ಅಯ್ಯಯ್ಯೋ…ಗಂಡನ ಮರ್ಯಾದೆ ತೆಗೆಯೋಕೆ ಫುಲ್ ಪೇಜ್ ಜಾಹೀರಾತು ಕೊಟ್ಟ ಪತ್ನಿ!

ಈ ವಿಚಾರಕ್ಕೆ ಒಂದು ಹೆಜ್ಜೆ ಮುಂದೆ ಹೋದಂತಿದೆ ಇಂದು ನಾವು ಹೇಳ ಹೊರಟಿರುವ ವಿಚಾರ. ಹೌದು, ಮದುವೆಯಾದ ಬಳಿಕ ಗಂಡ ತನ್ನನ್ನು ಬಿಟ್ಟು ಪರ ಮಹಿಳೆ ಜೊತೆ ಸಂಬಂಧ ಹೊಂದಿದ್ದಾನೆ ಎಂದು ತಿಳಿದ ಪತ್ನಿ ಆತನ ಬಗ್ಗೆ ಕೆಟ್ಟದಾಗಿ ಬರೆದು, ಪತ್ರಿಕೆಯೊಂದಕ್ಕೆ ಫುಲ್ ಪೇಜ್ ಜಾಹೀರಾತನ್ನು ನೀಡಿದ್ದಾಳೆ. ಈ ಜಾಹೀರಾತು ಎಲ್ಲೆಡೆ ವೈರಲ್ ಆಗಿದೆ.

Written by - Bhavishya Shetty | Last Updated : Sep 12, 2022, 03:49 PM IST
    • ಪರ ಮಹಿಳೆ ಜೊತೆ ಸಂಬಂಧ ಹೊಂದಿದ್ದಾನೆ ಎಂದು ತಿಳಿದ ಪತ್ನಿ
    • ಆತನ ಬಗ್ಗೆ ಕೆಟ್ಟದಾಗಿ ಬರೆದು, ಪತ್ರಿಕೆಯೊಂದಕ್ಕೆ ಫುಲ್ ಪೇಜ್ ಜಾಹೀರಾತನ್ನು ನೀಡಿದ್ದಾಳೆ
    • ಜೆನ್ನಿ ಎಂಬ ಮಹಿಳೆ ತನ್ನ ಗಂಡನ ವಿರುದ್ಧ ಕೋಪಗೊಂಡಿದ್ದು ಜಾಹೀರಾತಿನಲ್ಲಿ ಮಾನ ಹರಾಜು ಹಾಕಿದ್ದಾಳೆ
ಅಯ್ಯಯ್ಯೋ…ಗಂಡನ ಮರ್ಯಾದೆ ತೆಗೆಯೋಕೆ ಫುಲ್ ಪೇಜ್ ಜಾಹೀರಾತು ಕೊಟ್ಟ ಪತ್ನಿ!  title=
Husband and Wife

ಮದುವೆ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಸುಂದರವಾದ ಅನುಭವ. ಮದುವೆಯಾದ ಬಳಿಕ ಗಂಡ ಹೆಂಡತಿ ಎಂಥಹದ್ದೇ ಸಮಸ್ಯೆ ಎದುರಾದರೂ ಸಹ ಒಂದಾಗಿ ಜೀವನ ನಡೆಸಬೇಕು ಎಂಬುದು ಉದ್ದೇಶವಾಗಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೊಂಚ ಮನಸ್ತಾಪಗಳು ಬಂದರೂ ಸಹ ವಿಚ್ಛೇದನ ನೀಡಿ, ತಮ್ಮ ದಾರಿ ತಮ್ಮದು ಎಂದು ಹೇಳಿ ಹೋಗುವವರೇ ಹೆಚ್ಚು. 

ಇದನ್ನೂ ಓದಿ: ಮದ್ಯ ಪ್ರಿಯರೇ ನಿಮಗಿದು ಗೊತ್ತಾ?ಈ ಆಲ್ಕೋಹಾಲ್ ಕುಡಿದ್ರೆ ಹೃದಯರೋಗದಿಂದ ಸಿಗುತ್ತೆ ಮುಕ್ತಿ

ಈ ವಿಚಾರಕ್ಕೆ ಒಂದು ಹೆಜ್ಜೆ ಮುಂದೆ ಹೋದಂತಿದೆ ಇಂದು ನಾವು ಹೇಳ ಹೊರಟಿರುವ ವಿಚಾರ. ಹೌದು, ಮದುವೆಯಾದ ಬಳಿಕ ಗಂಡ ತನ್ನನ್ನು ಬಿಟ್ಟು ಪರ ಮಹಿಳೆ ಜೊತೆ ಸಂಬಂಧ ಹೊಂದಿದ್ದಾನೆ ಎಂದು ತಿಳಿದ ಪತ್ನಿ ಆತನ ಬಗ್ಗೆ ಕೆಟ್ಟದಾಗಿ ಬರೆದು, ಪತ್ರಿಕೆಯೊಂದಕ್ಕೆ ಫುಲ್ ಪೇಜ್ ಜಾಹೀರಾತನ್ನು ನೀಡಿದ್ದಾಳೆ. ಈ ಜಾಹೀರಾತು ಎಲ್ಲೆಡೆ ವೈರಲ್ ಆಗಿದೆ.

