Viral Video: ಶಾಲಾ ಸಮಾರಂಭದಲ್ಲಿ ಡಾನ್ಸ್ ಮಾಡುತ್ತ ಪರಸ್ಪರ ಜಗಳ ಆರಂಭಿಸಿದ ಎರಡು ಕ್ಯೂಟ್ ಪುಟಾಣಿಗಳ ವಿಡಿಯೋ ವೈರಲ್!

Viral Video: ಒಂದೆಡೆ ಇತರ ಮಕ್ಕಳು ತಮ್ಮ ಡ್ಯಾನ್ಸ್ ಸ್ಟೆಪ್ಸ್ ಅನ್ನು ಚೆನ್ನಾಗಿ ಫಾಲೋ ಮಾಡುತ್ತಿದ್ದರೆ, ಮತ್ತೊಂದೆಡೆ ಈ ಇಬ್ಬರು ಮಕ್ಕಳು ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದು  ಈ ವೈರಲ್ ವಿಡಿಯೋದಲ್ಲಿ ಕಂಡು ಬರುತ್ತಿದೆ. (Viral News In Kannada)  

Written by - Nitin Tabib | Last Updated : Jan 21, 2024, 09:43 PM IST
  • ಇದುವರೆಗೆ ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ 1.40 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ.
  • ವೀಕ್ಷಣೆಗಳ ಕುರಿತು ಹೇಳುವುದಾದರೆ, ಈ ವೀಡಿಯೊವನ್ನು ಇನ್‌ಸ್ಟಾದಲ್ಲಿ 40 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ,
  • ಆದರೆ ಈ ಮುದ್ದಾದ ವೀಡಿಯೊ ಇದುವರೆಗೆ 2500 ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಗಳಿಸಿದೆ.
Viral Video: ಶಾಲಾ ಸಮಾರಂಭದಲ್ಲಿ ಡಾನ್ಸ್ ಮಾಡುತ್ತ ಪರಸ್ಪರ ಜಗಳ ಆರಂಭಿಸಿದ ಎರಡು ಕ್ಯೂಟ್ ಪುಟಾಣಿಗಳ ವಿಡಿಯೋ ವೈರಲ್! title=

ನವದೆಹಲಿ: ಸಾಮಾಜಿಕ ಮಾಧ್ಯಮದಲ್ಲಿ ಪ್ರತಿದಿನ ಎಷ್ಟು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಮಕ್ಕಳ ಮುದ್ದಾದ ವೀಡಿಯೊಗಳನ್ನು ಹಂಚಿಕೊಳ್ಳುವ ವಿವಿಧ ಸಾಮಾಜಿಕ ವೇದಿಕೆಗಳಲ್ಲಿ ಹಲವು ಪುಟಗಳಿವೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ಇದೇ ರೀತಿಯ ವೀಡಿಯೊವೊಂದನ್ನು ಹಂಚಿಕೊಳ್ಳಲಾಗಿದೆ, ಇದರಲ್ಲಿ ಇಬ್ಬರು ಮಕ್ಕಳು ತಮ್ಮ ಶಾಲೆಯ ಸಮಾರಂಭದಲ್ಲಿ ಡಾನ್ಸ್ ಪ್ರದರ್ಶನ ನೀಡುತ್ತಿದ್ದಾರೆ. ಈ ವೀಡಿಯೋ ವೈರಲ್ ಆಗುತ್ತಿರುವುದು ಅವರ ಡಾನ್ಸ್ ನಿಂದ ಅಲ್ಲ ಎಂಬುದು ಇಲ್ಲಿ ಗಮನಾರ್ಹ.  ಬದಲಾಗಿ ವೇದಿಕೆಯಲ್ಲಿ ಪರಸ್ಪರ ಕ್ಯೂಟ್ ಜಗಳವಾಡುತ್ತಾ ಅವರು ಡಾನ್ಸ್ ಕೂಡ ಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ವಿಡಿಯೋದಲ್ಲಿ ಶಾಲೆಯ ಕಾರ್ಯಕ್ರಮವೊಂದರಲ್ಲಿ ಇಬ್ಬರು ಮಕ್ಕಳು ಇತರ ಮಕ್ಕಳೊಂದಿಗೆ ಡಾನ್ಸ್ ಮಾಡುತ್ತಿರುವುದು ಕಂಡು ಬಂದಿದೆ. ಈ ವಿಡಿಯೋದಲ್ಲಿ ಹಾಡಿನ ಸ್ಟೆಪ್ಸ್ ಫಾಲೋ ಮಾಡುವ ಬದಲು ಮಕ್ಕಳು ಪರಸ್ಪರ ಜಗಳ ಆರಂಭಿಸಿರುವುದು ಕಂಡು ಬಂದಿದೆ. ಒಂದೆಡೆ ಇತರ ಮಕ್ಕಳು ತಮ್ಮ ಡ್ಯಾನ್ಸ್ ಸ್ಟೆಪ್ಸ್ ಅನ್ನು ಚೆನ್ನಾಗಿ ಫಾಲೋ ಮಾಡುತ್ತಿದ್ದರೆ, ಮತ್ತೊಂದೆಡೆ ಈ ಇಬ್ಬರು ಕ್ಯೂಟ್ ಪುಟಾಣಿಗಳ ಕ್ಯೂಟ್ ಜಗಳ ಕಂಡು ಬರುತ್ತಿದೆ. ವೀಡಿಯೊದಲ್ಲಿ ಕಂಡುಬರುವ ಭಾಷೆಯ ಆಧಾರದ ಮೇಲೆ, ಈ ವೀಡಿಯೊ ಕಝಾಕಿಸ್ತಾನ್‌ನದು ಎಂಬಂತೆ ತೋರುತ್ತಿದೆ. ಕಝಕ್ ಭಾಷೆಯ ಕೆಲವು ಪದಗಳು ವೀಡಿಯೊದಲ್ಲಿ ನೀವು ಕೇಳಬಹುದು. (Viral News In Kannada)

