ಬ್ರಿಟನ್‌, ದಕ್ಷಿಣ ಆಫ್ರಿಕಾದ ಬಳಿಕ ಈಗ ಜಪಾನ್‌ನಲ್ಲಿ ಹೊಸ ರೂಪದ Coronavirus ಪತ್ತೆ!

ವಿಶ್ವ ಆರೋಗ್ಯ ಸಂಸ್ಥೆಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ರೂಪಾಂತರಗೊಂಡ ವೈರಸ್ ಬಗ್ಗೆ ಹೆಚ್ಚಿನ ಪರಿಶೀಲನಾ ಕೆಲಸ ನಡೆಸಲಾಗುತ್ತಿದೆ ಎಂದು ಜಪಾನ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫೆಕ್ಷಿಯಸ್ ಡಿಸೀಸಸ್ ತಿಳಿಸಿದೆ.

Written by - Yashaswini V | Last Updated : Jan 11, 2021, 10:43 AM IST
  • ಬ್ರೆಜಿಲ್ ನಿಂದ ಬಂದ ನಾಲ್ವರಲ್ಲಿ ಹೊಸ ಬಗೆಯ ಕೊರೋನಾವೈರಸ್ ಪತ್ತೆ
  • ಹೊಸ ರೀತಿಯ ಕೊರೋನಾವೈರಸ್ ಪೀಡಿತರ ಪೈಕಿ ಒಬ್ಬರ ಸ್ಥಿತಿ ಗಂಭೀರ
  • ಹೊಸ ವೈರಸ್ ಬಗ್ಗೆ ಮಾಹಿತಿ ಖಚಿತಪಡಿಸಿರುವ ಜಪಾನ್ ಆರೋಗ್ಯ ಇಲಾಖೆ
ಬ್ರಿಟನ್‌, ದಕ್ಷಿಣ ಆಫ್ರಿಕಾದ ಬಳಿಕ ಈಗ ಜಪಾನ್‌ನಲ್ಲಿ ಹೊಸ ರೂಪದ Coronavirus ಪತ್ತೆ! title=
Britain Corona Strain found in Japan

ನವದೆಹಲಿ: COVID-19 ವಿಷಯದಲ್ಲಿ ಒಂದಾದ ಮೇಲೆ ಇನ್ನೊಂದು ಸಮಸ್ಯೆಗಳು ಕಂಡುಬರುತ್ತಲೇ ಇವೆ. ಕೊರೋನಾ (Corona) ಕಡಿಮೆ ಆಯ್ತು ಎನ್ನುವಷ್ಟರಲ್ಲಿ, ಬ್ರಿಟನ್ (Britain) ಮತ್ತು ದಕ್ಷಿಣ ಆಫ್ರಿಕಾ (South Africa)ಗಳಲ್ಲಿ ಹೊಸ ಸ್ವರೂಪದ ಕೊರೋನಾ ವೈರಸ್ (New COVID Strain) ಕಾಣಿಸಿಕೊಂಡಿತ್ತು. ಅದು ನಿಯಂತ್ರಣಕ್ಕೆ ಬರುತ್ತಿದೆ ಎನ್ನುವಷ್ಟರಲ್ಲಿ ಈಗ ಜಪಾನ್ (Japan)ನಲ್ಲಿ ಪತ್ತೆಯಾಗಿ ಆತಂಕ ಸೃಷ್ಟಿಸಿದೆ.

ಜಪಾನ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫೆಕ್ಷಿಯಸ್ ಡಿಸೀಸಸ್ (Japan National Institute of Infectious Disease) ಸಂಸ್ಥೆಯ ಪ್ರಕಾರ ಬ್ರೆಝಿಲ್‌ (Brazil) ನಿಂದ ಬಂದ ನಾಲ್ವರು ಪ್ರಯಾಣಿಕರಲ್ಲಿ ಹೊಸರೂಪದ ಕೊರೊನಾ ವೈರಸ್ ಕಂಡುಬಂದಿದೆ.

ಜಪಾನ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫೆಕ್ಷಿಯಸ್ ಡಿಸೀಸಸ್ ಭಾನುವಾರ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ಬ್ರಿಟನ್ (Britain) ಹಾಗೂ ದಕ್ಷಿಣ ಆಫ್ರಿಕಾ (South Africa)ಗಳಲ್ಲಿ ಕಂಡುಬಂದಿದ್ದ ಹೊಸ ಸ್ವರೂಪದ ಕೊರೊನಾ ವೈರಸ್ ಗುಣಲಕ್ಷಣಗಳೇ ಜಪಾನ್ ನಲ್ಲೂ ಪತ್ತೆಯಾಗಿವೆ. ಹಾಗಾಗಿ ಇದನ್ನು ರೂಪಾಂತರಗೊಂಡ ವೈರಸ್ ಆವೃತ್ತಿ ಆಗಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : Corona Strain: ಬೆಂಗಳೂರಿನ ಬಳಿಕ ಶಿವಮೊಗ್ಗಕ್ಕೂ ಶಾಕ್

ಜಪಾನಿನಲ್ಲಿ ಕಾಣಿಸಿಕೊಂಡಿರುವ ಹೊಸ ಬಗೆಯ ವೈರಸ್ ಅನ್ನು ಖಚಿತವಾಗಿ 'ಕೊರೋನಾ ವೈರಸ್' ಎಂದು ಹೇಳಿಲ್ಲವಾದರೂ ಹೊಸ ರೀತಿಯ ವೈರಸ್ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ‌.

ಜಪಾನ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫೆಕ್ಷಿಯಸ್ ಡಿಸೀಸಸ್ ಅಲ್ಲದೆ ಜಪಾನ್ ಆರೋಗ್ಯ ಇಲಾಖೆ ಪ್ರತ್ಯೇಕ ಹೇಳಿಕೆ ಬಿಡುಗಡೆ ಮಾಡಿದೆ. ಅದರ ಪ್ರಕಾರ ಜನವರಿ 2ರಂದು ಬ್ರೆಝಿಲ್‌ನಿಂದ ಜಪಾನ್ ಹನೇಡಾ ವಿಮಾನ ನಿಲ್ದಾಣಕ್ಕೆ ಬಂದಿರುವ ನಾಲ್ವರು ಪ್ರಯಾಣಿಕರಲ್ಲಿ ಹೊಸ ಸ್ವರೂಪದ ವೈರಸ್ ಪತ್ತೆಯಾಗಿದೆ. ಈ ನಾಲ್ವರ ಪೈಕಿ 40 ವರ್ಷದ ಪುರುಷನ ಸ್ಥಿತಿ ಗಂಭೀರವಾಗಿದೆ‌. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ : Corona new strain: ಈ ದೇಶದಲ್ಲಿ ಪ್ರಯಾಣ ಇತಿಹಾಸ ಹೊಂದಿರದ ಯುವಕನಲ್ಲೂ ಸೋಂಕು ಪತ್ತೆ

ವಿಶ್ವ ಆರೋಗ್ಯ ಸಂಸ್ಥೆ (World Health Organization)ಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ರೂಪಾಂತರಗೊಂಡ ವೈರಸ್ ಬಗ್ಗೆ ಹೆಚ್ಚಿನ ಪರಿಶೀಲನಾ ಕೆಲಸ ನಡೆಸಲಾಗುತ್ತಿದೆ ಎಂದು ಜಪಾನ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫೆಕ್ಷಿಯಸ್ ಡಿಸೀಸಸ್ ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News