Afghanistan Crisis: ಅಫ್ಘಾನಿಸ್ತಾನದಲ್ಲಿ ಅಧಿಕಾರ ಸಂಘರ್ಷ, ಗುಂಡು ಹಾರಿಸಿದ ಹಕ್ಕಾನಿ, ಗಾಯಗೊಂಡ ಬರಾದರ್! : ವರದಿ

Afghanistan Crisis: ಪಾಕಿಸ್ತಾನ ತನ್ನ ಐಎಸ್‌ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಅವರನ್ನು ಕಾಬೂಲ್‌ಗೆ ಕಳುಹಿಸಿದ್ದು, ಎರಡೂ ಬಣಗಳನ್ನು ಶಾಂತಗೊಳಿಸಲು ಅವನನ್ನು ಅಲ್ಲಿಗೆ ಕಳುಹಿಸಲಾಗಿದೆ ಎನ್ನಲಾಗುತ್ತಿದೆ.  

Written by - Nitin Tabib | Last Updated : Sep 5, 2021, 11:08 AM IST
  • ಅಮೆರಿಕಾದ ಸೇನೆ ಆಫ್ಘಾನಿಸ್ತಾನವನ್ನು ತೊರೆದು ಐದು ದಿನಗಳು ಗತಿಸಿದ್ದರೂ ಕೂಡ ತಾಲಿಬಾನ್ ಇನ್ನೂ ಹೊಸ ಸರ್ಕಾರವನ್ನು ರಚಿಸಿಲ್ಲ.
  • ತಾಲಿಬಾನ್ ಮತ್ತು ಹಕ್ಕಾನಿ ನೆಟ್ವರ್ಕ್ ನಾಯಕರು ಇದೀಗ ಅಧಿಕಾರ ಹಂಚಿಕೆಗಾಗಿ ಸಂಘರ್ಷಕ್ಕೆ ಇಳಿದಿದ್ದಾರೆ ಎಂದು ಹೇಳಲಾಗುತ್ತಿದೆ.
  • ತಾಲಿಬಾನ್ (Taliban) ಸಹ ಸಂಸ್ಥಾಪಕ ಅಬ್ದುಲ್ ಘನಿ ಬರದಾರ್ ಮತ್ತು ಹಕ್ಕಾನಿ ಬಣದ ನಡುವೆ ಶೂಟೌಟ್ ನಡೆದಿದೆ ಎಂದು ವರದಿಯಾಗಿದೆ.
Afghanistan Crisis: ಅಫ್ಘಾನಿಸ್ತಾನದಲ್ಲಿ ಅಧಿಕಾರ ಸಂಘರ್ಷ, ಗುಂಡು ಹಾರಿಸಿದ ಹಕ್ಕಾನಿ, ಗಾಯಗೊಂಡ ಬರಾದರ್! : ವರದಿ  title=
Afghanistan Crisis (File Photo)

