Viral Video: ಮೈನಡುಕ ಹುಟ್ಟಿಸುವ ಬೆಂಗಳೂರು ಕಟ್ಟಡ ಕುಸಿತದ ವಿಡಿಯೋ; ದುರಂತ ಕ್ಷಣದ ವಿಡಿಯೋ ಹೇಗಿದೆ ನೋಡಿ

Bengaluru building collapse: ಮಲ್ಲೇಶ್ವರ ನಿವಾಸಿಗಳಾದ ಆಂಧ್ರಪ್ರದೇಶ ಮೂಲದ ಮುನಿರಾಜು ರೆಡ್ಡಿ ಮತ್ತು ಪುತ್ರ ಮೋಹನ್ ರೆಡ್ಡಿ, ವಡ್ಡರಪಾಳ್ಯದಲ್ಲಿ ಅಪಾರ್ಟ್‌ಮೆಂಟ್ ನಿರ್ಮಾಣ ಕೈಗೊಂಡಿದ್ದರು. ಈ ಅಪಾರ್ಟ್‌ಮೆಂಟ್‌ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿತ್ತು. ಬಿಹಾರ ಮೂಲದ 20 ಕಾರ್ಮಿಕರು ಟೈಲ್ಸ್ ಮತ್ತು ಪ್ಲಂಬಿಂಗ್, ಪೇಂಟಿಂಗ್ ಕೆಲಸ ಮಾಡುತ್ತಿದ್ದಾಗ ದುರಂತ ಸಂಭವಿಸಿದೆ. ​

Written by - Puttaraj K Alur | Last Updated : Oct 23, 2024, 10:53 PM IST
  • ಬೆಂಗಳೂರು ಕಟ್ಟಡ ಕುಸಿತ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 8ಕ್ಕೆ ಏರಿಕೆ
  • ಪ್ರಕರಣ ಸಂಬಂಧ ಕಟ್ಟಡ ಮಾಲೀಕ ಸೇರಿದಂತೆ ಮೂವರ ಬಂಧನ
  • ಕಟ್ಟಡ ಕುಸಿತದ ಭಯಾನಕ ವಿಡಿಯೋ ಸಖತ್‌ ವೈರಲ್‌ ಆಗುತ್ತಿದೆ
Viral Video: ಮೈನಡುಕ ಹುಟ್ಟಿಸುವ ಬೆಂಗಳೂರು ಕಟ್ಟಡ ಕುಸಿತದ ವಿಡಿಯೋ; ದುರಂತ ಕ್ಷಣದ ವಿಡಿಯೋ ಹೇಗಿದೆ ನೋಡಿ title=
ಕಟ್ಟಡ ಕುಸಿತ ವಿಡಿಯೋ ವೈರಲ್!

Bengaluru building collapse latest updates: ಬೆಂಗಳೂರು ಕಟ್ಟಡ ಕುಸಿತ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡ ಮಾಲೀಕ ಭುವನ್ ರೆಡ್ಡಿ ಸೇರಿದಂತೆ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಟ್ಟಡ ಕುಸಿತದ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಈ ವಿಡಿಯೋ ನೋಡುಗರ ಮೈ ನಡುಕ ಹುಟ್ಟಿಸುವಂತಿದೆ. 

ಹೆಣ್ಣೂರು ಸಮೀಪದ ಬಾಬುಸಾಬ್‌ಪಾಳ್ಯದ ವಡ್ಡರ ಪಾಳ್ಯದಲ್ಲಿ ಮುನಿರಾಜು ರೆಡ್ಡಿ ಎಂಬಾತ 6 ಅಂತಸ್ತಿನ ಅಪಾರ್ಟ್‌ಮೆಂಟ್ ನಿರ್ಮಾಣ ಮಾಡುತ್ತಿದ್ದ. ಈ ಕಟ್ಟಡ ನಿರ್ಮಾಣದಲ್ಲಿ 20 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಮಂಗಳವಾರ (ಅಕ್ಟೋಬರ್ 22) ಮಧ್ಯಾಹ್ನ 3.39ರಲ್ಲಿ ಏಕಾಏಕಿ ಕಟ್ಟಡ ನೆಲಮಹಡಿ ಸಮೇತ ಕುಸಿದು ಬಿದ್ದಿದೆ. ಆಗ ಬಿಹಾರ ಮೂಲದ ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದರು. ಭಾರೀ ಮಳೆಯ ನಡುವೆ ಕಟ್ಟಡ ಕುಸಿತ ದುರಂತ ಸಂಭವಿಸಿದೆ. ಇದುವೆರಗೆ 8 ಮಂದಿ ಸಾವನ್ನಪ್ಪಿರುವುದು ವರದಿಯಾಗಿದ್ದು, 14 ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಸಿದ ಕಟ್ಟಡದ ಅಡಿಯಲ್ಲಿ ಸಿಲುಕಿದವರ ರಕ್ಷಣೆ ಕಾರ್ಯ ನಡೆಯುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.  

ಇದನ್ನೂ ಓದಿ: 30 ಕೋಟಿ ಕಾರ್ಮಿಕರಿಗೆ ದೀಪಾವಳಿಯ ಬಂಪರ್ ಉಡುಗೊರೆ ಘೋಷಿಸಿದ ಕೇಂದ್ರ..! ಈಗ ಒಂದೇ ಕ್ಲಿಕ್‌ನಲ್ಲಿ ಈ ಸೌಲಭ್ಯ ನಿಮಗೂ ಲಭ್ಯ...!

