Viral Video: ಸಂಗೀತವನ್ನು ಆನಂದಿಸುತ್ತಾ ಗಿಟಾರ್ ನುಡಿಸಿದ ಬೀದಿ ನಾಯಿ!

GoodNewsCorrespondent ಹೆಸರಿನ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಶ್ವಾನದ ಸಂಗೀತ ಪ್ರೀತಿಗೆ ಅನೇಕರು ಮನಸೋತಿದ್ದಾರೆ.

Written by - Puttaraj K Alur | Last Updated : Aug 13, 2022, 12:34 PM IST
  • ಬಾರ್ ಬಳಿ ಸಂಗೀತಗಾರನ ಸಂಗೀತಕ್ಕೆ ಮನಸೋತ ಬೀದಿ ನಾಯಿ
  • ಸಂಗೀತಗಾರನಿಗೆ ಪ್ರೀತಿಯಿಂದ ಹಸ್ತಲಾಘವ ನೀಡಿ ಗಿಟಾರ್ ನುಡಿಸಿದ ಶ್ವಾನ
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ವಿಡಿಯೋ
Viral Video: ಸಂಗೀತವನ್ನು ಆನಂದಿಸುತ್ತಾ ಗಿಟಾರ್ ನುಡಿಸಿದ ಬೀದಿ ನಾಯಿ! title=
ಗಿಟಾರ್ ನುಡಿಸಿದ ಶ್ವಾನದ ವಿಡಿಯೋ ವೈರಲ್!

ನವದೆಹಲಿ: ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನ ಹತ್ತಾರು ವಿಡಿಯೋಗಳು ವೈಲ್ ಆಗುತ್ತಿರುತ್ತವೆ. ಕೆಲ ತಮಾಷೆಯ ವಿಡಿಯೋಗಳನ್ನು ನೋಡಿದ್ರೆ ಹೊಟ್ಟೆ ಹುಣ್ಣಾಗುವಂತೆ ನಗು ಬರುತ್ತೆ. ಇನ್ನು ಕೆಲವು ವಿಡಿಯೋಗಳು ಹೃದಯಸ್ಪರ್ಶಿಯಾಗಿ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತವೆ. ಅದೇ ರೀತಿಯ ವಿಡಿಯೋವೊಂದು ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಈ ವಿಡಿಯೋ ನೋಡಿದ್ರೆ ನೀವು ಖಂಡಿತ ಖುಷಿಪಡುತ್ತೀರಿ. ಈ ವಿಡಿಯೋದಲ್ಲಿ ಬೀದಿ ನಾಯಿಯೊಂದು ಸಂಗೀತವನ್ನು ಆನಂದಿಸಿ ಗಿಟಾರ್ ನುಡಿಸಿದೆ. ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಸಾವಿರಾರು ಜನರು ಖುಷಿಪಟ್ಟು ಕಾಮೆಂಟ್ ಮಾಡಿದ್ರೆ, ಅನೇಕರು ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ: Viral Video : ತನ್ನ ಗೆಳೆಯನನ್ನು ಬೇಟೆಯಾಡಲು ಬಂದ ಸಿಂಹದ ಮೇಲೆ ಎಮ್ಮೆಯ ಯಮಸ್ವರೂಪಿ ದಾಳಿ

ವೈರಲ್ ಆಗಿರುವ ವಿಡಿಯೋದಲ್ಲಿ ಸಂಗೀತಗಾರನೊಬ್ಬ ಗಿಟಾರ್ ನುಡಿಸುತ್ತಿರುತ್ತಾನೆ. ಆತನ ಬಳಿ ಬಂದು ಕೂರುವ ಶ್ವಾನ ಸಂಗೀತವನ್ನು ಆಲಿಸುತ್ತಾ ಖುಷಿಪಟ್ಟಿದೆ. ಬಾಲ ಅಲ್ಲಾಡಿಸುತ್ತಾ ಸಂಗೀತವನ್ನು ಆನಂದಿಸುವ ಶ್ವಾನ ಸಂಗೀತಗಾರನ ಬಳಿಗೆ ಬಂದು ಖುಷಿಯಿಂದ ಹಸ್ತಲಾಘವ ಮಾಡುತ್ತದೆ. ಇದಷ್ಟೇ ಅಲ್ಲದೆ ಗಿಟಾರ್ ನುಡಿಸಲು ಪ್ರಯತ್ನಿಸಿದೆ.  

GoodNewsCorrespondent ಹೆಸರಿನ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಶ್ವಾನದ ಸಂಗೀತ ಪ್ರೀತಿಗೆ ಅನೇಕರು ಮನಸೋತಿದ್ದಾರೆ. ‘ಶ್ವಾನ’ದ ಪ್ರೀತಿ ಮುಂದೆ ಯಾವುದೂ ಇಲ್ಲ, ನೀವು ಪ್ರೀತಿಯಿಂದ ಒಂದು ತುತ್ತು ಅನ್ನ ಹಾಕಿದರೆ ಅದು ಎಂದಿಗೂ ನಿಮ್ಮನ್ನು ತೊರೆದು ಹೋಗುವುದಿಲ್ಲ. ಇದೇ ಶ್ವಾನದ ನಿಯತ್ತು’ ಅಂತಾ ಅನೇಕರು ಕಾಮೆಂಟ್ ಮಾಡಿದ್ದಾರೆ.  

ಇದನ್ನೂ ಓದಿ: Beautiful Rakshabandhan: ಚಿರತೆಯ ಕೈಗೆ ರಾಖಿ ಕಟ್ಟಿ ರಕ್ಷಾ ಬಂಧನ ಆಚರಿಸಿದ ಮಹಿಳೆ, ವಿಡಿಯೋ ನೋಡಿNewsCorres1) August 11, 2022

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News