'Made In India' Covid-19 ಲಸಿಕೆಯ ಕ್ಯೂನಲ್ಲಿವೆ ವಿಶ್ವದ 25 ರಾಷ್ಟ್ರಗಳು: ಜಯಶಂಕರ್

Corona Pandemic: ಈ ಕುರಿತು ಹೇಳಿಕೆ ನೀಡಿರುವ ಕೇಂದ್ರ ವಿದೇಶಾಂಗ ಸಚಿವ ಜಯಶಂಕರ್, ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ವಿಶ್ವದ ಫಾರ್ಮಸಿಯಾಗಿ ಸ್ಥಾಪಿಸಲು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ.

Written by - Nitin Tabib | Last Updated : Feb 6, 2021, 08:58 PM IST
  • ಭಾರತ ಈಗಾಗಲೇ ವಿಶ್ವದ ಸುಮಾರು 15 ದೇಶಗಳಿಗೆ ಕೊರೊನಾ ವ್ಯಾಕ್ಸಿನ್ ಪೂರೈಸುತ್ತಿದೆ.
  • ವಿಶ್ವದ ಇತರೆ 25 ರಾಷ್ಟ್ರಗಳು ಭಾರತದ ಕೊರೊನಾ ವ್ಯಾಕ್ಸಿನ್ ಪಡೆಯಲು ಕಾಯುತ್ತಿವೆ
  • ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ವಿಶ್ವದ ಫಾರ್ಮಸಿಯನ್ನಾಗಿ ಸ್ಥಾಪಿಸಲು ಬಯಸುತ್ತಿದ್ದಾರೆ ಎಂದ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್.
'Made In India' Covid-19 ಲಸಿಕೆಯ ಕ್ಯೂನಲ್ಲಿವೆ ವಿಶ್ವದ 25 ರಾಷ್ಟ್ರಗಳು: ಜಯಶಂಕರ್ title=
Corona Pandemic (File Photo: S.Jaishankar)

ಅಮರಾವತಿ:  Corona Pandemic - ಭಾರತ ಇದುವರೆಗೆ ಒತ್ತು 15 ದೇಶಗಳಿಗೆ ಭಾರತದಲ್ಲಿ ತಯಾರಾಗಿರುವ ಕೊರೊನಾ ಲಸಿಕೆಯನ್ನು ಪೂರೈಸಿದೆ ಹಾಗೂ ವಿಶ್ವದ ಇತರೆ 25 ದೇಶಗಳು ಭಾರತದಿಂದ Covid-19 ಲಸಿಕೆ ಪಡೆಯಲು ಕಾಯುತ್ತಿವೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ (S. Jaishankar) ಹೇಳಿದ್ದಾರೆ. ಒಟ್ಟು ಮೂರು ಶ್ರೇಣಿಯ ದೇಶಗಳು ಭಾರತದಿಂದ ಲಸಿಕೆ ಪಡೆಯಲು ಇಚ್ಛೆವ್ಯಕ್ತಪಡಿಸಿವೆ ಎಂದು ಅವರು ಹೇಳಿದ್ದಾರೆ. ವಿಶ್ವದ ಬಡ ರಾಷ್ಟ್ರಗಳು ಹಾಗೂ ಬೆಲೆಯ ಕುರಿತು ತುಂಬಾ ಸಂವೇದನಶೀಳವಾಗಿರುವ ರಾಷ್ಟ್ರಗಳು ಹಾಗೂ ಔಷಧಿ ತಯಾರಕ ಕಂಪನಿಗಳ ಜೊತೆಗೆ ಲಸಿಕೆಗಾಗಿ ನೇರ ಸಂಪರ್ಕ ಸಾಧಿಸುವ ರಾಷ್ಟ್ರಗಳು ಇದರಲ್ಲಿ ಶಾಮೀಲಾಗಿವೆ. 

