Viral Video: ಬೈಕ್ ಮೇಲೆ ಮೈ ಕೊರೆಯೋ ಚಳಿಯಿಂದ ಪಾರಾಗಲು ಮಹಿಳೆ ಮಾಡಿದ ಈ ಉಪಾಯ...! ವಿಡಿಯೋ ನೋಡಿ

Viral Video: ಚಲಿಸುತ್ತಿರುವ ಬೈಕ್ ಮೇಲೆ ಮೈಕೊರೆಯೋ ಚಳಿಯಿಂದ ರಕ್ಷಣೆ ಪಡೆದುಕೊಳ್ಳಲು ಮಹಿಳೆಯೊಬ್ಬರು ಮಾಡಿದ ಉಪಾಯವೊಂದನ್ನು ಮಾಡಿಕೊಂಡಿದ್ದು, ಆಕೆ ಮಾಡಿರುವ ಉಪಾಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. (Viral News In Kannada)  

Written by - Nitin Tabib | Last Updated : Jan 25, 2024, 06:23 PM IST
  • ಈ ವೀಡಿಯೊವನ್ನು ಇನ್ಸ್ಟಾಗ್ರಾಮ್ ನಲ್ಲಿ ಒಂದು ದಿನದ ಹಿಂದೆ aseem2008 ಹೆಸರಿನ ಖಾತೆಯೊಂದಿಗೆ ಹಂಚಿಕೊಳ್ಳಲಾಗಿದೆ.
  • ಈ ವಿಡಿಯೋವನ್ನು ನೂರಾರು ಬಾರಿ ವೀಕ್ಷಿಸಲಾಗಿದೆ.
  • ಈ ವಿಡಿಯೋಗೆ 'ಪ್ರಯಾಗರಾಜದಲ್ಲಿ ಬಿದ್ದ ಕೊರೆಯೋ ಚಳಿಗೆ ಕಾಶ್ಮೀರ್ ವಿಧಾನ ಅನುಸರಿಸಿದ ಚಿಕ್ಕಮ್ಮ' ಎಂಬ ಶೀರ್ಷಿಕೆ ನೀಡಲಾಗಿದೆ.
Viral Video: ಬೈಕ್ ಮೇಲೆ ಮೈ ಕೊರೆಯೋ ಚಳಿಯಿಂದ ಪಾರಾಗಲು ಮಹಿಳೆ ಮಾಡಿದ ಈ ಉಪಾಯ...! ವಿಡಿಯೋ ನೋಡಿ title=

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಇಡೀ ಉತ್ತರ ಭಾರತದಲ್ಲಿ ಶೀತಗಾಳಿಯ ಪರಿಸ್ಥಿತಿ ಮುಂದುವರೆದಿದೆ. ಚಳಿಗಾಲದ ಜತೆಗೆ ಚಳಿಗಾಳಿ ಬೀಸುತ್ತಿರುವುದರಿಂದ ಹೆಪ್ಪುಗಟ್ಟಿ ಐಸ್ ಆಗುವ ಸ್ಥಿತಿ ನಿರ್ಮಾಣವಾಗಿದೆ. ಚಳಿಯಿಂದ ಮುಕ್ತಿ ಪಡೆಯಲು ಹಲವೆಡೆ ಜನರು ಬೆಂಕಿಯನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಇದೆ. ಚಳಿ ಎಷ್ಟೊಂದು ಜಾಸ್ತಿ ಇದೆ ಎಂದರೆ, ಫುಟ್‌ಪಾತ್‌ನಲ್ಲಿ ಜನರು ಬೆಂಕಿ ಹಚ್ಚಿಕೊಂಡು ಕಾಯಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಚಳಿಯಿಂದ ಪಾರಾಗಲು ಜನರು ಅನುಸರಿಸುತ್ತಿರುವ ವಿಭಿನ್ನ ಮಾರ್ಗಗಳ ಕುರಿತು ಹೇಳುವುದಾದರೆ,  ನಮ್ಮ ದೇಶದಲ್ಲಿ ಜನರು ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸಲು ತನ್ನದೇ ಆದ ರೀತಿಯಲ್ಲಿ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯೊಬ್ಬರು ಚಳಿಯಿಂದ ಬಚಾವಾಗಲು ಅನುಸಾರಿಸಿರುವ ವಿಧಾನ,  ನೀವು ಊಹಿಸಲೂ ಸಾಧ್ಯವಿಲ್ಲ. ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು, ವಿಡಿಯೋ ಇದೀಗ ಭಾರಿ ವೈರಲ್ ಆಗುತ್ತಿದೆ. (Viral News In Kannada)

