Afghanistan Update: ಪಂಜಶೀರ್ ಪ್ರಾಂತ್ಯದ ಮೇಲೆ ತಾಲಿಬಾನ್ ನಿಯಂತ್ರಣ!

ಆಗಸ್ಟ್ 15 ರಂದು, ತಾಲಿಬಾನ್ ಅಫ್ಘಾನಿಸ್ತಾನದ ರಾಜಧಾನಿ ಸೇರಿದಂತೆ ಬಹುತೇಕ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿತು. ಆಗಸ್ಟ್ 15ರಂದು ಕಾಬೂಲ್ ಪತನದ ನಂತರ ಪಂಜ್‌ಶಿರ್ ಪ್ರಾಂತ್ಯವು ಪ್ರತಿರೋಧದ ಪಡೆಗಳ ನೇತೃತ್ವದ ಏಕೈಕ ಪ್ರತಿಭಟನಾ ಕೇಂದ್ರವಾಗಿತ್ತು. 

Written by - Yashaswini V | Last Updated : Sep 6, 2021, 11:29 AM IST
  • ತಾಲಿಬಾನ್ ಪಡೆಗಳು ಪಂಜ್‌ಶಿರ್ ಪ್ರಾಂತ್ಯವನ್ನು ಸಂಪೂರ್ಣವಾಗಿ ನಿಯಂತ್ರಿಸಿದೆ
  • ಇಲ್ಲಿಯವರೆಗೆ, ಅಫ್ಘಾನಿಸ್ತಾನದ ಪಂಜ್‌ಶಿರ್ ಕಣಿವೆಯಲ್ಲಿ ಪಂಜ್‌ಶಿರ್ ರೆಸಿಸ್ಟೆನ್ಸ್ ಫೋರ್ಸ್ ನಿರಂತರವಾಗಿ ತಾಲಿಬಾನ್ ವಿರುದ್ಧ ಹೋರಾಡುತ್ತಿತ್ತು
  • ಆಗಸ್ಟ್ 15ರಂದು ಕಾಬೂಲ್ ಪತನದ ನಂತರ ಪಂಜ್‌ಶಿರ್ ಪ್ರಾಂತ್ಯವು ಪ್ರತಿರೋಧದ ಪಡೆಗಳ ನೇತೃತ್ವದ ಏಕೈಕ ಪ್ರತಿಭಟನಾ ಕೇಂದ್ರವಾಗಿತ್ತು
Afghanistan Update: ಪಂಜಶೀರ್ ಪ್ರಾಂತ್ಯದ ಮೇಲೆ ತಾಲಿಬಾನ್  ನಿಯಂತ್ರಣ! title=
Panjshir province now under control- claims Taliban

Afghanistan Update: ಅಫ್ಘಾನಿಸ್ತಾನದ ಪಂಜಶೀರ್ ಪ್ರಾಂತ್ಯದಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಸಂಬಂಧಿಸಿದಂತೆ, ತಾಲಿಬಾನ್ ಪಡೆಗಳು ಪಂಜ್‌ಶಿರ್ ಪ್ರಾಂತ್ಯವನ್ನು ವಶಪಡಿಸಿಕೊಂಡಿವೆ ಎಂದು ಸೋಮವಾರ ಹೊಸ ಹೇಳಿಕೆಯಲ್ಲಿ ಹೇಳಿಕೊಂಡಿದೆ. ಇದು ದೇಶದ ಕೊನೆಯ ಪ್ರತಿರೋಧದ ಭದ್ರಕೋಟೆ ಆಗಿತ್ತು ಎಂಬುದು ಗಮನಾರ್ಹವಾಗಿದೆ.

ದೇಶದಲ್ಲಿ ಸಂಪೂರ್ಣ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಇತ್ತೀಚಿನ ಪ್ರಯತ್ನಗಳು ಫಲಿತಾಂಶಗಳನ್ನು ತಂದಿವೆ ಮತ್ತು ತಾಲಿಬಾನ್ (Taliban) ಪಡೆಗಳು ಪಂಜ್‌ಶಿರ್ ಪ್ರಾಂತ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿವೆ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಸುದ್ದಿ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದಾರೆ. ಪಂಜಶೀರ್ ಪ್ರತಿರೋಧದ ವಕ್ತಾರ ಫಾಹೀಮ್ ದಷ್ಟಿ ಅವರು ಭಾನುವಾರ ತಾಲಿಬಾನ್ ಜೊತೆಗಿನ ಘರ್ಷಣೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾದ ಕೆಲವೇ ಗಂಟೆಗಳಲ್ಲಿ ಈ ಹೇಳಿಕೆ ಹೊರಬಿದ್ದಿದೆ.

ಇದನ್ನೂ ಓದಿ - Afghanistan Crisis: ಪಂಜ್​ಶೀರ್ ವಶಕ್ಕೆ ಯತ್ನಿಸಿದ್ದ 600ಕ್ಕೂ ಹೆಚ್ಚು ತಾಲಿಬಾನ್ ಉಗ್ರರ ಹತ್ಯೆ!

ಏತನ್ಮಧ್ಯೆ, ತಾಲಿಬಾನ್ ಪಡೆಗಳು ಪಂಜ್‌ಶಿರ್ (Panjshir) ಪ್ರಾಂತ್ಯವನ್ನು ಸಂಪೂರ್ಣವಾಗಿ ನಿಯಂತ್ರಿಸಿದೆ. ಇಲ್ಲಿಯವರೆಗೆ, ಅಫ್ಘಾನಿಸ್ತಾನದ ಪಂಜ್‌ಶಿರ್ ಕಣಿವೆಯಲ್ಲಿ ಪಂಜ್‌ಶಿರ್ ರೆಸಿಸ್ಟೆನ್ಸ್ ಫೋರ್ಸ್ ನಿರಂತರವಾಗಿ ತಾಲಿಬಾನ್ ವಿರುದ್ಧ ಹೋರಾಡುತ್ತಿತ್ತು ಎಂದು ಟೊಲೋ ನ್ಯೂಸ್ ಟ್ವೀಟ್ ಮಾಡಿದೆ.

22 ದಿನಗಳ ಹಿಂದೆ 15 ನೇ ತಾರೀಖಿನಂದು ತಾಲಿಬಾನ್ ಅಫ್ಘಾನಿಸ್ತಾನವನ್ನು (Afghanistan) ವಶಪಡಿಸಿಕೊಂಡಿತ್ತು ಮತ್ತು ಪಂಜಶೀರ್ ಕಣಿವೆ ಮಾತ್ರ ತಾಲಿಬಾನ್ ವಿರುದ್ಧ ತೊಡೆ ತಟ್ಟಿ ನಿಂತಿತ್ತು. ಪಂಜಶೀರ್ ವ್ಯಾಲಿ ತಾಲಿಬಾನ್ ವಿರುದ್ಧದ ಹೋರಾಟವನ್ನು ಇಲ್ಲಿಯವರೆಗೆ ಪ್ರತಿರೋಧ ಪಡೆ ಮುಂದುವರಿಸಿತ್ತು.  ಆಗಸ್ಟ್ 15ರಂದು ಕಾಬೂಲ್ ಪತನದ ನಂತರ ಪಂಜ್‌ಶಿರ್ ಪ್ರಾಂತ್ಯವು ಪ್ರತಿರೋಧದ ಪಡೆಗಳ ನೇತೃತ್ವದ ಏಕೈಕ ಪ್ರತಿಭಟನಾ ಕೇಂದ್ರವಾಗಿತ್ತು. ಪಂಜ್‌ಶಿರ್ ಪ್ರಾಂತ್ಯವು ಅಹ್ಮದ್ ಮಸೂದ್ ಮತ್ತು ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೆಹ್ ನೇತೃತ್ವದ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ನ ಭದ್ರಕೋಟೆಯಾಗಿದೆ. 

ಇದನ್ನೂ ಓದಿ - PM Narendra Modi: ಪ್ರಧಾನಿ ಮೋದಿ ವಿರುದ್ಧದ ಪ್ರತಿಭಟನೆ ಹಿನ್ನಲೆ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದೆ ಈ ದೇಶ

ಅದೇ ಸಮಯದಲ್ಲಿ, ಪಂಜ್‌ಶಿರ್ ಪ್ರಾಂತ್ಯದಲ್ಲಿ ಭಾನುವಾರ ನಡೆದ ಹೋರಾಟದಲ್ಲಿ ರೆಸಿಸ್ಟೆನ್ಸ್ ಫ್ರಂಟ್ ವಕ್ತಾರ ಮತ್ತು ಪ್ರಸಿದ್ಧ ಪತ್ರಕರ್ತ ಫಹೀಮ್ ದಾಷ್ಟಿ ಸಾವನ್ನಪ್ಪಿದರು ಎಂದು ಪಂಜ್‌ಶಿರ್‌ನ ಮೂಲವೊಂದು ಈ ಮಾಹಿತಿಯನ್ನು ಟೋಲೋ ನ್ಯೂಸ್‌ಗೆ ನೀಡಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News