Viral Video: ಹಾಲಿನಲ್ಲಿ ಮಗಳ ಪಾದ ತೊಳೆದು ಕುಡಿದ ಪೋಷಕರು..!

ಈ ವೈರಲ್ ವಿಡಿಯೋದಲ್ಲಿ ಪೋಷಕರು ತಮ್ಮ ಮಗಳ ಕಾಲನ್ನು ನೀರು ಮತ್ತು ಹಾಲಿನಲ್ಲಿ ತೊಳೆದು ಅದನ್ನು ಸೇವಿಸಿದ್ದಾರೆ.

Written by - Puttaraj K Alur | Last Updated : Aug 25, 2022, 02:05 PM IST
  • ಹಾಲು ಮತ್ತು ನೀರಿನಲ್ಲಿ ಮಗಳ ಪಾದ ತೊಳೆದ ತಂದೆ-ತಾಯಿ
  • ಪುತ್ರಿಯ ಪಾದ ಪೂಜೆಯನ್ನು ಮಾಡಿ ನೀರು ಸೇವಿಸಿದ ಪೋಷಕರು
  • ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಹೃದಯ ಸ್ಪರ್ಶಿ ವಿಡಿಯೋ
Viral Video: ಹಾಲಿನಲ್ಲಿ ಮಗಳ ಪಾದ ತೊಳೆದು ಕುಡಿದ ಪೋಷಕರು..! title=
ಮಗಳ ಪಾದ ತೊಳೆದ ಪೋಷಕರು

ನವದೆಹಲಿ: ಯಾವುದೇ ಪೋಷಕರಿಗೆ ಮಗಳು ಮನೆಯ ಲಕ್ಷ್ಮಿ ಇದ್ದಂತೆ.. ತಮ್ಮ ಮಗಳ ಸುಖವಾಗಿರಲಿ ಎಂದು ಬಹುತೇಕ ಪೋಷಕರು ಬಯಸುತ್ತಾರೆ. ಈ ನಿಟ್ಟಿನಲ್ಲಿ ಕಷ್ಟಪಟ್ಟು ತ್ಯಾಗ ಮಾಡಿ ಮಕ್ಕಳನ್ನು ಬೆಳೆಸುತ್ತಾರೆ. ಪೋಷಕರು ಮತ್ತು ಮಗಳ ನಡುವಿನ ಹೃದಯಸ್ಪರ್ಶಿ ಬಂಧನದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.   

ವೈರಲ್ ವಿಡಿಯೋದಲ್ಲಿ ಪೋಷಕರು ತಮ್ಮ ಮಗಳ ಕಾಲನ್ನು ನೀರು ಮತ್ತು ಹಾಲಿನಲ್ಲಿ ತೊಳೆದು ಅದನ್ನು ಸೇವಿಸಿದ್ದಾರೆ. ಆದರೆ ಇದು ತುಂಬಾ ನಾಟಯಕೀಯವಾಗಿದೆ ಎಂದು ಸೋಷಿಯಲ್ ಮೀಡಿಯಾ ಬಳಕೆದಾರರು ಟೀಕಿಸಿದ್ದಾರೆ. ವಿಡಿಯೋದಲ್ಲಿ ಅಪ್ಪ-ಅಮ್ಮ ತಮ್ಮ ಪುತ್ರಿಯ ಪಾದಗಳನ್ನು ನೀರು ಮತ್ತು ಹಾಲಿನಿಂದ ತೊಳೆಯುತ್ತಾರೆ. ಬಳಿಕ ಕಾಲು ತೊಳೆದ ನೀರು ಮತ್ತು ಹಾಲನ್ನು ಪೋಷಕರು ಸೇವಿಸಿದ್ದಾರೆ. 2.20 ನಿಮಿಷವಿರುವ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಇದ್ಯಾವ ರೀತಿಯ ಸಂಪ್ರದಾಯ..? ಏಕೆ ಈ ರೀತಿ ಮಾಡಬೇಕು..? ಅಂತಾ ಹಲವರು ಪ್ರಶ್ನಿಸಿದ್ದಾರೆ. ಮಗಳು ಮನೆ ಬಿಟ್ಟು ಹೋಗಲಿದ್ದಾಳೆಂಬ ಕಾರಣಕ್ಕೆ ಈ ರೀತಿ ಮಾಡಿದ್ದಾರೆ ಅಂತಾ ಕೆಲವು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Viral Video: ಸಮುದ್ರದ ತೀರದಲ್ಲಿ ಉಡಗಳ ಆಲಿಂಗನ