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, "ನನಗೆ ತಿಳಿದಿರುವ ಮಾಹಿತಿ ಪ್ರಕಾರ ಇದುವರೆಗೆ ಭಾರತ ಒಟ್ಟು 15 ದೇಶಗಳಿಗೆ ಲಸಿಕೆಯನ್ನು ಪೂರೈಸಿದ್ದು. ಇತರೆ 25 ರಾಷ್ಟ್ರಗಳು ಭಾರತದಿಂದ ಲಸಿಕೆ (Made In India Corona Vaccine) ಪಡೆಯಲು ಕಾಯುತ್ತಿವೆ. ಆದರೆ ಭಾರತ ಇಂದು ಈ ವಿಷಯದಲ್ಲಿ ವಿಶ್ವದ ನಕ್ಷೆಯ ಮೇಲೆ ಮುಂಚೂಣಿ ಸಾಧಿಸುತ್ತಿದೆ ಎಂಬುದು ತುಂಬಾ ಮಹತ್ವದ್ದಾಗಿದೆ" ಎಂದು ಅವರು ಹೇಳಿದ್ದಾರೆ. ಕೆಲ ಬಡ ರಾಷ್ಟ್ರಗಳಿಗೆ ಅನುದಾನದ ಆಧಾರದ ಮೇಲೆ ಲಸಿಕೆಗಳನ್ನು ಈಗಾಗಲೇ ಪೂರೈಸಲಾಗುತ್ತಿದೆ. ಇನ್ನುಳಿದ ದೇಶಗಳು ಭಾರತ ಸರ್ಕಾರಕ್ಕೆ ಲಸಿಕೆ (Corona Vaccine) ತಯಾರಕ ಕಂಪನಿಗಳು ನೀಡಿದ ದರದಲ್ಲಿ ಲಸಿಕೆ ಪಡೆಯಲು ಬಯಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ವಿಶ್ವದ ಫಾರ್ಮಸಿ ರೂಪದಲ್ಲಿ ಸ್ಥಾಪಿಸಲು ಬಯಸುತ್ತಿದ್ದಾರೆ ಎಂದು ಜೈಶಂಕರ್ ಹೇಳಿದ್ದಾರೆ.

ಇದನ್ನು ಓದಿ- Corona Vaccination ವಿಷಯದಲ್ಲಿ ದಾಖಲೆ ಬರೆದ ಭಾರತ

ಇನ್ನೊಂದೆಡೆ ದೇಶದಲ್ಲಿ ಇದುವರೆಗೆ ಸುಮಾರು 54 ಲಕ್ಷಕ್ಕೂ ಹೆಚ್ಚು ಜನರಿಗೆ ಕೋವಿಡ್ -19 (Corona Virus) ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ. ಇದುವರೆಗೆ ಒಟ್ಟು 54,16,849 ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದ್ದು, ಈ ಪೈಕಿ ಗರಿಷ್ಠ 6,73,542 ಜನರಿಗೆ ಉತ್ತರ ಪ್ರದೇಶದಲ್ಲಿ ಲಸಿಕೆ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಇದರ ನಂತರ ಮಹಾರಾಷ್ಟ್ರದಲ್ಲಿ 4,34,943, ರಾಜಸ್ಥಾನದಲ್ಲಿ 4,14,422 ಮತ್ತು ಕರ್ನಾಟಕದಲ್ಲಿ 3,60,592 ಜನರಿಗೆ ಲಸಿಕೆ ನೀಡಲಾಗಿದೆ. ಕೇವಲ 21 ದಿನಗಳಲ್ಲಿ 5 ದಶಲಕ್ಷಕ್ಕೂ ಹೆಚ್ಚು ಜನರಲ್ಲಿ ಕೋವಿಡ್ -19 ಗೆ ಲಸಿಕೆ ಹಾಕಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ. 

ಇದನ್ನು ಓದಿ- Corona Vaccine ಹಾಕಿಸಿಕೊಂಡ ಈ ವ್ಯಕ್ತಿಯ ಭಾಷೆಯೇ ಬದಲಾಗಿದೆಯಂತೆ !

"ಕಳೆದ 24 ಗಂಟೆಗಳಲ್ಲಿ 10,502 ಸೆಷನ್‌ಗಳಲ್ಲಿ 4,57,404 ಜನರಿಗೆ ಲಸಿಕೆ ನೀಡಲಾಗಿದೆ. ಇದುವರೆಗೆ ಒಟ್ಟು 1,06,303 ಸೆಷನ್‌ಗಳನ್ನು ಆಯೋಜಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ ಲಸಿಕೆ ಹಾಕಿದವರಲ್ಲಿ 3,01,537 ಆರೋಗ್ಯ ಕಾರ್ಮಿಕರು ಮತ್ತು ಕೋವಿಡ್ -19 ವಿರುದ್ಧ 1,55,867 ಸಿಬ್ಬಂದಿ ಮುಂಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. "

ಇದನ್ನು ಓದಿ-Corona Vaccine Updates: ಕೊರೊನಾ ವ್ಯಾಕ್ಸಿನ್ ಕುರಿತು ವದಂತಿ ಹಬ್ಬಿಸಿದರೆ ಹುಷಾರ್! ಕೇಂದ್ರದ ವಾರ್ನಿಂಗ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News