Viral Video : ಸೋಷಿಯಲ್‌ ಮಿಡಿಯಾ ಅವಾಂತರ; ಸ್ಲೀಪರ್ ಕೋಚ್​ನಲ್ಲಿಯೂ ರೀಲಿಗರ ಹಾವಳಿ..ಕಿಡಿಕಾರಿದ ನೆಟ್ಟಿಗರು

Girl Dance in Train : ಡಿಜಿಟಲ್‌ ಯುಗದಲ್ಲಿ ಎಲ್ಲವೂ ಸಾಮಾನ್ಯವಾಗಿಬಿಟ್ಟಿದೆ. ಲೈಕ್​ ಶೇರ್​ಗಾಗಿ ಸಾರ್ವಜನಿಕ ಸ್ಥಳಗಳಲ್ಲಿಯೇ ಹುಚ್ಚಾಟ ಮಾಡುತ್ತಿರುತ್ತಾರೆ. ಇದೀಗ ಅಂತದ್ದೇ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿದ್ದು ರೈಲೊಂದರ ಸ್ಲೀಪರ್​ ಕೋಚಿನಲ್ಲಿ ಯುವತಿಯೊಬ್ಬಳು ರೀಲ್ಸ್ ಮಾಡಿದ್ದು, ಕಾಮೆಂಟ್‌ ಭಾಕ್ಸ್‌ನಲ್ಲಿ ನೆಟ್ಟಿಗರು ಆಕೆಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.  

Last Updated : Jul 30, 2023, 11:51 AM IST
  • ಸಾರ್ವಜನಿಕ ಸ್ಥಳಗಳಲ್ಲಿ ರೀಲಿಗರ ಹುಚ್ಚಾಟಕ್ಕೆ ಮಿತಿಯೇ ಇಲ್ಲದಂತಾಗಿದೆ.
  • ವಿಡಿಯೋದಲ್ಲಿ ಸ್ಲೀಪರ್ ಕೋಚ್​ನಲ್ಲಿ ಯುವತಿಯೊಬ್ಬಳು ರೀಲ್‌ಗಾಗಿ ಡಾನ್ಸ್‌ ಮಾಡಿದ್ದಾಳೆ.
  • ಇದು ನೆಟ್ಟಿಗರನ್ನು ಕೆರಳಿಸಿದೆ.
Viral Video : ಸೋಷಿಯಲ್‌ ಮಿಡಿಯಾ ಅವಾಂತರ; ಸ್ಲೀಪರ್ ಕೋಚ್​ನಲ್ಲಿಯೂ ರೀಲಿಗರ ಹಾವಳಿ..ಕಿಡಿಕಾರಿದ ನೆಟ್ಟಿಗರು title=

Viral Video in Train : ಮೆಟ್ರೋ, ರೈಲು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ರೀಲಿಗರ ಹುಚ್ಚಾಟಕ್ಕೆ ಮಿತಿಯೇ ಇಲ್ಲದಂತಾಗಿದೆ. ತಮ್ಮ ಲೋಕದಲ್ಲಿಯೇ ಮುಳುಗಿರುವ ಅವರಿಗೆ ಬುದ್ಧಿ ಹೇಳಿಹೇಳಿ ನೆಟ್ಟಿಗರೇ ಬೇಸೊತ್ತಿದ್ದಾರೆ. ಆಗ ರೈಲು ಹತ್ತಿದರೆ ಭಿಕ್ಷುಕರು ಈಗ ರೀಲಿಗರು. ಇದೊಂದು ಬಗೆಹರಿಯದ ದೊಡ್ಡ ಸಮಸ್ಯೆಯಂತೆ ಪರಿಣಮಿಸುತ್ತಿದೆ.

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಸ್ಲೀಪರ್ ಕೋಚ್​ನಲ್ಲಿ ಯುವತಿಯೊಬ್ಬಳು ರೀಲ್‌ಗಾಗಿ ಡಾನ್ಸ್‌ ಮಾಡಿದ್ದಾಳೆ. ಇದು ನೆಟ್ಟಿಗರನ್ನು ಕೆರಳಿಸಿದೆ. ಹೌದು ವಿಡಿಯೋ ನೋಡಿದ ಎಲ್ಲರೂ "ಈಕೆಗೆ ಯಾರಾದರೂ ಐದು ರೂಪಾಯಿ ಭಿಕ್ಷೆ ಹಾಕಿ, ಪಕ್ಕದಲ್ಲಿರುವ ಹುಡುಗ ಕಿವಿಗೆ ಇಯರ್ ಫೋನ್ ಹಾಕಿಕೊಂಡಿರುವುದಕ್ಕೆ ಪಾರು, ಡಾನ್ಸ್‌ ಮಾಡಲು ಅದು ಸೂಕ್ತ ಸ್ಥಳವಲ್ಲ ಕನಮ್ಮ" ಎಂದೆಲ್ಲಾ ಪ್ರತಿಕ್ರಿಯಿಸಿದ್ದಾರೆ. 

 
 
 
 

 
 
 
 
 
 
 
 
 
 
 

A post shared by Seema Kanojiya (@seemakanojiya87)

ಇದನ್ನೂ ಓದಿ-Viral Video : ಸ್ಕೈಡೈವ್ ಮಾಡುವ ಮೂಲಕ ಮದುವೆಯಾಗಿ ಗುಂಡಿಗೆ ಬಿದ್ದ ಜೋಡಿ..ಹೇಗಿದೆ ನೋಡಿ ಥ್ರಿಲ್ಲಿಂಗ್​ ವೆಡ್ಡಿಂಗ್  

ಇನ್ನೂ ಕೆಲವರು ರೀಲಿಗರಿಗೆ ಸಾರ್ವಜನಿಕ ಸ್ಥಳವೇ ಬೇಕಾ..? ರಸ್ತೆ, ಸಂತೆ, ಬಸ್ಸು, ಟ್ರೇನು, ಏರೋಪ್ಲೇನು, ಗುಡ್ಡಬೆಟ್ಟ, ಶಾಲೆ, ದೇವಸ್ಥಾನ ಯಾವ ಜಾಗಗಳೂ ನಿಮಗೆ ಸಾಕಾಗುತ್ತಿಲ್ಲವೇ..? ಎಂದು ಪ್ರಶ್ನಿಸಿದ್ದಾರೆ. 

ಈ ರೀಲಿಗರ ಹಾವಳಿಗೆ ರೈಲುಪ್ರಯಾಣದ ಸೊಗಸೇ ಮಾಸುತ್ತಿದೆ ಎಂದು ಕೆಲವರು ಬೇಸರಗೊಂಡಿದ್ದಾರೆ. ಏನೇ ಮಾಡಿಕೊಳ್ಳಲಿ ಸಾರ್ವಜನಿಕ ಸ್ಥಳಗಳಲ್ಲಿ ಬೇಡ ಮತ್ತು ಯಾರಿಂದಲೂ ಯಾರಿಗೂ ತೊಂದರೆಯಾಗುವುದ ಬೇಡ ಎಂದು ಮತ್ತೊಬ್ಬರು ಕಾಮೆಂಟ್‌ಮಾಡುವ ಮೂಲಕ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ-New Cars: ಗ್ರಾಹಕರನ್ನು ಹುಚ್ಚೆಬ್ಬಿಸಿದ ಈ 4 ಕಾರುಗಳು! ಬೆಲೆ ಕೇವಲ 7.4 ಲಕ್ಷ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News