ಕಾಬೂಲ್:  Afghanistan Crisis - ಅಮೆರಿಕಾದ ಸೇನೆ  ಆಫ್ಘಾನಿಸ್ತಾನವನ್ನು (Afghanistan) ತೊರೆದು ಐದು ದಿನಗಳು ಗತಿಸಿದ್ದರೂ ಕೂಡ  ತಾಲಿಬಾನ್ ಇನ್ನೂ ಹೊಸ ಸರ್ಕಾರವನ್ನು ರಚಿಸಿಲ್ಲ. ತಾಲಿಬಾನ್ ಮತ್ತು ಹಕ್ಕಾನಿ ನೆಟ್ವರ್ಕ್ (Haqqani Network) ನಾಯಕರು ಇದೀಗ ಅಧಿಕಾರ ಹಂಚಿಕೆಗಾಗಿ ಸಂಘರ್ಷಕ್ಕೆ ಇಳಿದಿದ್ದಾರೆ ಎಂದು ಹೇಳಲಾಗುತ್ತಿದೆ. ತಾಲಿಬಾನ್ (Taliban) ಸಹ ಸಂಸ್ಥಾಪಕ ಅಬ್ದುಲ್ ಘನಿ ಬರದಾರ್ (Abdul Ghani Baradar) ಮತ್ತು ಹಕ್ಕಾನಿ ಬಣದ ನಡುವೆ ಶೂಟೌಟ್ ನಡೆದಿದೆ ಎಂದು ವರದಿಯಾಗಿದೆ. ಅಫ್ಘಾನ್ ಪತ್ರಿಕೆ ಪಂಜ್‌ಶಿರ್ ಅಬ್ಸರ್ವರ್ ಪ್ರಕಾರ, ಅನಸ್ ಹಕ್ಕಾನಿ ಕಡೆಯಿಂದ ಗುಂಡು ಹಾರಿಸಲಾಗಿದ್ದು, ಇದರಲ್ಲಿ ಮುಲ್ಲಾ ಬರದಾರ್ ಗಾಯಗೊಂಡಿದ್ದಾನೆ ಎನ್ನಲಾಗಿದೆ.  ಪ್ರಸ್ತುತ ಬರಾದರ್ ಪಾಕಿಸ್ತಾನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದೂ ಕೂಡ ವರದಿಯಲ್ಲಿ ಹೇಳಲಾಗಿದೆ. ಆದರೆ, ಸದ್ಯಕ್ಕೆ ಈ ಕುರಿತಾದ ಯಾವುದೇ ಮಾಹಿತಿ ದೃಢಪಟ್ಟಿಲ್ಲ. 

ಏತನ್ಮಧ್ಯೆ, ಪಾಕಿಸ್ತಾನವು ತನ್ನ ಐಎಸ್‌ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಅವರನ್ನು ಕಾಬೂಲ್‌ಗೆ ಕಳುಹಿಸಿದೆ. ಜಗಳವನ್ನು ಇತ್ಯರ್ಥಗೊಳಿಸಲು ಆತನನ್ನು ಅಲ್ಲಿಗೆ ಕಳುಹಿಸಲಾಗಿದೆ ಎಂದು ಹೇಳಲಾಗುತ್ತಿದೆ. ಹಕ್ಕಾನಿ ನೆಟ್ವರ್ಕ್ ರಕ್ಷಣಾ ಮಂತ್ರಿ ಹುದ್ದೆಯನ್ನು ಕೋರಿದೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಹಕ್ಕಾನಿ ನೆಟ್ವರ್ಕ್ನ ಮುಖ್ಯ ಉಸ್ತುವಾರಿ. ಅಲ್-ಖೈದಾ ಜೊತೆಗಿನ ನಿಕಟ ಸಂಬಂಧದಿಂದಾಗಿ ಈ ಸಂಘಟನೆಯನ್ನು ವಿಶ್ವಸಂಸ್ಥೆಯು ಭಯೋತ್ಪಾದಕ ಗುಂಪು ಎಂದು ವರ್ಗೀಕರಿಸಿದೆ.

ಇದನ್ನೂ ಓದಿ-Afghanistan Crisis: ತಾಲಿಬಾನ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರ ಮೇಲೆ ಹಲ್ಲೆ

