Viral Video: ಸಾಮಾನ್ಯವಾಗಿ ನಗರ ಪ್ರದೇಶವಾಗಲಿ, ಗ್ರಾಮೀಣ ಪ್ರದೇಶವಾಗಲಿ ಜನರು ತಡರಾತ್ರಿಯಲ್ಲಿ ಔಟಿಂಗ್ (Late Night Outing) ಮಾಡಲು ಹೋಗಲು ಮತ್ತು ಸ್ನೇಹಿತರ ಜೊತೆಗೆ ಸುತ್ತಾಡಲು ಇಷ್ಟಪಡುತ್ತಾರೆ. ಆದರೆ ಕೆಲವೊಮ್ಮೆ ಇದು ಕೆಲವರ ಪಾಲಿಗೆ ಅಪಾಯಕಾರಿ ಸಾಬೀತಾಗಬಹುದು. ಕೆಲವೊಮ್ಮೆ ಬಹಿರ್ದೆಸೆಗೆ ಹೋಗುವಾಗ ಕಾಡು ಪ್ರಾಣಿಗಳು ಬಂದು ಹೋಗುತ್ತಲೇ ಇರುವ ಅಂತಹ ರಸ್ತೆಗಳು ಇರುತ್ತವೆ. ಆದರೆ ಔಟಿಂಗ್ ಗೆ ಹೋದಾಗ ಇದ್ದಕ್ಕಿದ್ದಂತೆ ನರಭಕ್ಷಕ ಸಿಂಹ ನಿಮ್ಮ ಮುಂದೆ ಬಂದರೆ ಏನಾಗುತ್ತದೆ? ಹೌದು, ಅಂತಹದ್ದೊಂದು ವಿಡಿಯೋ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ರಾತ್ರಿ ವೇಳೆ ಔಟಿಂಗ್ ಗೆ ಹೋದ ಕೆಲ ಗೆಳೆಯರು ಉಗ್ರ ಸಿಂಹಕ್ಕೆ ಮುಖಾಮುಖಿಯಾಗಿರುವುದು ನೀವು ನೋಡಬಹುದು. ವೀಡಿಯೊದಲ್ಲಿ ಬನ್ನಿ ತಿಳಿದುಕೊಳ್ಳೋಣ(Viral News In Kannada)
ಇದನ್ನೂ ನೋಡಿ-Viral Video: ನೀವೂ ಮನೆಯಲ್ಲಿಯೇ ಎಲೆಕ್ಟ್ರಿಕ್ ಬೈಕ್ ಚಾರ್ಜ್ ಮಾಡುತ್ತೀರಾ? ಹಾಗಾದ್ರೆ ಮೊದಲು ಈ ವಿಡಿಯೋ ನೋಡಿ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಕೆಲವರು ಬೈಕ್ನಲ್ಲಿ ಕಾಡಿನ ಮೂಲಕ ಹಾದು ಹೋಗುತ್ತಿರುವುದನ್ನು ನೀವು ನೋಡಬಹುದು, ಆದರೆ ಇದ್ದಕ್ಕಿದ್ದಂತೆ ಸಿಂಹವೊಂದು ಅವರ ಮುಂದೆ ಪ್ರತ್ಯಕ್ಷವಾಗುತ್ತದೆ. ಇದನ್ನು ಕಂಡು ಬೈಕ್ ಸವಾರರು ತೀವ್ರ ಭಯಗೊಂಡಿದ್ದು, ಉಸಿರು ಬಿಗಿಹಿಡಿದು ಅವರು ನಿಂತಿದ್ದಾರೆ. ಬೈಕ್ ಸವಾರನತ್ತ ಸಿಂಹ ಹೇಗೆ ಸಾಗುತ್ತಿದೆ ಎಂಬುದನ್ನು ನೀವು ವಿಡಿಯೋದಲ್ಲಿ ನೋಡಬಹುದು.ಆದರೆ ಬೈಕ್ ನ ಬೆಳಕು ಸಿಂಹದ ಮೇಲೆ ಬಿದ್ದ ತಕ್ಷಣ ಸಿಂಹ ಗಾಬರಿಗೊಂಡು ಪಕ್ಕದಲ್ಲಿರುವ ಗೋಡೆ ಧುಮುಕಿ ಕಾಡಿಗೆ ಸೇರಿಕೊಳ್ಳುತ್ತದೆ.
ಇದನ್ನೂ ನೋಡಿ-Viral News: ಶೀಘ್ರದಲ್ಲೇ ವಿಶೇಷ ಉದ್ದೇಶಕ್ಕಾಗಿ ಮುಖಕ್ಕೆ ಅಂಡರ್ವೆಯರ್ ಹಾಕಿಕೊಳ್ಳಲಿದ್ದಾರೆ ನೂರಾರು ಜನ, ಕಾರಣ ಇಲ್ಲಿದೆ
@AMAZlNGNATURE ಹೆಸರಿನ X ಖಾತೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಇದುವರೆಗೆ 4.4 ಮಿಲಿಯನ್ಗಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಸುಮಾರು 7 ಸಾವಿರ ಜನರು ವೀಡಿಯೊವನ್ನು ಇಷ್ಟಪಟ್ಟಿದ್ದಾರೆ. ಜನರು ಅದರ ಬಗ್ಗೆ ತಮ್ಮ ತರಹೇವಾರಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಈ ಕುರಿತು ಬರೆದುಕೊಂಡ ಓರ್ವ ಬಳಕೆದಾರ, ಕಾಡಿನ ಮಧ್ಯೆ ಇಂತಹ ರಸ್ತೆ ಮಾರ್ಗ ಏಕೀದೆ? ಎಂದು ಪ್ರಶ್ನಿಸಿದರೆ, ಮತ್ತೊರ್ವ ಬಳಕೆದಾರ, ಭಾರತದಲ್ಲಿ, ಸಿಂಹಗಳಿಗೆ ವಾಸಿಸಲು ಬಹಳ ಕಡಿಮೆ ಜಾಗವನ್ನು ನೀಡಲಾಗಿದೆ ಎಂದಿದ್ದಾರೆ. ಹೀಗೆ ಮೂರನೇ ಬಳಕೆದಾರರು ವಿಡಿಯೋ ನೋಡಿಯೇ ನನಗೆ ಹೆದರಿಕೆಯಾಗುತ್ತಿದೆ, ಬೈಕ್ ಸವಾರನ ಗತಿ ಎನಾಗಿರಬೇಕು? ಎಂದಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ
Meanwhile in Gujarat, India 🇮🇳 pic.twitter.com/BxvL192M5I
— Nature is Amazing ☘️ (@AMAZlNGNATURE) March 15, 2024
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI