Viral Video: ಬೈಕ್ ಹಿಂದೆ ಕುಳಿತು ಪತ್ನಿ ಮಾಡುವ ಕೆಲಸ ನೋಡಿ, 'ಭಗವಂತ ಇಂಥಾ ಪತ್ನಿ ಎಲ್ಲರಿಗೂ ಕೊಡು' ಎಂದ ಜನ!

Viral Video: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೂ ನೋಡಿ ನೀವು ಒಂದು ಕ್ಷಣ ಶಾಕ್ ಆಗಬಹುದು. ವಿಡಿಯೋದಲ್ಲಿ ಪತಿ-ಪತ್ನಿ ಬೈಕ್‌ನಲ್ಲಿ ಹೋಗುತ್ತಿರುವುದನ್ನು ನೀವು ನೋಡಬಹುದು. ಹೆಂಡತಿ ತನ್ನ ಪತಿಗೆ ಸಿಗರೇಟ್ ಸೇದಲು ಸಹಾಯ ಮಾಡುತ್ತಿದ್ದಾಳೆ (Viral News In Kannada)  

Written by - Nitin Tabib | Last Updated : Jan 24, 2024, 09:17 PM IST
  • ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿದ ಜನ ಸಖತ್ ಖುಷಿ ಪಡುತ್ತಿದ್ದಾರೆ,
  • ಈ ಕುರಿತು ಕಾಮೆಂಟ್ ಮಾಡಿರುವ ಓರ್ವ ಬಳಕೆದಾರ 'ಇಂತಹ ಪತ್ನಿಯನ್ನು ಪಡೆಯಲು ಒಬ್ಬರು ಯಾವ ಕೋರ್ಸ್ ಮಾಡಬೇಕು?' ಎಂದು ಪ್ರಶ್ನಿಸಿದ್ದಾರೆ.
  • ಕಾಮೆಂಟ್ ಮಾಡಿದ ಮತ್ತೊಬ್ಬ ಬಳಕೆದಾರರು ‘ಎಲ್ಲರಿಗೂ ಇಂಥ ಹೆಂಡತಿ ಸಿಕ್ಕರೆ ದೇಶವೇ ಹಾಳಾಗುತ್ತದೆ’ ಎಂದು ಬರೆದುಕೊಂಡಿದ್ದಾರೆ.
Viral Video: ಬೈಕ್ ಹಿಂದೆ ಕುಳಿತು ಪತ್ನಿ ಮಾಡುವ ಕೆಲಸ ನೋಡಿ, 'ಭಗವಂತ ಇಂಥಾ ಪತ್ನಿ ಎಲ್ಲರಿಗೂ ಕೊಡು' ಎಂದ ಜನ! title=

ನವದೆಹಲಿ: ಸಾಮಾಜಿಕ ಮಾಧ್ಯಮವು ತುಂಬಾ ವಿಚಿತ್ರವಾದ ವೇದಿಕೆಯಾಗಿದೆ. ಇಲ್ಲಿ ಯಾರು ಯಾವಾಗ ಏನನ್ನು ನೋಡುವರು ಅದನ್ನು ಊಹಿಸಲು ಸಾಧ್ಯವಿಲ್ಲ. ಇಂದಿನ ಇಂಟರ್‌ನೆಟ್ ಯುಗದಲ್ಲಿ ಯಾರಾದರೂ ಎಲ್ಲಿಯಾದರೂ ಏನಾದರೂ ಮಾಡಿದರೆ ಕೆಲವೇ ನಿಮಿಷಗಳಲ್ಲಿ ಅದು ಜನರನ್ನು ತಲುಪುತ್ತದೆ. ಜನರು ಏನಾದರೂ ತಪ್ಪು ಮಾಡಿದಾಗ, ಅವರು ಅದನ್ನು ಮಾಡುವುದನ್ನು ಯಾರಾದರೂ ಗಮನಿಸುತ್ತಿರಬಹುದು ಎಂದು ಅವರಿಗೆ ಅನಿಸುವುದಿಲ್ಲ.(Viral News In Kannada)

ಯಾರೋ ಕ್ಯಾಮೆರಾದಲ್ಲಿ  ತಮ್ಮ ವಿಡಿಯೋ ಸೆರೆಹಿಡಿಯಬಹುದು ಅಂತ ಅವರಿಗೆ ಅನಿಸುವುದಿಲ್ಲ. ಅದರಲ್ಲೂ ಅವರು ವಿಚಿತ್ರವಾದದ್ದನ್ನು ಮಾಡಿದಾಗ. ಜನರು ತಮ್ಮ ಮೊಬೈಲ್ ಹೊರೆತೆಗೆಯಲು ಸಮಯ ತೆಗೆದುಕೊಳ್ಳುವುದಿಲ್ಲ. ನಂತರ ಇಂತಹ ವಿಡಿಯೋಗಳು ಇಂಟರ್ ನೆಟ್ ಗೆ ಬಂದ ತಕ್ಷಣ ಭಾರಿ ವೈರಲ್ ಆಗುತ್ತವೆ. ಅಂತಹುದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ಪತಿ ಪತಿಯನ್ನು ನೀವು ಕಾಣಬಹುದು. ವಿಡಿಯೋದಲ್ಲಿ ಏನಿದೆ ತಿಳಿದುಕೊಳ್ಳೋಣ ಬನ್ನಿ.

ಚಲಿಸುವ ಬೈಕ್‌ನಲ್ಲಿ ಹೆಂಡತಿಯ ಪರಾಕ್ರಮ
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ ನಿಮಗೂ ಒಂದು ಕ್ಷಣ ಶಾಕ್ ಆಗಬಹುದು. ವೈರಲ್ ಆಗಿರುವ ವಿಡಿಯೋದಲ್ಲಿ ಪತಿ-ಪತ್ನಿ ಬೈಕ್‌ನಲ್ಲಿ ಹೋಗುತ್ತಿರುವುದನ್ನು ನೀವು ನೋಡಬಹುದಾಗಿದೆ. ಅವರ ಮಗು ಬೈಕಿನ ಮುಂಭಾಗದಲ್ಲಿ ಕುಳಿತಿದೆ. ಇದರಲ್ಲಿ ಶಾಕಿಂಗ್ ಸಂಗತಿ ಏನಿದೆ ಎಂಬುದನ್ನು ಈಗ ನಾವು ಹೇಳುತ್ತಿದ್ದೇವೆ ಕೇಳಿ. ವಿಡಿಯೋ ಮುಂದುವರೆದಂತೆ ಹಿಂದೆ ಕುಳಿತಿರುವ ಪತ್ನಿ ಬಲಗೈಯಲ್ಲಿ ಸಿಗರೇಟ ಹಿಡಿದಿರುವುದು ಕಂಡುಬಂದಿದೆ. 

ಒಂದು ನಿಶ್ಚಿತ ಕಾಲಾಂತರದಲ್ಲಿ ಅವಳು ತನ್ನ ಪತಿಗೆ ಒಂದೊಂದೇ ಪಫ್ ಸಿಗರೇಟ್ ಸೇದಲು ಸಹಾಯ ಮಾಡುತ್ತಿದ್ದಾಳೆ. ಪತಿ ಎರಡು ಕೈಗಳಿಂದ ಬೈಕ್ ಓಡಿಸುತ್ತಿದ್ದಾರೆ ಎಂಬುದು ಇದರ ಹಿಂದಿನ ಕಾರಣ. ಇಂತಹ ಪರಿಸ್ಥಿತಿಯಲ್ಲಿ, ಆತ ಸ್ವತಃ ಸಿಗರೇಟ್ ಸೇದಲು ಸಾಧ್ಯವಿಲ್ಲ. ಆದ್ದರಿಂದ ಆತನ ಈ ಕೆಲಸದಲ್ಲಿ ಆತನ ಪತ್ನಿ ಬೆಂಬಲ ನೀಡುತ್ತಿದ್ದಾರೆ. ಈ ವೀಡಿಯೊವನ್ನು @HasnaZaruriHai ಹೆಸರಿನ ಪುಟದಿಂದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ X ನಲ್ಲಿ ಹಂಚಿಕೊಳ್ಳಲಾಗಿದೆ. ಇದುವರೆಗೆ 6 ಲಕ್ಷಕ್ಕೂ ಹೆಚ್ಚು ಬಾರಿ ಇದನ್ನು ವೀಕ್ಷಿಸಲಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ತಮಾಷೆ ಮಾಡುತ್ತಿರುವ ಜನ
ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿದ ಜನ ಸಖತ್ ಖುಷಿ ಪಡುತ್ತಿದ್ದಾರೆ, ಈ ಕುರಿತು ಕಾಮೆಂಟ್ ಮಾಡಿರುವ ಓರ್ವ ಬಳಕೆದಾರ 'ಇಂತಹ ಪತ್ನಿಯನ್ನು ಪಡೆಯಲು ಒಬ್ಬರು ಯಾವ ಕೋರ್ಸ್ ಮಾಡಬೇಕು?' ಎಂದು ಪ್ರಶ್ನಿಸಿದ್ದಾರೆ.  ಕಾಮೆಂಟ್ ಮಾಡಿದ ಮತ್ತೊಬ್ಬ ಬಳಕೆದಾರರು ‘ಎಲ್ಲರಿಗೂ ಇಂಥ ಹೆಂಡತಿ ಸಿಕ್ಕರೆ ದೇಶವೇ ಹಾಳಾಗುತ್ತದೆ’ ಎಂದು ಬರೆದುಕೊಂಡಿದ್ದಾರೆ. ಮೂರನೇ ಬಳಕೆದಾರರು, 'ಬ್ರೋ  ತನ್ನ ಹಿಂದಿನ ಜನ್ಮದಲ್ಲಿ ಏನಾದರೂ ಒಳ್ಳೆಯದನ್ನು ಮಾಡಿರಬೇಕು, ಅಂದಹಾಗೆ, ಆ ವೀಡಿಯೊ ಎಲ್ಲಿಂದ ಬಂದಿದ್ದರೂ, ಬ್ರದರ್ ಗೆ ಚಲನ್ ನೀಡುವಂತೆ ಮತ್ತು ಎಚ್ಚರಿಕೆಯನ್ನು ನೀಡುವಂತೆ ಪೊಲೀಸರಿಗೆ ವಿನಂತಿಸಲಾಗುತ್ತದೆ' ಎಂದು ಕಾಮೆಂಟ್ ಮಾಡಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News