ಈ ವಿಡಿಯೋದಲ್ಲಿ ಮಗಳ ಪಾದ ತೊಳೆದ ತಂದೆ ಟವೆಲ್‌ನಿಂದ ಒರೆಸುತ್ತಾನೆ. ಕಾಲು ತೊಳದೆ ನೀರನ್ನು ಮೊದಲು ಆತ ಕುಡಿದು ಪತ್ನಿಗೆ ನೀಡುತ್ತಾನೆ. ಈ ವೇಳೆ ಮಗಳ ತಲೆ ಸವರುವ ತಾಯಿ ಆ ನೀರನ್ನು ಸಂತೋಷದಿಂದಲೇ ಸೇವಿಸುತ್ತಾಳೆ. ಈ ವೇಳೆ ಆ ನೀರು ಕುಡಿಯಬೇಡಿ ಅಂತಾ ಮಗಳು ತಂದೆ-ತಾಯಿಗೆ ಹೇಳುತ್ತಿರುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದಾಗಿದೆ.

ನಂತರ ಮಗಳ ಪಾದಗಳನ್ನು ಕೆಂಪು ನೀರಿನಲ್ಲಿರಿಸಿ ಬಿಳಿ ಬಟ್ಟೆಯ ಮೇಲೆ ನಡೆಯುವಂತೆ ತಂದೆ-ತಾಯಿ ಮಾಡುತ್ತಾರೆ. ಇದರಿಂದ ಅವಳ ಹೆಜ್ಜೆಗುರುತುಗಳು ಅದರ ಮೇಲೆ ಅಚ್ಚಾಗುತ್ತವೆ. ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಸಂಜಯ್ ಕುಮಾರ್ ಅವರು ‘ಭಾವನಾತ್ಮಕ ಕ್ಷಣ’ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ತಮ್ಮ ಮಗಳನ್ನು ಗಂಡನ ಮನೆಗೆ ಕಳುಹಿಸುವ ವೇಳೆ ಪೋಷಕರು ಬೀಳ್ಕೊಡುಗೆ ಕಾರ್ಯಕ್ರಮ ನೀಡಿದ್ದಾರೆ ಅಂತಾ ಕೆಲವರು ಕಾಮೆಂಟ್ ಮಾಡಿದ್ದಾರೆ. ಇದೊಂದು ಹೃದಯ ಸ್ಪರ್ಶಿ ಸನ್ನಿವೇಶ. ತಮ್ಮ ಪ್ರೀತಿಯ ಪುತ್ರಿಯ ಮೇಲೆ ಆ ಪೋಷಕರು ಇಟ್ಟಿರುವ ಪ್ರೀತಿಗೆ ಬೆಲೆ ಕಟ್ಟಲಾಗದು ಅಂತಾ ಕೆಲವು ಕಾಮೆಂಟ್ ಮಾಡಿದ್ದಾರೆ. ಅನೇಕರು ಇದೊಂದು ವಿಚಿತ್ರ ಸಂಪ್ರದಾಯವೆಂದು ಹೇಳಿದ್ದಾರೆ.

ಇದನ್ನೂ ಓದಿ: Congress : ಕೈ ನಾಯಕರಿಗೆ ಬಿಗ್ ಶಾಕ್ : ಕಾಂಗ್ರೆಸ್ ಯೂಟ್ಯೂಬ್ ಚಾನೆಲ್ ಡಿಲೀಟ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News