'1.50 ಲಕ್ಷ ರೂ. ಸಿಗದೇ ಹೋದ್ರೆ ಮದುವೆಯಾಗುವುದಿಲ್ಲ, ಮದುವೆ ಮಂಟಪದಲ್ಲಿ ಸರ್ಕಾರಿ ಶಿಕ್ಷಕನ ಡಿಮ್ಯಾಂಡ್!

Viral Video: ಮದುವೆ ಮಂಟಪದಲ್ಲಿ ವರನೊಬ್ಬ ವಧುವಿನ ಮನೆಯವರ ಜೊತೆಗೆ ವರದಕ್ಷಿಣೆ ಕುರಿತು ಮಾತನಾಡುತ್ತಿದ್ದಾನೆ. 2 ಲಕ್ಷ ರೂ.ಗಳ ಬಗ್ಗೆ ಮಾತುಕತೆಯಾಗಿದ್ದು, ಅದರಲ್ಲಿ ತನಗೆ ಕೇವಲ 50 ಸಾವಿರ ಮಾತ್ರ ದೊರೆತಿವೆ ಎಂದು ವರ ಹೇಳುತ್ತಿರುವುದನ್ನು ನೀವು ನೋಡಬಹುದು. (Viral News In Kanana)

Written by - Nitin Tabib | Last Updated : Dec 12, 2023, 04:29 PM IST
  • ವೈರಲ್ ಆಗುತ್ತಿರುವ ಈ ವಿಡಿಯೋಗೆ ಜನರು ತಮ್ಮ ತೀವ್ರ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
  • ಈ ಕುರಿತು ಬರೆದುಕೊಂಡ ಒಬ್ಬ ಬಳಕೆದಾರ, 'ನಿನಗೆ ಯಾರೂ 150 ರೂ. ಕೂಡ ಕೊಡುವುದಿಲ್ಲ' ಎಂದು ಬರೆದಿದ್ದಾರೆ.
  • ಮತ್ತೊಬ್ಬ ಬಳಕೆದಾರ, 'ನಿನಗೆ ಹುಡುಗಿ ಕೊಟ್ಟಿದ್ದಾರೆ ಅದೇ ದೊಡ್ಡ ವಿಷಯ' ಎಂದು ಬರೆದಿದ್ದಾರೆ.
'1.50 ಲಕ್ಷ ರೂ. ಸಿಗದೇ ಹೋದ್ರೆ ಮದುವೆಯಾಗುವುದಿಲ್ಲ, ಮದುವೆ ಮಂಟಪದಲ್ಲಿ ಸರ್ಕಾರಿ ಶಿಕ್ಷಕನ ಡಿಮ್ಯಾಂಡ್! title=

ನವದೆಹಲಿ: ಸದ್ಯ ಮದುವೆ ಸೀಸನ್ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮದುವೆಯ ವಿಡಿಯೋಗಳು ಮತ್ತು ಫೋಟೋಗಳು ಭಾರಿ ವೈರಲ್ ಆಗುತ್ತಿವೆ. ಮದುವೆಯ ಸಂದರ್ಭದಲ್ಲಿ ವರನ ಬೇಡಿಕೆಯೂ ತುಂಬಾ ಹೆಚ್ಚಾಗಿದೆ. ಅಂತಹುದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವರನೊಬ್ಬ ವಧುವಿನ ಮನೆಯವರ ಮುಂದೆ ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದು, ಅದನ್ನು ಕೇಳಿ ಜನರು ಅಚ್ಚರಿಗೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದೆ. ಇದೆ ವೇಳೆ, ಜನರು ವಿಡಿಯೋ ಕುರಿತು ತಮ್ಮ ಪ್ರತಿಕ್ರಿಯೆಯನ್ನು ಕೂಡ ನೀಡುತ್ತಿದ್ದಾರೆ.(Viral News In Kannada)