ವೈರಲ್ ಆಗುತ್ತಿರುವ ಈ ವೀಡಿಯೋದಲ್ಲಿ ಮಹಿಳೆಯೊಬ್ಬರು ರಾತ್ರಿ ಪುರುಷನ ಹಿಂಬದಿಯಲ್ಲಿ ಕುಳಿತು ಬೈಕ್ ಮೇಲೆ ಹೋಗುತ್ತಿರುವುದನ್ನು ನೀವು ನೋಡಬಹುದು ಚಳಿಯಿಂದ ರಕ್ಷಿಸಿಕೊಳ್ಳಲು ಮಹಿಳೆ ಶಾಲು ಹಾಕಿಕೊಂಡಿದ್ದಾಳೆ. ಆದರೆ, ವೀಡಿಯೊದ ಕುತೂಹಲಕಾರಿ ಸಂಗತಿಯೆಂದರೆ, ಮಹಿಳೆ ತನ್ನ ಮಡಿಲಲ್ಲಿ ಕಬ್ಬಿಣದ ಪ್ಯಾನ್ ಇಟ್ಟುಕೊಂಡು ಬೆಂಕಿ ಇರಿಸಿರುವುದನ್ನು ನೀವು ವೀಡಿಯೊದಲ್ಲಿ ನೋಡಬಹುದು. ಮಹಿಳೆ ಚಳಿ ತಾಗಬಾರದು ಎಂಬ ಉದ್ದೇಶದಿಂದ ಉರಿಯುವ ಕಲ್ಲಿದ್ದಲಿನ ಬೆಂಕಿಯೊಂದಿಗೆ ಬೈಕ್ ಮೇಲೆ ಕುಳಿತಿದ್ದಾಳೆ. ಚಳಿಯಿಂದ ಪಾರಾಗಲು ಈ ಮಹಿಳೆ ಅನುಸರಿಸಿದ ವಿಧಾನ ನೋಡಿ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.

ಇದನ್ನೂ ಓದಿ-Viral Video: ಬೈಕ್ ಹಿಂದೆ ಕುಳಿತು ಪತ್ನಿ ಮಾಡುವ ಕೆಲಸ ನೋಡಿ, 'ಭಗವಂತ ಇಂಥಾ ಪತ್ನಿ ಎಲ್ಲರಿಗೂ ಕೊಡು' ಎಂದ ಜನ!

ಈ ವೀಡಿಯೊವನ್ನು ಇನ್ಸ್ಟಾಗ್ರಾಮ್ ನಲ್ಲಿ ಒಂದು ದಿನದ ಹಿಂದೆ aseem2008 ಹೆಸರಿನ ಖಾತೆಯೊಂದಿಗೆ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ನೂರಾರು ಬಾರಿ ವೀಕ್ಷಿಸಲಾಗಿದೆ. ಈ ವಿಡಿಯೋಗೆ 'ಪ್ರಯಾಗರಾಜದಲ್ಲಿ ಬಿದ್ದ ಕೊರೆಯೋ ಚಳಿಗೆ ಕಾಶ್ಮೀರ್ ವಿಧಾನ ಅನುಸರಿಸಿದ ಚಿಕ್ಕಮ್ಮ'  ಎಂಬ ಶೀರ್ಷಿಕೆ ನೀಡಲಾಗಿದೆ. ಶೀರ್ಷಿಕೆಯ ಪ್ರಕಾರ, ಈ ವೀಡಿಯೊ ಯುಪಿಯ ಪ್ರಯಾಗ್‌ರಾಜ್‌ನಿಂದ ಪ್ರಕಟಗೊಂಡಿದೆ ಎಂದರೆ ತಪ್ಪಾಗಲಾರದು. ಉತ್ತರ ಪ್ರದೇಶದ ಜನರು ಮಾತ್ರ ಇಂತಹ ಜುಗಾಡ್ ಮಾಡಲು ಸಾಧ್ಯ ಎಂದು ಜನರು ಹೇಳುತ್ತಿದ್ದಾರೆ. ಈ ವೀಡಿಯೊ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ. 

ಇದನ್ನೂ ಓದಿ-Viral Video: ಪಾರ್ಕ್ ಬೆಂಚ್ ಮೇಲೆ ಜೋಡಿ ಹಕ್ಕಿಯ ಖುಲ್ಲಂಖುಲ್ಲಾ ರೊಮ್ಯಾನ್ಸ್, ವಿಡಿಯೋ ವೈರಲ್!

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News