Mohammed Shami ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ! ಕಾರಣ ಗೊತ್ತಾಗಬೇಕೆ? Viral Video ನೋಡಿ!

Viral Video: ಮೊಹಮ್ಮದ್ ಶಮಿಯ ಈ ತದ್ರೂಪಿಯನ್ನು ನೋಡಿದ ನಂತರ ಅಭಿಮಾನಿಗಳು ಸಾಕಷ್ಟು ಗೊಂದಲಕ್ಕೆ ಒಳಗಾಗಿದ್ದಾರೆ. ಅಸಲಿ ಮತ್ತು ನಕಲಿ ಶಮಿ ನಡುವಿನ ವ್ಯತ್ಯಾಸ ಕಂಡು ಹಿಡಿಯಲು ಸಾಕಷ್ಟು ಕಷ್ಟವಾಗುತ್ತಿದೆ ಎನ್ನುತ್ತಿದ್ದಾರೆ. (Viral News In Kannada)  

Written by - Nitin Tabib | Last Updated : Jan 12, 2024, 06:42 PM IST
  • ವಿಡಿಯೋ ನೋಡಿದ ಬಳಕೆದಾರರು ಹಲವು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಓರ್ವ ಬಳಕೆದಾರ,
  • ಅವರ ಸಹೋದರ ಈಗಾಗಲೇ ಅವರಂತೆಯೇ ಕಾಣುತ್ತಾನೆ ಎಂದು ಭಾವಿಸಿದ್ದೆವು, ಆದರೆ ಇಲ್ಲಿ ಇನ್ನೊಬ್ಬರು ಇದ್ದಾರೆ ಎಂದಿದ್ದಾರೆ.
  • ಎರಡನೇ ಬಳಕೆದಾರ 'ವಿಚ್ಛೇದನದ ಪ್ರಕರಣ ಇವರ ಮೇಲೆ ವರ್ಗಾಯಿಸಿ' ಎಂದಿದ್ದಾನೆ,
  • ಮೂರನೇ ಬಳಕೆದಾರರು 'ಅವರಿಂದ ಬೌಲಿಂಗ್ ಮಾಡಿಸಿ ಆಗ ಒಪ್ಪಿಕೊಳ್ಳುವೆವು' ಎಂದಿದ್ದಾರೆ.
Mohammed Shami ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ! ಕಾರಣ ಗೊತ್ತಾಗಬೇಕೆ? Viral Video ನೋಡಿ! title=

ಬೆಂಗಳೂರು: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಮೊಹಮ್ಮದ್ ಶಮಿ ಒಂದಲ್ಲ ಒಂದು ಕಾರಣಕ್ಕೆ ಹೆಡ್‌ಲೈನ್ಸ್‌ನಲ್ಲಿ ಇರುತ್ತಾರೆ, ಆದರೆ ಇತ್ತೀಚೆಗೆ ಅವರು ಬೇರೆ ಯಾವುದೋ ಕಾರಣಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿದ್ದಾರೆ. ಇದರ ಹಿಂದಿನ ಕಾರಣವೇನೆಂದರೆ, ಅವರ ತದ್ರೂಪಿ, ಅವರ ಈ ತದ್ರೂಪಿಯನ್ನು ನೋಡಿ ಮೊಹಮ್ಮದ್ ಶಮಿ ಅವರ ಅಭಿಮಾನಿಗಳು ಕೂಡ ಸಾಕಷ್ಟು ಗೊಂದಲಕ್ಕೊಳಗಾಗಿದ್ದಾರೆ. ಮೊಹಮ್ಮದ್ ಶಮಿಯ ಈ ತದ್ರೂಪಿಯಾ ವೀಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ನೋಡಿ ನಿಮಗೂ ಕೂಡ ಅಚ್ಚರಿಯಾಗಬಹುದು. (Viral News In Kannada)

ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ  @RVCJ_FB ಹೆಸರಿನ ಖಾತೆಯೊಂದಿಗೆ ಹಂಚಿಕೊಳ್ಳಲಾಗಿದೆ, ಇದನ್ನು ಜನರು ನೋಡಿ ಆಶ್ಚರ್ಯಚಕಿತರಾಗಿದ್ದಾರೆ. ಕೇವಲ 14 ಸೆಕೆಂಡುಗಳ ಈ ವೀಡಿಯೊದಲ್ಲಿ, ಮೊಹಮ್ಮದ್ ಶಮಿಯ ತದ್ರೂಪಿ ವ್ಯಕ್ತಿ ಬೂದು ಬಣ್ಣದ ಜಾಕೆಟ್ ಮತ್ತು ಟೋಪಿಯನ್ನು ಧರಿಸಿದ್ದಾರೆ. ಈ ವಿಡಿಯೋ ನಾಗ್ಪುರದ್ದು ಎಂದು ಹೇಳಲಾಗುತ್ತಿದೆ. ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ಸ್ವತಃ ಮೊಹಮ್ಮದ್ ಶಮಿಯ ಅಭಿಮಾನಿ. ವೀಡಿಯೊ ಮಾಡುವ ವ್ಯಕ್ತಿಯು ಮೊಹಮ್ಮದ್ ಶಮಿಯ ಬೌಲಿಂಗ್ ಆಕ್ಷನ್ ಅನ್ನು ಒಮ್ಮೆ ತೋರಿಸಲು ಮೊಹಮ್ಮದ್ ಶಮಿಯ ತದ್ರೂಪಿ ವ್ಯಕ್ತಿಗೆ ವಿನಂತಿಸುತ್ತಾನೆ, ನಂತರ ಶಮಿಯ ಲುಕ್‌ಲೈಕ್ ವ್ಯಕ್ತಿ ಆತನ ವಿನಂತಿಗೆ ಮನ್ನಣೆ ಸೂಚಿಸುವ ರೂಪದಲ್ಲಿ ಬೌಲಿಂಗ್ ಆಕ್ಷನ್ ಮಾಡುತ್ತಾರೆ. ಈ ವೀಡಿಯೋವನ್ನು ಸಾಕಷ್ಟು ಮಂದಿ ವೀಕ್ಷಿಸುತ್ತಿದ್ದಾರೆ ಮತ್ತು ಇಷ್ಟಪಟ್ಟಿದ್ದಾರೆ.

ಜನರ ಪ್ರತಿಕ್ರಿಯೆ ಹೇಗಿದೆ?
ವಿಡಿಯೋ ನೋಡಿದ ಬಳಕೆದಾರರು ಹಲವು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಓರ್ವ ಬಳಕೆದಾರ, ಅವರ ಸಹೋದರ ಈಗಾಗಲೇ ಅವರಂತೆಯೇ ಕಾಣುತ್ತಾನೆ ಎಂದು ಭಾವಿಸಿದ್ದೆವು, ಆದರೆ ಇಲ್ಲಿ ಇನ್ನೊಬ್ಬರು ಇದ್ದಾರೆ ಎಂದಿದ್ದಾರೆ. ಎರಡನೇ ಬಳಕೆದಾರ 'ವಿಚ್ಛೇದನದ ಪ್ರಕರಣ ಇವರ ಮೇಲೆ ವರ್ಗಾಯಿಸಿ' ಎಂದಿದ್ದಾನೆ, ಮೂರನೇ ಬಳಕೆದಾರರು 'ಅವರಿಂದ ಬೌಲಿಂಗ್ ಮಾಡಿಸಿ ಆಗ ಒಪ್ಪಿಕೊಳ್ಳುವೆವು' ಎಂದಿದ್ದಾರೆ. ಇತ್ತೀಚೆಗಷ್ಟೇ ಮೊಹಮ್ಮದ್ ಶಮಿ ಅವರಿಗೆ ರಾಷ್ಟ್ರಪತಿಗಳಿಂದ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿರುವುದು ನಮ್ಮೆಲ್ಲರಿಗೂ ಗೊತ್ತೇ ಇದೆ. ಇದಲ್ಲದೆ ಶಮಿ, ಮರುದಿನವೇ ತಮ್ಮ ತಾಯಿಗಾಗಿ ಬರೆದ ಭಾವನಾತ್ಮಕ ಪೋಸ್ಟ್‌ನಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದರು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News