Viral Video: ಮನೆಯ ಮಹಡಿಯ ಮೇಲೆ ಕುಳಿತು ಬಟ್ಟೆ ವಾಶ್ ಮಾಡಿದ ಕೋತಿ...ವಿಡಿಯೋ ನೋಡಿ

Trending Video - ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿರುವ ವಿಡಿಯೋವನ್ನು ನೋಡಿ ಜನರು ಭಾರಿ ಆಶ್ಚರ್ಯಚಕಿತರಾಗಿದ್ದಾರೆ. ಕೋತಿ ಬಟ್ಟೆ ವಾಶ್ ಮಾಡುವ ಈ ಸ್ಟೈಲ್ ಅನ್ನು ಕಲಿತಿದ್ದಾದರು ಎಲ್ಲಿಂದ? ಎಂಬ ಪ್ರಶ್ನೆ ನಿಮಗೂ ಕಾಡಲಿದೆ.  

Written by - Nitin Tabib | Last Updated : Aug 23, 2022, 09:56 PM IST
  • ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಕೋತಿಯ ಒಂದು ವಿಡಿಯೋವನ್ನು ನೋಡಿ ನೀವೂ ಕೂಡ ಆಶ್ಚರ್ಯಪಡುವಿರಿ.
  • ವೀಡಿಯೊದಲ್ಲಿ, ಕೋತಿ ಎಷ್ಟು ಪರಿಪೂರ್ಣ ರೀತಿಯಲ್ಲಿ ಬಟ್ಟೆ ಒಗೆಯುತ್ತಿದೆ ಎಂದರೆ ಅದನ್ನು ಮಾತುಗಳಲ್ಲಿ ಬಣ್ಣಿಸಲು ಅಸಾದ್ಯ.
Viral Video: ಮನೆಯ ಮಹಡಿಯ ಮೇಲೆ ಕುಳಿತು ಬಟ್ಟೆ ವಾಶ್ ಮಾಡಿದ ಕೋತಿ...ವಿಡಿಯೋ ನೋಡಿ  title=
Monkey Washing Clothes

Monkey Washing Clothes Viral Video - ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಕೋತಿಯ ಒಂದು ವಿಡಿಯೋವನ್ನು ನೋಡಿ ನೀವೂ ಕೂಡ ಆಶ್ಚರ್ಯಪಡುವಿರಿ. ವೀಡಿಯೊದಲ್ಲಿ, ಕೋತಿ ಎಷ್ಟು ಪರಿಪೂರ್ಣ ರೀತಿಯಲ್ಲಿ ಬಟ್ಟೆ ಒಗೆಯುತ್ತಿದೆ ಎಂದರೆ ಅದನ್ನು ಮಾತುಗಳಲ್ಲಿ ಬಣ್ಣಿಸಲು ಅಸಾದ್ಯ. ಬಟ್ಟೆ ವಾಶ್ ಮಾಡುವ ಅದರ ಸ್ಟೈಲ್ ನೋಡಿ ನಿಮಗೂ ನಗು ಬರಲಿದೆ. ವಿಡಿಯೋದಲ್ಲಿ ಕೋತಿ ಆರಾಮವಾಗಿ ಕುಳಿತು ಬಟ್ಟೆ ಒಗೆಯುತ್ತಿದೆ.

ಇದನ್ನೂ ಓದಿ-ಅಮೆರಿಕದ ಈ ನಗರದಲ್ಲಿ ಮೊದಲ ಬಾರಿಗೆ ರಾರಾಜಿಸಿದ ಭಾರತದ ತ್ರಿವರ್ಣ ಧ್ವಜ

ಈ ಮಂಗನ ಮುಂದೆ ಒಂದು ಟಬ್ ನೀರು, ಸೋಪು, ಡಿಟರ್ಜೆಂಟ್ ಮತ್ತು ಬ್ರಷ್ ಇರಿಸಲಾಗಿದೆ. ಕೋತಿ ವೃತ್ತಿಪರರಂತೆ ಬಟ್ಟೆ ಒಗೆಯುತ್ತಿರುವುದನ್ನು ನೀವು ಕಾಣಬಹುದು. ಕೋತಿಯು ಬಟ್ಟೆಯನ್ನು ಬಲಗೈಯಿಂದ ಮೇಲಕ್ಕೆ ಎತ್ತಿ ನೆಲಕ್ಕೆ ಅಪ್ಪಳಿಸುತ್ತಿದೆ ಮತ್ತು ಅದನ್ನು ನೀರಿನ ತೊಟ್ಟಿಗೆ ಹಾಕುತ್ತದೆ ಮತ್ತು ನಂತರ ಬಟ್ಟೆಯನ್ನು ಪುನಃ ಸ್ವಚ್ಛಗೊಳಿಸಲು ಪ್ರಾರಂಭಿಸುತ್ತದೆ. ಯಾವುದಕ್ಕೂ ಒಂದು ಸರಿ ಈ ವಿಡಿಯೋವನ್ನು ಮೊದಲು ನೋಡಿ...

ಇದನ್ನೂ ಓದಿ-Snake Attack: ಕಿರುಕುಳ ನೀಡಿದ ವ್ಯಕ್ತಿಯ ಕೈಗೆ ಪದೇ ಪದೇ ದಾಳಿ ಇಟ್ಟ ಹಾವು... ವಿಡಿಯೋ ನೋಡಿ

ವೈರಲ್ ಆದ ವಿಡಿಯೋವನ್ನು ಫರ್ಹಾದ್ ಹೆಸರಿನ ಟ್ವಿಟರ್ ಬಳಕೆದಾರರು ತನ್ನ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 'ನನ್ನ ಮುದ್ದಿನ ಮಂಗ ಮನುಷ್ಯರಂತೆ ಬಟ್ಟೆ ಒಗೆಯುವಾಗ' ಎಂಬ ಶೀರ್ಷಿಕೆಯ ಅಡಿಯಲ್ಲಿ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮಂಗ ಬಟ್ಟೆ ಒಗೆಯುವ ತಮಾಷೆಯ ವಿಡಿಯೋ ನೋಡಿದ ಬಳಕೆದಾರರಿಗೆ ನಗು ತಡೆಯಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಓರ್ವ ಟ್ವಿಟ್ಟರ್ ಬಳಕೆದಾರ, ವಾಶಿಂಗ್ ಮಶೀನ್ ಅಗತ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ. ಮತ್ತೋರ್ವ ಬಳಕೆದಾರರು ಬರೆದಿದ್ದಾರೆ, ಇದು ಯಾವುದೇ ವೃತ್ತಿಪರ ಅಗಸರಿಗಿಂತ ಮಂಗ ಜೋರಾಗಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News