ದೇವರಿಗೆ ನಾಲಿಗೆ ಕತ್ತರಿಸಿ ಅರ್ಪಿಸಿದ ಭಕ್ತ

ಭಕ್ತನೊಬ್ಬ ತನ್ನ ನಾಲಿಗೆಯನ್ನು ಕತ್ತರಿಸಿ ದೇವಸ್ಥಾನಕ್ಕೆ ಅರ್ಪಿಸಿದ ಘಟನೆ ಉತ್ತರಪ್ರದೇಶದ ಕೌಶಾಂಬಿ ಜಿಲ್ಲೆಯಲ್ಲಿ ನಡೆದಿದೆ. ಇದರ ನಂತರ ಏನಾಯಿತು ಎಂದು ತಿಳಿಯಲು ಸಂಪೂರ್ಣ ಲೇಖನವನ್ನು ಓದಿ.

Written by - Puttaraj K Alur | Last Updated : Sep 11, 2022, 03:42 PM IST
  • ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ
  • ಕೌಶಾಂಬಿಯ ಕಡ ಧಾಮದಲ್ಲಿ ಶೀಟ್ಲಾ ಮಾತೆಗೆ ಭಕ್ತನೊಬ್ಬ ತನ್ನ ನಾಲಿಗೆ ಕತ್ತರಿಸಿ ಅರ್ಪಿಸಿದ್ದಾನೆ
  • ಗಂಗಾಸ್ನಾನದ ಬಳಿಕ ದೇವರಿಗೆ ಪೂಜೆ ಸಲ್ಲಿಸಿ ಬ್ಲೇಡ್‍ನಿಂದ ನಾಲಿಗೆ ಕತ್ತರಿಸಿಕೊಂಡ ಭಕ್ತ
ದೇವರಿಗೆ ನಾಲಿಗೆ ಕತ್ತರಿಸಿ ಅರ್ಪಿಸಿದ ಭಕ್ತ title=
ಕೌಶಂಬಿಯಲ್ಲಿ ಹೃದಯ ವಿದ್ರಾವಕ ಘಟನೆ

ಕೌಶಂಬಿ: ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಕೌಶಾಂಬಿಯ ಕಡ ಧಾಮದಲ್ಲಿ ಶೀಟ್ಲಾ ಮಾತೆಯ ದರ್ಶನಕ್ಕೆ ಬಂದಿದ್ದ ಭಕ್ತನೊಬ್ಬ ತನ್ನ ನಾಲಿಗೆಯನ್ನು ಕತ್ತರಿಸಿ ದೇವಸ್ಥಾನಕ್ಕೆ ಅರ್ಪಿಸಿದ ಘಟನೆ ನಡೆದಿದೆ. ಇದಾದ ನಂತರ ಪೊಲೀಸರು ಅಲ್ಲಿಗೆ ಬಂದು ಚಿಂತಾಜನಕ ಸ್ಥಿತಿಯಲ್ಲಿದ್ದ ಭಕ್ತನನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ.

ಗಂಗಾಸ್ನಾನದ ಬಳಿಕ ದೇವರಿಗೆ ಪೂಜೆ ಸಲ್ಲಿಸಿದ ಪಶ್ಚಿಮ ಶಿರಾ ಪೊಲೀಸ್ ಠಾಣೆ ವ್ಯಾಪ್ತಿಯ ಪುರಬ್ ಶಾರಾ ಗ್ರಾಮದ ನಿವಾಸಿ ಸಂಪತ್ (38) ಎಂಬಾತ ಶೀತಲ ಮಾತಾ ದೇವಸ್ಥಾನದಕ್ಕೆ ತನ್ನ ನಾಲಿಗೆಯನ್ನು ಬ್ಲೇಡ್‌ನಿಂದ ಕತ್ತರಿಸಿ ದೇವರಿಗೆ ಅರ್ಪಿಸಿದ್ದಾನೆ. ಬಳಿಕ ಆತನ ಸ್ಥಿತಿ ಗಂಭೀರವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಬ್ರೇಕಪ್ ಬೇಡ ಅಂತ ಶಾಲಾ ಬಾಲಕಿ ಕಾಲು ಹಿಡ್ಕೊಂಡು ಗೋಗರೆದ ಬಾಲಕ… ಮುಂದೇನಾಯ್ತು?

