಕೆ ಮತ್ತು ಅದರ ಪ್ರಯೋಜನಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ.

Written by - Channabasava A Kashinakunti | Last Updated : Aug 6, 2021, 10:30 PM IST
  • ಇಂದು ನಾವು ನಿಮಗಾಗಿ ಕೊತ್ತಂಬರಿ ನೀರಿನ ಪ್ರಯೋಜನ
  • ಕೊತ್ತಂಬರಿ ತೂಕ ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಕಾರಿ
  • ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡುವಲ್ಲಿ ಕೊತ್ತಂಬರಿ ನೀರು
coriander water : ಪ್ರತಿದಿನ 1 ಗ್ಲಾಸ್ ಕೊತ್ತಂಬರಿ ನೀರು ಕುಡಿಯಿರಿ : ಇದರಿಂದ ದೇಹಕ್ಕಿದೆ ಅದ್ಭುತ ಪ್ರಯೋಜನಗಳು! title=

ಇಂದು ನಾವು ನಿಮಗಾಗಿ ಕೊತ್ತಂಬರಿ ನೀರಿನ ಪ್ರಯೋಜನಗಳನ್ನು ತಂದಿದ್ದೇವೆ. ಕೊತ್ತಂಬರಿ ಪುಡಿ ಭಾರತೀಯ ಅಡುಗೆಮನೆಯ ಒಂದು ಭಾಗವಾಗಿದೆ, ಇದನ್ನ ಆಹಾರಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಅಲ್ಲದೆ, ಹಸಿ ಕೊತ್ತಂಬರಿ ಎಲೆಗಳು ಆಹಾರ ಪದಾರ್ಥಗಳ ವಾಸನಾಗೆ ಮತ್ತೆ ರುಚಿಗೆ ತುಂಬಾ ಸಹಾಯಕವಾಗಿದೆ. ಆದರೆ ಕೊತ್ತಂಬರಿ ಸೊಪ್ಪಿನ ನೀರು ಆರೋಗ್ಯಕ್ಕೆ ತುಂಬಾ ಪ್ರಯೋಜನಗಳನ್ನು ಒದಗಿಸುವ ಕೆಲಸ ಮಾಡುತ್ತದೆ. ಈ ಸುದ್ದಿಯಲ್ಲಿ, ನಾವು ನಿಮಗಾಗಿ ಕೊತ್ತಂಬರಿ ನೀರಿನ ತಯಾರಿ ಮತ್ತು ಬಳಕೆ ಮತ್ತು ಅದರ ಪ್ರಯೋಜನಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ.

ಕೊತ್ತಂಬರಿಯಲ್ಲಿ ಏನಿದೆ?

ಕೊತ್ತಂಬರಿ ನೀರಿನಲ್ಲಿ(Coriander Water) ಪೊಟ್ಯಾಸಿಯಮ್, ಕ್ಯಾಲ್ಸಿಯಂ, ವಿಟಮಿನ್ ಸಿ ಮತ್ತು ಮೆಗ್ನೀಸಿಯಮ್ ಹೇರಳವಾಗಿ ಕಂಡುಬರುತ್ತವೆ ಮತ್ತು ಈ ಎಲ್ಲಾ ಅಂಶಗಳು ರೋಗಗಳನ್ನು ದೂರವಿರಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : ಈ ಸಮಸ್ಯೆಗಳಿರುವ ಪುರುಷರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಅರಶಿನ ಮತ್ತು ಜೇನುತುಪ್ಪ

ಕೊತ್ತಂಬರಿ ನೀರನ್ನು ಈ ರೀತಿ ತಯಾರಿಸಿ 

ಆಯುರ್ವೇದ ತಜ್ಞರಾದ ಡಾ ಅಬ್ರಾರ್ ಮುಲ್ತಾನಿಯವರ ಪ್ರಕಾರ, ಜೀರಿಗೆ, ಕೊತ್ತಂಬರಿ ಬೀಜಗಳು(Coriander Seeds), ಮೆಂತ್ಯ ಬೀಜ ಮತ್ತು ಕರಿಮೆಣಸು ಸೇರಿಸಿ ರಾತ್ರಿಯಿಡೀ ನೆನೆಸಿಡಿ. ಬೆಳಿಗ್ಗೆ, ನಿಂಬೆ ರಸ ಮತ್ತು ಜೇನುತುಪ್ಪವನ್ನು ಸೇರಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ನೀವು ಜೀರಿಗೆ, ಕೊತ್ತಂಬರಿ ಬೀಜ, ಮೆಂತ್ಯ ಬೀಜ ಮತ್ತು ಕರಿಮೆಣಸು ತಿನ್ನಲು ಬಯಸದಿದ್ದರೆ, ನೀವು ಅವುಗಳನ್ನು ಜರಡಿ ಮೂಲಕ ಫಿಲ್ಟರ್ ಮಾಡಿ ಮತ್ತು ಬೇರ್ಪಡಿಸಬಹುದು.