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮದುವೆ ಮಂಟಪದಲ್ಲಿ ವರನೊಬ್ಬ ವಧುವಿನ ಮನೆಯವರ  ಮುಂದೆ  ವರದಕ್ಷಿಣೆ ವಿಚಾರವಾಗಿ ಮಾತನಾಡುತ್ತಿರುವುದು ಕಂಡು ಬರುತ್ತಿದೆ. 2 ಲಕ್ಷ ರೂ.ಗಳ ಬಗ್ಗೆ ಮಾತುಕತೆಯಾಗಿದ್ದು, ಅದರಲ್ಲಿ ತನಗೆ ಕೇವಲ 50 ಸಾವಿರ ಮಾತ್ರ ದೊರೆತಿವೆ ಎಂದು ವರ ಹೇಳುತ್ತಿದ್ದಾನೆ ಮತ್ತು ಉಳಿದ 1.50 ಲಕ್ಷ ಸಿಗದ ಹೊರತು ಮದುವೆಯಾಗುವುದಿಲ್ಲ ಎನ್ನುತ್ತಿದ್ದಾನೆ. ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ವೇದಿಕೆ ಇನ್ಸ್ಟಾಗ್ರಾಮನಲ್ಲಿ @apan_mithilanchal ಎಂಬ ಬಳಕೆದಾರರಿಂದ ಹಂಚಿಕೊಳ್ಳಲಾಗಿದೆ, ಇದುವರೆಗೆ 3 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಇನ್ನೊಂದೆಡೆ, ಅನೇಕ ಜನರು ಈ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ಸಹ ನೀಡುತ್ತಿದ್ದಾರೆ. ವಿಡಿಯೋ ನೋಡಿದ ಜನರು ವರನ ಬೇಡಿಕೆ ಕಂಡು ಅಚ್ಚರಿಗೊಂಡಿದ್ದಾರೆ. (Viral News In Kannada)

ಇದನ್ನೂ ಓದಿ-ಡೋಲು ಏರಿ ಕುಳಿತು ಡಾನ್ಸ್ ಮಾಡಿದ ವಧು, 'ನಾಳೆಯಿಂದ ನಾನು ಡೋಲು ಬಾರಿಸುವನಾಗುತ್ತೇನೆ' ಎಂದ ನೆಟ್ಟಿಗರು... ವಿಡಿಯೋ ಇಲ್ಲಿದೆ

ವೈರಲ್ ವಿಡಿಯೋಗೆ ಜನರ ಪ್ರತಿಕ್ರಿಯೆ ಹೀಗಿದೆ
ವೈರಲ್ ಆಗುತ್ತಿರುವ ಈ ವಿಡಿಯೋಗೆ ಜನರು ತಮ್ಮ ತೀವ್ರ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಈ ಕುರಿತು ಬರೆದುಕೊಂಡ ಒಬ್ಬ ಬಳಕೆದಾರ, 'ನಿನಗೆ ಯಾರೂ 150 ರೂ. ಕೂಡ ಕೊಡುವುದಿಲ್ಲ' ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರ, 'ನಿನಗೆ ಹುಡುಗಿ ಕೊಟ್ಟಿದ್ದಾರೆ ಅದೇ ದೊಡ್ಡ ವಿಷಯ' ಎಂದು ಬರೆದಿದ್ದಾರೆ. ‘ಇದನ್ನೆಲ್ಲ ನೋಡಿದರೆ, ಬ್ರಿಟಿಷರು ನಮ್ಮಿಂದ ಸ್ವಾತಂತ್ರ್ಯ ಪಡೆದಂತಿದೆಯೇ ಹೊರತು ನಾವು ಬ್ರಿಟಿಷರಿಂದ ಅಲ್ಲ ಎನ್ನುವಂತಿದೆ’ ಎಂದು ಮೂರನೇ ಬಳಕೆದಾರರು ತಮಾಷೆಯಾಗಿ ಬರೆದಿದ್ದಾರೆ.

ಇದನ್ನೂ ಓದಿ-ಮೂರು ಸಾವಿರ ವರ್ಷಗಳ ಹಿಂದೆಯೂ QR Code ಬಳಕೆಯಲ್ಲಿತ್ತು ಎಂದರೆ ನಂಬ್ತೀರಾ? ವೈರಲ್ ಆಗುತ್ತಿರುವ ಈ ವಿಗ್ರಹ ಹೌದು ಎನ್ನುತ್ತೆ!

ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ...

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News