ಜೆನ್ನಿ ಎಂಬ ಮಹಿಳೆ ತನ್ನ ಗಂಡನ ವಿರುದ್ಧ ಕೋಪಗೊಂಡಿದ್ದು, ಆತನ Cheater (ಮೋಸಗಾರ) ಎಂದು ಬರೆದು, ಫುಲ್ ಪೇಜ್ ಜಾಹೀರಾತು ನೀಡಿದ್ದಾಳೆ. ಈ ಜಾಹೀರಾತು ಆಸ್ಟ್ರೇಲಿಯನ್ ಪೇಪರ್ ಮ್ಯಾಕೆ ಮತ್ತು ವಿಟ್ಸಂಡೆ ಲೈಫ್‌ನ ಆಗಸ್ಟ್ 12ರ ಆವೃತ್ತಿಯಲ್ಲಿ ಪ್ರಕಟಗೊಂಡಿದೆ.

ಪತ್ರಿಕೆಯ ಜಾಹೀರಾತಿನಲ್ಲಿ ಜೆನ್ನಿ ಹೀಗೆ ಬರೆದುಕೊಂಡಿದ್ದಾಳೆ:

“ಡೀಯರ್ ಸ್ಟೀವ್. ನೀನು ಆಕೆಯ ಜೊತೆ ಸಂತೋಷದಿಂದ ಇದ್ದೀಯಾ ಎಂದು ನಾನು ಭಾವಿಸುತ್ತೇನೆ. ಆದರೆ ನೀನು ಎಂತಹ ಹೊಲಸು ಮೋಸಗಾರ ಎಂಬುದು ಈಗ ಇಡೀ ಊರಿಗೆ ಗೊತ್ತಾಗಲಿದೆ. ನಿನ್ನ ಕ್ರೆಡಿಟ್ ಕಾರ್ಡ್ ಬಳಸಿ ನಾನು ಈ ಜಾಹೀರಾತನ್ನು ನೀಡಿದ್ದೇನೆ' ಎಂದು ದೊಡ್ಡ ಅಕ್ಷರಗಳಲ್ಲಿ ಮದ್ರಿಸಿದ್ದಾಳೆ.

ಇನ್ನು ಇಲ್ಲೊಂದು ಗಮನಿಸಬೇಕಾದ ಅಂಶವಿದೆ. ಈ ಜಾಹೀರಾತನ್ನು ಪತ್ರಿಕೆಯು ಉಚಿತವಾಗಿ ಪಬ್ಲಿಷ್ ಮಾಡಿದೆ. ಈ ಪತ್ರಿಕೆಯನ್ನು ಸುಮಾರು 50 ಸಾವಿರಕ್ಕೂ ಹೆಚ್ಚಿನ ಜನರು ಓದುತ್ತಾರೆ. ಗ್ರೇಟ್ ಬ್ಯಾರಿಯರ್ ರೀಫ್‌ನ ಪಕ್ಕದಲ್ಲಿರುವ ಉಷ್ಣವಲಯದ ಪ್ರವಾಸಿ ಪ್ರದೇಶದಲ್ಲಿ ಈ ಪತ್ರಿಕೆ ಪ್ರಸಾರವಾಗುತ್ತದೆ.

ಇನ್ನು ಈ ಜಾಹೀರಾತನ್ನು ನೀಡಿದ ಮಹಿಳೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವು ನೀಡುವುದಿಲ್ಲ ಎಂದು ಪತ್ರಿಕೆಯ ಸಂಪಾದಕರು ಫೇಸ್‌ಬುಕ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: SBI ಖಾತೆಯೊಂದಿಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಹೇಗೆ ಲಿಂಕ್ ಮಾಡಲು ಇಲ್ಲಿದೆ ಸುಲಭ ವಿಧಾನ

ಜೆನ್ನಿ ಆನ್‌ಲೈನ್ ಪೋರ್ಟಲ್ ಮೂಲಕ ಜಾಹೀರಾತು ನೀಡಿದ್ದಾರೆ. ಈ ಸಂದರ್ಭದಲ್ಲಿ ಆಕೆ ತನ್ನ ಪತಿಯ ಕ್ರೆಡಿಟ್ ಕಾರ್ಡ್ ನೀಡಿ ಜಾಹೀರಾತು ನೀಡಲು ಮುಂದಾಗಿದ್ದಳು. ಆದರೆ ಆತನ ಒಪ್ಪಿಗೆಯಿಲ್ಲದೆ, ಬಿಲ್ ಮಾಡುವುದು ಕಾನೂನು ಬಾಹಿರ ಎಂದು , ಅಂತಿಮವಾಗಿ ಉಚಿತವಾಗಿ  ಆಡ್ ನೀಡಿದೆವು ಎಂದು ಅವರು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News