Viral Video: ಮೊಸಳೆಗಳೊಂದಿಗೆ ಧೈರ್ಯವಾಗಿ ಹೋರಾಡಿದ ಝೀಬ್ರಾ, ರೋಚಕ ಸೆಣಸಾಟ ಹೇಗಿದೆ ನೋಡಿ

ಈ ದೃಶ್ಯ ನೋಡಿದ್ರೆ ನಿಮ್ಮ ಮೈಜುಂ ಎನ್ನುತ್ತದೆ, ಏನೇ ಆಗಲಿ ಸುಲಭವಾಗಿ ಸೋಲು ಒಪ್ಪಿಕೊಳ್ಳಬಾರದು ಅನ್ನೋ ಹುಮ್ಮಸ್ಸು ಮೂಡುತ್ತದೆ.

Written by - Puttaraj K Alur | Last Updated : Nov 18, 2022, 06:17 PM IST
  • ನೀರು ಕುಡಿಯಲು ಬಂದ ಝೀಬ್ರಾದ ಮೇಲೆ ಮೊಸಳೆಗಳ ಮಾರಕ ದಾಳಿ
  • ಸುಲಭವಾಗಿ ಸೋಲು ಒಪ್ಪಿಕೊಳ್ಳದೆ ಮೊಸಳೆ ಜೊತೆ ಝೀಬ್ರಾ ಸೆಣಸಾಟ
  • ರೋಚಕ ಸೆಣಸಾಟದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್
Viral Video: ಮೊಸಳೆಗಳೊಂದಿಗೆ ಧೈರ್ಯವಾಗಿ ಹೋರಾಡಿದ ಝೀಬ್ರಾ, ರೋಚಕ ಸೆಣಸಾಟ ಹೇಗಿದೆ ನೋಡಿ title=
Zebra vs Crocodile

ನವದೆಹಲಿ: ಪ್ರತಿದಿನವೂ ಸೋಷಿಯಲ್ ಮೀಡಿಯಾದಲ್ಲಿ ಹಲವಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಈ ಪೈಕಿ ಪ್ರಾಣಿಗಳು ವಿಡಿಯೋಗಳು ಹೆಚ್ಚು ಜನರ ಗಮನ ಸೆಳೆಯುತ್ತವೆ. ವನ್ಯಜೀವಿಗಳ ಬದುಕು, ಜನರ ಮೇಲೆ ಪ್ರಾಣಿಗಳ ದಾಳಿ, ಪ್ರಾಣಿಗಳ ನಡುವೆ ಪರಸ್ಪರ ಸೆಣಸಾಟ ಹೀಗೆ ಹತ್ತು-ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ.

ಇತ್ತೀಚೆಗೆ ಪ್ರಾಣಿಗಳ ನಡುವಿನ ಸೆಣಸಾಟದ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅಪಾಯಕಾರಿ ಮೊಸಳೆಗಳ ಜೊತೆಗೆ ಝೀಬ್ರಾ ರೋಚಕ ಸೆಣಸಾಟ ನಡೆಸಿದೆ. ಈ ದೃಶ್ಯ ನೋಡಿದ್ರೆ ನಿಮ್ಮ ಮೈಜುಂ ಎನ್ನುತ್ತದೆ. ಏನೇ ಆಗಲಿ ಸುಲಭವಾಗಿ ಸೋಲು ಒಪ್ಪಿಕೊಳ್ಳಬಾರದು ಅನ್ನೋ ಹುಮ್ಮಸ್ಸು ಮೂಡುತ್ತದೆ.

ಇದನ್ನೂ ಓದಿ: Dangerous Stunt: ಪತ್ನಿಯನ್ನು ಬೈಕ್ ಮೇಲೆ ಕೂರಿಸಿ ಅಪಾಯಕಾರಿ ಸ್ಟಂಟ್ ಗಿಳಿದ ಭೂಪ... ವಿಡಿಯೋ ನೋಡಿ

ಹಾಗಾದ್ರೆ ಈ ವಿಡಿಯೋದಲ್ಲಿ ಅಂತಹದ್ದೇನು ವಿಶೇಷವಿದೆ ಅಂತೀರಾ..? ದಾಹ ತಣಿಸಿಕೊಳ್ಳಲು ಝೀಬ್ರಾವೊಂದು ಕಾಡಿನಲ್ಲಿದ್ದ ಕೊಳವೊಂದಕ್ಕೆ ಬಂದಿದೆ. ಈ ವೇಳೆ ಬೇಟೆಗಾಗಿ ಹೊಂಚುಹಾಕಿದ್ದ ಮೊಸಳೆಗಳು ಇದ್ದಕ್ಕಿದ್ದಂತೆಯೇ ಝೀಬ್ರಾ ಮೇಲೆ ದಾಳಿ ನಡೆಸಿವೆ. ಮೊಸಳೆಗಳ ಜೊತೆ ಝೀಬ್ರಾ ರೋಚಕ ಸೆಣಸಾಟ ನಡೆಸಿದೆ. ದಾಳಿಗೆ ಪ್ರತಿದಾಳಿಯಂತೆ ಝೀಬ್ರಾ ಸಹ ಮೊಸಳೆಗಳ ಜೊತೆಗೆ ಹೋರಾಟ ನಡೆಸಿದೆ.

ಕಚ್ಚಲು ಮುಂದಾದ ಮೊಸಳೆಯನ್ನೇ ಝೀಬ್ರಾ ಸಹ ಕಚ್ಚಿ ಗಾಸಿಗೊಳಿಸಿದೆ. ಝೀಬ್ರಾದ ಪ್ರತಿದಾಳಿಯಿಂದ ಮೊಸಳೆಗಳು ಕಂಗಾಲಾಗಿವೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಡಾ.ಸಾಮ್ರಾಟ್ ಗೌಡ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘Don't Underestimate Anyone..’ ಅಂತಾ ವಿಡಿಯೋಗೆ ಕ್ಯಾಪ್ಶನ್ ಸಹ ಬರೆದಿದ್ದಾರೆ.

ಇದನ್ನೂ ಓದಿ: Viral Video: ಟೀ ಅಂಗಡಿಗೆ ಬಂದ ಸಾಂಬಾರ್ ಜಿಂಕೆ ಏನು ಮಾಡಿದೆ ನೋಡಿ

ಈ ವಿಡಿಯೋವನ್ನು ಸಾವಿರಾರು ಜನರು ವೀಕ್ಷಿಸಿದ್ದು, ಝೀಬ್ರಾದ ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ. ಮೊಸಳೆಗಳ ವಿರುದ್ಧ ರೋಚಕ ಸೆಣಸಾಟ ನಡೆಸಿದ ಝೀಬ್ರಾದ ವಿಡಿಯೋವನ್ನು ಶೇರ್ ಮಾಡುವ ಮೂಲಕ ‘ಯಾರೂ ಸಹ ಸುಲಭವಾಗಿ ಸೋಲು ಒಪ್ಪಿಕೊಳ್ಳಬೇಡಿ’ ಅಂತಾ ಪ್ರೇರಣೆ ನೀಡಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News