ಮಲ್ಲೇಶ್ವರ ನಿವಾಸಿಗಳಾದ ಆಂಧ್ರಪ್ರದೇಶ ಮೂಲದ ಮುನಿರಾಜು ರೆಡ್ಡಿ ಮತ್ತು ಪುತ್ರ ಮೋಹನ್ ರೆಡ್ಡಿ, ವಡ್ಡರಪಾಳ್ಯದಲ್ಲಿ ಅಪಾರ್ಟ್‌ಮೆಂಟ್ ನಿರ್ಮಾಣ ಕೈಗೊಂಡಿದ್ದರು. ಈ ಅಪಾರ್ಟ್‌ಮೆಂಟ್‌ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿತ್ತು. ಬಿಹಾರ ಮೂಲದ 20 ಕಾರ್ಮಿಕರು ಟೈಲ್ಸ್ ಮತ್ತು ಪ್ಲಂಬಿಂಗ್, ಪೇಂಟಿಂಗ್ ಕೆಲಸ ಮಾಡುತ್ತಿದ್ದಾಗ ದುರಂತ ಸಂಭವಿಸಿದೆ. ಅವಶೇಷಗಳಡಿ 20 ಕಾರ್ಮಿಕರು ಸಿಲುಕಿದ್ದರು.  

ಧಾರಾಕಾರ ಮಳೆ ಸುರಿಯುತ್ತಿದ್ದರೂ ಸಹ ಕಾರ್ಮಿಕರು ತಮ್ಮ ಕೆಲಸವನ್ನು ಮುಂದುವರಿಸಿದ್ದರು. ಮಧ್ಯಾಹ್ನದ ಊಟ ಮುಗಿಸಿ ಮತ್ತೆ ಕೆಲಸ ಶುರು ಮಾಡಿದ್ದರು. ಅಪರಾಹ್ನ 3.30ರ ಸುಮಾರಿಗೆ ಕಟ್ಟಡ ಪಿಲ್ಲರ್ ಸಮೇತ ಕುಸಿದು ಬಿದ್ದಿದೆ. ಒಳಗಿದ್ದ ಕಾರ್ಮಿಕರು ಅವಶೇಷಗಳಡಿ ಸಿಲುಕಿಕೊಂಡಿದ್ದರು. ಈ ಪೈಕಿ ಒಬ್ಬಾತ ಚೀರಾಡಿಕೊಂಡು ಹೊರಬಂದಿದ್ದ. ಆತ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದ. ಪಕ್ಕದ ಅಪಾರ್ಟ್‌ಮೆಂಟ್‌ನಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ದುರಂತ ಕ್ಷಣದ ವಿಡಿಯೋ ದಾಖಲಾಗಿದೆ.

ಇದನ್ನೂ ಓದಿ: ಕೋಮು ಸೌಹಾರ್ಧತೆಗೆ ಧಕ್ಕೆ; ನ್ಯಾಯಾಲಯದ ತೀರ್ಪು ಹೀಗೇಕೆ?

4 ಮಹಡಿ ಪ್ಲಾನ್‌ ಇಟ್ಟುಕೊಂಡು 6 ಮಹಡಿ ಕಟ್ಟಿಸಿದ್ದರು

ವಡ್ಡರಪಾಳ್ಯದಲ್ಲಿ ಕುಸಿದ ಅಪಾರ್ಟ್‌ಮೆಂಟ್‌ ಕಟ್ಟಡದ ಪ್ಲಾನ್‌ ಇದ್ದದ್ದು ಕೇವಲ 4 ಮಹಡಿಯದ್ದು. ಆದರೆ ಅವರು ಕಟ್ಟಿಸಿರುವುದು 6 ಮಹಡಿಯ ಕಟ್ಟಡ. 4 ಮಹಡಿಗೆ ಬೇಕಾದ ಪಿಲ್ಲರ್ ಹಾಕಿ ಆರು ಮಹಡಿ ಕಟ್ಟಿಸಿದ ಕಾರಣ ಅಷ್ಟು ಭಾರವನ್ನು ಹೊರುವ ಸಾಮರ್ಥ್ಯವಿಲ್ಲದ ಪಿಲ್ಲರ್ ಮುರಿದು ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ. ಕಳಪೆ ಕಾಮಗಾರಿ ಸಹ ದುರಂತಕ್ಕೆ ಕಾರಣವೆಂದು ಬಿಬಿಎಂಪಿ ಅಧಿಕಾರಿಗಳು ಆರೋಪಿಸಿದ್ದಾರೆ. ಆರು ಅಂತಸ್ತಿನ ಕಟ್ಟಡ ಏಕಾಏಕಿ ಖಾಲಿ ಜಾಗದಲ್ಲಿ ಬಿದ್ದಿದೆ. ಅಕಸ್ಮಾತ್ ಅಕ್ಕ ಪಕ್ಕದಲ್ಲಿದ್ದ ಮನೆ ಮೇಲೆ ಬಿದ್ದಿದ್ದರೆ ಅನೇಕರ ಪ್ರಾಣಕ್ಕೆ ಸಂಚಕಾರವಾಗುತ್ತಿತ್ತು. ಅದೃಷ್ಟವಶಾತ್ ದೊಡ್ಡ ದುರಂತ ತಪ್ಪಿದಂತಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News