ಡಾನ್ಸ್ ಪ್ರದರ್ಶನದ ಸಮಯದಲ್ಲಿ, ವೀಡಿಯೊದಲ್ಲಿ ಇಬ್ಬರೂ ಮಕ್ಕಳು ಪರಸ್ಪರ ಹೊಡೆಯುತ್ತಿದ್ದಾರೆ. ಒಮ್ಮೆ ಪುಟಾಣಿ ಹುಡುಗಿ ತನ್ನ ಸಂಗಾತಿಗೆ ಕಪಾಳಮೋಕ್ಷ ಮಾಡುತ್ತಾಳೆ, ಮತ್ತು ಕೆಲವೊಮ್ಮೆ ಪುಟಾಣಿ ಹುಡುಗ ಕೂಡ ಆಕೆಯನ್ನು  ತಳ್ಳುವುದು ಕಂಡುಬರುತ್ತದೆ. ಮಧ್ಯ ಮಧ್ಯದಲ್ಲಿ ಇಬ್ಬರೂ ನೃತ್ಯದ ಹೆಜ್ಜೆಗಳನ್ನು ಕೂಡ ಅನುಸರಿಸುತ್ತಾರೆ ಮತ್ತು ಕೆಲವೊಮ್ಮೆ ಪರಸ್ಪರ ಹೊಡೆಯುತ್ತಾರೆ. ಈ ವೀಡಿಯೋ ತುಂಬಾ ತಮಾಷೆಯಿಂದ ಕೂಡಿದೆ. ಇದನ್ನು ನೋಡಿ ನೀವೂ ಕೂಡ ಹೊಟ್ಟೆ ಹಿಡಿದುಕೊಂಡು ನಗುವುದು ಮಾತ್ರ ಗ್ಯಾರಂಟಿ. 

ಇದನ್ನೂ ಓದಿ-Viral Video: ಮಗುವನ್ನು ಹೆಗಲ ಮೇಲೆ ಕೂರಿಸಿ, ಪತಿಯ ಹೊಟ್ಟೆಯ ಮೇಲೆ ನಿಂತು ಪತಿ-ಪತ್ನಿಯ ಸ್ಕಿಪ್ಪಿಂಗ್!

ತಮಾಷೆಯ ಕಾಮೆಂಟ್‌ಗಳ ಸುರಿಮಳೆ
ಈ ಮುದ್ದಾದ ಮತ್ತು ತಮಾಷೆಯ ವೀಡಿಯೊವನ್ನು ನೋಡಿದ ನಂತರ ಜನರು ಸಹ ಅದ್ಭುತ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ಈ ವೀಡಿಯೊವನ್ನು ನೋಡಿದ ಬಳಕೆದಾರರು ಇದು ರೊಮ್ಯಾಂಟಿಕ್ ವೈಲನ್ಸ್ ವಿಡಿಯೋ ಇದಾಗಿದೆ ಎಂದು ಬರೆದುಕೊಂಡರೆ, ಮತ್ತೊಬ್ಬ ಬಳಕೆದಾರ ಇದು ಡೋಮೆಸ್ಟಿಕ್ ವೈಲನ್ಸ್  ವ್ಯಾಖ್ಯಾನವಾಗಿದೆ ಎಂದಿದ್ದಾರೆ. ಇದರ ಹೊರತಾಗಿ, ಮೂರನೇ ಬಳಕೆದಾರರು ಅವರು ಏನು ಬೇಕಾದರೂ ಮಾಡಲಿ ನೃತ್ಯ ಮಾತ್ರ ನಿಲ್ಲಿಸಬಾರದು ಎಂದು ಬರೆದಿದ್ದಾರೆ.

ಇದನ್ನೂ ಓದಿ-Viral Video: ಕಿಟಕಿಯ ಮೂಲಕ ಪ್ರಯಾಣಿಕನ ಫೋನ್ ಕಳ್ಳತನ ಮಾಡಲು ಹೋದ ಕಳ್ಳ, ಮುಂದೇನಾಯ್ತು ನೀವೇ ನೋಡಿ!

ವಿಡಿಯೋಗೆ ಅದ್ಭುತ ಪ್ರತಿಕ್ರಿಯೆ
ಇದುವರೆಗೆ ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ 1.40 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ. ವೀಕ್ಷಣೆಗಳ ಕುರಿತು ಹೇಳುವುದಾದರೆ, ಈ ವೀಡಿಯೊವನ್ನು ಇನ್‌ಸ್ಟಾದಲ್ಲಿ 40 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ, ಆದರೆ ಈ ಮುದ್ದಾದ ವೀಡಿಯೊ ಇದುವರೆಗೆ 2500 ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಗಳಿಸಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

 
 
 
 

 
 
 
 
 
 
 
 
 
 
 

A post shared by JANA QOGAM (@jana_qogam)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News