ಸಂಘರ್ಷ ನಿವಾರಣೆಗೆ ಯತ್ನ
ಮಾಧ್ಯಮ ವರದಿಗಳ ಪ್ರಕಾರ, ಫೈಜ್ ಹಮೀದ್ ಅವರ ಕಾಬೂಲ್ ಭೇಟಿಯ ಮುಖ್ಯ ಉದ್ದೇಶವೆಂದರೆ ಮುಲ್ಲಾ ಅಬ್ದುಲ್ ಘನಿ ಬರದಾರ್, ಕ್ವೆಟ್ಟಾ ಶೂರಾದ ಮುಲ್ಲಾ ಯಾಕೂಬ್, ಮುಲ್ಲಾ ಒಮರ್ ಅವರ ಹಿರಿಯ ಮಗ ಮತ್ತು ಹಕ್ಕಾನಿ ನೆಟ್ವರ್ಕ್ ನಡುವಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸುವುದಾಗಿದೆ ಎನ್ನಲಾಗಿದೆ. ಏತನ್ಮಧ್ಯೆ, ಇರಾನಿನ ಪತ್ರಕರ್ತ ಟ್ಜುಡೆನ್ ಸೊರೌಶ್ ಪ್ರಕಾರ, ತಾಲಿಬಾನ್ ಬಣಗಳ ನಡುವೆ ಆಳವಾದ ಬಿರುಕುಗಳು ಹುಟ್ಟಿಕೊಂಡಿವೆ, ಇದು ಅವರ ಸರ್ಕಾರ ರಚನೆಯನ್ನುವಿಳಂಬವನ್ನಾಗಿಸುತ್ತಿದೆ. ಈ ಹಿಂದೆ ಮುಲ್ಲಾ ಬರದಾರ್ ತಾಲಿಬಾನ್ ಸರ್ಕಾರವನ್ನು ಮುನ್ನಡೆಸಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇದೀಗ ಮುಲ್ಲಾ ಬರದಾರ್ ಬಣ ಮತ್ತು ಹಕ್ಕಾನಿ ನೆಟ್ವರ್ಕ್ ನಡುವಿನ ಉದ್ವಿಗ್ನತೆಯಿಂದಾಗಿ ವಿಳಂಬವಾಗುತ್ತಿದೆ.

ಇದನ್ನೂ ಓದಿ-ಎರಡು-ಮೂರು ದಿನಗಳಲ್ಲಿ ನೂತನ ಸರ್ಕಾರ ರಚನೆಗೆ ಸಜ್ಜಾದ ತಾಲಿಬಾನ್

ISI ಹಸ್ತಕ್ಷೇಪ 
ವರದಿಗಳ ಪ್ರಕಾರ ISI ಆಫ್ಘಾನಿಸ್ತಾನದಲ್ಲಿ ತನ್ನ ಲೆಕ್ಕಾಚಾರಕ್ಕೆ ತಕ್ಕಂತೆ ಸರ್ಕಾರ ರಚನೆಯನ್ನು ಬಯಸುತ್ತಿದೆ. ಎನ್ನಲಾಗಿದೆ. ಮೂಲಭೂತವಾದಿ ಮುಸ್ಲಿಂ ಸಂಘಟನೆ ಇರಾನ್ ಮಾಡೆಲ್ ಆಧಾರದ ಮೇಲೆ ಒಂದು ಸರ್ಕಾರ ರಚಿಸುವ ಯೋಜನೆಯನ್ನು ರೂಪಿಸುತ್ತಿದೆ. ಇಸ್ಲಾಮಿಕ್ ಗಣರಾಜ್ಯದಲ್ಲಿ ರಾಜ್ಯದ ಮುಖ್ಯಸ್ಥನೆ ಸರ್ವೋಚ್ಛ ನಾಯಕನಾಗಿರುತ್ತಾನೆ ಹಾಗೂ ರಾಜಕೀಯ ಹಾಗೂ ಧಾರ್ಮಿಕ ಪ್ರಾಧಿಕಾರ ರಾಷ್ಟ್ರಪತಿಗಿಂತಲೂ ಸರ್ವೋಚ್ಛ ಅಧಿಕಾರ ಹೊಂದಿರುತ್ತದೆ.

ಇದನ್ನೂ ಓದಿ-Afghanistan Crisis: ತಾಲಿಬಾನ್ ಗುಂಡಿನ ದಾಳಿಗೆ ಮಕ್ಕಳು ಸೇರಿ 17 ಮಂದಿ ಬಲಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News