ಏರ್‌ಪೋರ್ಟ್ ರನ್‌ವೇಯಲ್ಲಿ ಹಾವನ್ನು ಅಟ್ಯಾಕ್ ಮಾಡಿದ 3 ಮುಂಗುಸಿಗಳು: ವಿಡಿಯೋ ವೈರಲ್

Snake Viral Video: ಸಾಮಾನ್ಯವಾಗಿ ಯಾರಾದರೂ ಜಗಳವಾಡುವಾಗ ಹಾವು-ಮುಂಗುಸಿಯಂತೆ ಜಗಳವಾಡ್ತಾರೆ ಅಂತಾ ಹೇಳೊದನ್ನ ನೀವು ಕೇಳಿರಬಹುದು. ಆದರೆ, ನಿಜವಾಗಿಯೂ ಹಾವು ಮುಂಗುಸಿ ಎದುರಾಗೋದನ್ನ ನೋಡಿದ್ದೀರಾ...

Written by - Yashaswini V | Last Updated : Aug 29, 2024, 04:09 PM IST
  • ಹಾವು ಮುಂಗುಸಿ ಶತ್ರುತ್ವದ ಬಗ್ಗೆ ಪುರಾಣದಲ್ಲಿ ಹಲವು ಕಥೆಗಳು ಇವೆ.
  • ಪೌರಾಣಿಕ ಶತ್ರುಗಳಾದ ಹಾವು ಮುಂಗುಸಿ ಏರ್‌ಪೋರ್ಟ್ ನಲ್ಲಿ ಭೇಟಿಯಾದಾಗ ಹೇಗಿರುತ್ತೆ...
ಏರ್‌ಪೋರ್ಟ್ ರನ್‌ವೇಯಲ್ಲಿ ಹಾವನ್ನು ಅಟ್ಯಾಕ್ ಮಾಡಿದ 3 ಮುಂಗುಸಿಗಳು: ವಿಡಿಯೋ ವೈರಲ್  title=

Snake Mogooses Viral Video: ಭೂಮಿಯ ಮೇಲೆ ವಿಸ್ಮಯಕಾರಿ ಸರೀಸೃಪಗಳಾದ ಹಾವುಗಳಿಗೆ ಮುಂಗುಸಿಗಳನ್ನು ಶತ್ರುಗಳು ಎಂತಲೇ ಹೇಳಲಾಗುತ್ತದೆ. ಹಾವು ಮತ್ತು ಮುಂಗುಸಿಗಳನ್ನು (Snakes and Mongooses) ಕಂಡರೆ ಮನುಷ್ಯರಷ್ಟೇ ಅಲ್ಲ, ಪ್ರಾಣಿ ಪಕ್ಷಿಗಳು ಕೂಡ ಭಯಪಡುತ್ತವೆ. ಹೀಗಿರುವಾಗ ಇವೆರಡೂ ಒಟ್ಟಿಗೆ ಎದುರುಬದುರಾದಾಗ ಹೇಗಿರುತ್ತೆ...!  ಸದ್ಯ ಅಂತಹುದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. 

ವೈರಲ್ ವಿಡಿಯೋದಲ್ಲಿ (Viral Video) ಏರ್‌ಪೋರ್ಟ್ ರನ್‌ವೇಯಲ್ಲಿ ಒಂದು ಹಾವನ್ನು ಒಟ್ಟೊಟ್ಟಿಗೆ ಮೂರು ಮುಂಗುಸಿಗಳು ಅಟ್ಯಾಕ್ (3 Mogooses attatck On Snake) ಮಾಡುವುದನ್ನು ಕಾಣಬಹುದು. ಈ ಸ್ಥಿತಿಯಲ್ಲಿ ಮುಂಗುಸಿಗಳಿಂದ ತಪ್ಪಿಸುಕೊಳ್ಳುವುದು ಹಾವಿಗೆ ಕೊಂಚ ಕಷ್ಟವೇ ಎಂದೆನಿಸಿದರೂ ಹಾವು ಮಾತ್ರ ಛಲಬಿಡದೆ ಮುಂಗುಸಿಗಳೊಂದಿಗೆ ತನ್ನ ಹೋರಾಟವನ್ನು ಮುಂದುವರೆಸಿದೆ. 

ಇದನ್ನೂ ಓದಿ- Viral Video: ಸರ್ಕಾರಿ ಶಾಲೆಗೆ ಹಾರಿ ಬಂದ ರಾಷ್ಟ್ರಪಕ್ಷಿ, ಮಕ್ಕಳೊಂದಿಗೆ ಬಿಸಿ ಊಟ ಸವಿದ ನಾಟ್ಯ ಮಯೂರಿ...

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ (Social Media Viral Video) ಮೊದಲಿಗೆ ಮುಂಗುಸಿಯೊಂದು ಹಾವಿನ ಮೇಲೆ ದಾಳಿ ಮಾಡುತ್ತಿರುವುದನ್ನು ಕಾಣಬಹುದು. ಈ ಸಂದರ್ಭದಲ್ಲಿ ಹಾವೂ ಸಹ ಮುಂಗುಸಿಯೊಂದಿಗೆ ಹೋರಾಡುತ್ತಿರುತ್ತದೆ. ಈ ನಡುವೆ ಇನ್ನೆರಡು ಮುಂಗುಸಿಗಳು ಕೂಡ ಹಾವಿನ ಮೇಲೆ ದಾಳಿ ಮಾಡಲು ಮುಂದೆ ಬರುತ್ತವೆ... 

ಇದನ್ನೂ ಓದಿ- Viral Video: ಗರಿಬಿಚ್ಚಿ ನಲಿಯುತ್ತಿದ್ದ ನವಿಲನ್ನು ಹಿಡಿಯಲು ಹೊಂಚು ಹಾಕಿದ ಹುಲಿ, ಮುಂದೇನಾಯ್ತು...!

ಈ ವಿಡಿಯೋವನ್ನು ಪಾಟ್ನಾ ಏರ್‌ಪೋರ್ಟ್ ನ ರನ್‌ವೇಯಲ್ಲಿ (Patna Airport Runway) ಸೆರೆಹಿಡಿಯಲಾಗಿದ್ದು ಹಾವು vs ಮೂರು ಮುಂಗುಸಿಗಳು ಎಂಬ ಶೀರ್ಷಿಕೆಯಡಿ ಇದನ್ನು ಹಂಚಿಕೊಳ್ಳಲಾಗಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News