ಸಂಪತ್ ಪತ್ನಿ ಬನ್ನೋ ದೇವಿ ಶೀಟ್ಲಾ ಮಾತೆಯ ದೇವಸ್ಥಾನಕ್ಕೆ ಬಂದು ಗಂಗಾ ನದಿಯಲ್ಲಿ ಸ್ನಾನ ಮಾಡಿದ ನಂತರ ಪೂಜೆ ಸಲ್ಲಿಸಿದ್ದರು. ಅಂಧ ಶ್ರದ್ಧೆಯೋ ಭಕ್ತಿಯ ಪರಾಕಾಷ್ಠೆಯೋ ಎಂಬಂತೆ ಸಂಪತ್ ತನ್ನ ನಾಲಿಗೆಯನ್ನೇ ಕತ್ತರಿಸಿಕೊಂಡಿದ್ದಾನೆ. ‘ಪ್ರದಕ್ಷಿಣೆ ಪೂರ್ಣಗೊಳಿಸಿದ ನಂತರ ನಾಲಿಗೆಯನ್ನು ಬ್ಲೇಡ್‌ನಿಂದ ಕತ್ತರಿಸಿ ದೇವಾಲಯದ ಬಾಗಿಲಿನ ಚೌಕಟ್ಟಿನಲ್ಲಿ ಇಟ್ಟಿದ್ದಾನೆ’ ಅಂತಾ ಕರ್ಹಾ ಧಾಮ್ ಪೊಲೀಸ್ ಠಾಣೆ ಸ್ಟೇಷನ್ ಹೌಸ್ ಆಫೀಸರ್ ಅಭಿಲಾಷ್ ತಿವಾರಿ ಹೇಳಿದ್ದಾರೆ.

ಈ ಘಟನೆಯ ನಂತರ ದೇವಸ್ಥಾನದಲ್ಲಿ ಕೋಲಾಹಲ ಉಂಟಾಯಿತು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಬಂದ ಪೊಲೀಸರು ಸಂಪತ್‌ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನೂ ಸಂಪತ್ ಸ್ಥಿತಿ ಚಿಂತಾಜನಕವಾಗಿದೆ. ಶುಕ್ರವಾರ ರಾತ್ರಿ ಸಂಪತ್ ಅವರು ಶೀಟ್ಲಾ ಮಾತೆಯನ್ನು ನೋಡುವ ಆಸೆಯನ್ನು ವ್ಯಕ್ತಪಡಿಸಿದ್ದರಂತೆ.

ಇದನ್ನೂ ಓದಿ: Viral Video : ಪ್ರೇಯಸಿ ಮದುವೆಗೆ ಬಂದ ಮಾಜಿ ಲವರ್‌ ಮಾಡಿದ್ದೇನು?

ಹೀಗಾಗಿ ಶನಿವಾರ ಇಬ್ಬರೂ ದೇವಸ್ಥಾನಕ್ಕೆ ಬರಲು ನಿರ್ಧರಿಸಿದೇವು ಎಂದು ಆತನ ಪತ್ನಿ ಬನ್ನೋ ದೇವಿ ಹೇಳಿದ್ದಾಳೆ. ಮೊದಲು ದಂಪತಿ ಗಂಗಾನದಿಯಲ್ಲಿ ಸ್ನಾನ ಮಾಡಿ ನಂತರ ದೇವಸ್ಥಾನದಲ್ಲಿ ದರ್ಶನ ಪಡೆದು ಪೂಜೆ ಸಲ್ಲಿಸಿದರು. ನಂತರ ಸಂಪತ್ ಪ್ರದಕ್ಷಿಣೆ ಹಾಕಿದ ನಂತರ ಇದ್ದಕ್ಕಿದ್ದಂತೆ ಈ ರೀತಿ ಮಾಡಿಕೊಂಡಿದ್ದಾನಂತೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News