ಕೊತ್ತಂಬರಿ ನೀರಿನ ಅದ್ಭುತ ಪ್ರಯೋಜನಗಳು

ಕೊತ್ತಂಬರಿಯಲ್ಲಿರುವ ಅಂಶಗಳು ತೂಕ ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ(Weight Loss) ಮಾಡಲು ಸಹಕಾರಿಯಾಗಿದೆ. ಕೊತ್ತಂಬರಿ ನೀರು ದೇಹದಲ್ಲಿನ ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸುತ್ತದೆ, ಇದರಿಂದಾಗಿ ಇದು ದೇಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : Benefits of Black Pepper: ಕೇವಲ ಅಡುಗೆಯಲ್ಲಷ್ಟೇ ಅಲ್ಲ, ಈ ಕೆಲಸಕ್ಕೂ ನೀವು ಕರಿ ಮೆಣಸು ಬಳಸಬಹುದು

ಕೊತ್ತಂಬರಿ ನೀರನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ(Immunity Power) ಹೆಚ್ಚಾಗುತ್ತದೆ. ಈ ನೀರಿನಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ದೇಹದಲ್ಲಿನ ಫ್ರೀ ರಾಡಿಕಲ್‌ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಕಾರಣದಿಂದಾಗಿ ಅನಾರೋಗ್ಯಕ್ಕೆ ತುತ್ತಾಗುವ ಅಪಾಯ ಕಡಿಮೆಯಾಗುತ್ತದೆ.

ಕೊತ್ತಂಬರಿ ನೀರಿನ ಅದ್ಭುತ ಪ್ರಯೋಜನಗಳು :

1. ಕೊತ್ತಂಬರಿ(Coriander)ಯಲ್ಲಿರುವ ಗುಣಗಳು ತೂಕ ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಕಾರಿ. ಕೊತ್ತಂಬರಿ ನೀರು ದೇಹದಲ್ಲಿನ ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸುತ್ತದೆ, ಇದರಿಂದಾಗಿ ಇದು ದೇಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

2. ಕೊತ್ತಂಬರಿ ನೀರನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ. ಈ ನೀರಿನಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ದೇಹದಲ್ಲಿನ ಫ್ರೀ ರಾಡಿಕಲ್‌ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಕಾರಣದಿಂದಾಗಿ ಅನಾರೋಗ್ಯಕ್ಕೆ ತುತ್ತಾಗುವ ಅಪಾಯ ಕಡಿಮೆ.

ಇದನ್ನೂ ಓದಿ : ಹಾಲಿನಲ್ಲಿ ಒಂದು ತುಂಡು ಬೆಲ್ಲ ಬೆರೆಸಿ ಕುಡಿದರೆ ಈ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ

3. ಇದರ ಬಳಕೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಸಂಧಿವಾತದ ನೋವನ್ನು ಕಡಿಮೆ ಮಾಡುತ್ತದೆ. ಇದರ ಜೊತೆಯಲ್ಲಿ, ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ ಮತ್ತು ದೇಹದಲ್ಲಿ ನೀರಿನ ಕೊರತೆಯನ್ನು ನೀಗಿಸುತ್ತದೆ.

4. ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡುವಲ್ಲಿ ಕೊತ್ತಂಬರಿ ನೀರು ಕೂಡ ವಿಶೇಷ ಪಾತ್ರ ವಹಿಸುತ್ತದೆ. ಇದು ಜೀರ್ಣಕಾರಿ ಸಮಸ್ಯೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ, ಇದರಿಂದಾಗಿ ಜೀರ್ಣಾಂಗ ವ್ಯವಸ್ಥೆಯು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.

5. ಕೊತ್ತಂಬರಿ ನೀರು ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಇದನ್ನು ಕುಡಿಯುವುದರಿಂದ ವಿಷಕಾರಿ ಅಂಶಗಳು ದೇಹದಿಂದ ಹೊರಬರುತ್ತವೆ. ಈ ಕಾರಣದಿಂದಾಗಿ ಸೋಂಕಿನ ಅಪಾಯ ಇರುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News