ಡೋಲು ಏರಿ ಕುಳಿತು ಡಾನ್ಸ್ ಮಾಡಿದ ವಧು, 'ನಾಳೆಯಿಂದ ನಾನು ಡೋಲು ಬಾರಿಸುವನಾಗುತ್ತೇನೆ' ಎಂದ ನೆಟ್ಟಿಗರು... ವಿಡಿಯೋ ಇಲ್ಲಿದೆ

Viral Video: ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ವಧು ಡ್ರಮ್ ಮೇಲೆ ಕುಳಿತು ಅರಿಶಿನ ಹಚ್ಚುವ ಕಾರ್ಯಕ್ರಮದಲ್ಲಿಯೇ ನೃತ್ಯ ಮಾಡುವುದನ್ನು ನೀವು ನೋಡಬಹುದು. ಈ ವಿಡಿಯೋದಲ್ಲಿ ಡ್ರಮ್ಮರ್ ಕೂಡ ಪೂರ್ಣ ಉತ್ಸಾಹದಿಂದ ಡ್ರಮ್ ಬಾರಿಸುವುದನ್ನು ಕಾಣಬಹುದು. (Viral News In Kannada)

Written by - Nitin Tabib | Last Updated : Dec 12, 2023, 03:57 PM IST
  • ವೈರಲ್ ಆಗುತ್ತಿರುವ ಈ ವೀಡಿಯೋ ನೋಡಿ ಜನರು ಅಚ್ಚರಿಗೊಂಡಿದ್ದಾರೆ.
  • ಈ ವಿಡಿಯೋಗೇ ಕಾಮೆಂಟ್ ಮಾಡಿದ ಓರ್ವ ಬಳಕೆದಾರ , 'ಡ್ರಮ್ಮರ್‌ನ ಅದೃಷ್ಟ ಖುಲಾಯಿಸಿದೆ' ಎಂದರೆ,
  • ಮತ್ತೊಬ್ಬ ಬಳಕೆದಾರ 'ಡ್ರಮ್ಮರ್‌ನ ಉತ್ಸಾಹ ನೋಡುವಂತಿದೆ' ಎಂದು ಬರೆದಿದ್ದಾರೆ.
ಡೋಲು ಏರಿ ಕುಳಿತು ಡಾನ್ಸ್ ಮಾಡಿದ ವಧು, 'ನಾಳೆಯಿಂದ ನಾನು ಡೋಲು ಬಾರಿಸುವನಾಗುತ್ತೇನೆ' ಎಂದ ನೆಟ್ಟಿಗರು... ವಿಡಿಯೋ ಇಲ್ಲಿದೆ title=

ನವದೆಹಲಿ: ಸದ್ಯ ದೇಶಾದ್ಯಂತ ಮದುವೆ ಸೀಸನ್ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ವಧು-ವರರ ವಿಡಿಯೋ ವೈರಲ್ ಭಾರಿ ಆಗುತ್ತಿವೆ. ಏತನ್ಮಧ್ಯೆ ಮದುವೆ ಸಮಾರಂಭದ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ವಧು ಡ್ರಮ್ ಮೇಲೆ ಕುಣಿಯುತ್ತಿರುವುದನ್ನು ನೀವು ಕಾಣಬಹುದು. ಈ ಸಂದರ್ಭದಲ್ಲಿ, ಡ್ರಮ್ಮರ್ ಮಾಡುವ ಒಂದು ಕೆಲಸ ಆಕೆಗೆ ಊಹಿಸಲು ಸಾಧ್ಯವಾಗಿಲ್ಲ. ಇದಾದ ಬಳಿಕ ವಧುವಿನ ಅಭಿವ್ಯಕ್ತಿ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ. ಜನರು ಈ ವಿಡಿಯೋವನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಇದೆ ವೇಳೆ ತಮಾಷೆಯಿಂದ ಕೂಡಿದ ತರಹೇವಾರಿ ಕಾಮೆಂಟ್ ಗಳನ್ನು ಕೂಡ ಮಾಡುತ್ತಿದ್ದಾರೆ. (Viral News In Kannada)

ವೈರಲ್ ವಿಡಿಯೋದಲ್ಲಿ, ವಧು ಡ್ರಮ್ ಮೇಲೆ ಕುಳಿತು ಅರಿಶಿನ ಹಚ್ಚುವ ಕಾರ್ಯಕ್ರಮದಲ್ಲಿ ನೃತ್ಯ ಮಾಡುವುದನ್ನು ನೀವು ನೋಡಬಹುದು. ಇನ್ನೊಂದೆಡೆ  ಡ್ರಮ್ಮರ್ ಕೂಡ ಪೂರ್ಣ ಉತ್ಸಾಹದಿಂದ ಡ್ರಮ್ ಬಾರಿಸುವುದನ್ನು ಕಾಣಬಹುದು. ಇದರ ನಂತರ, ಡ್ರಮ್ಮರ್ ವಧುವನ್ನು ಡ್ರಮ್ ಮೇಲೆ ಸರಿಯಾಗಿ ಕುಳಿತುಕೊಳ್ಳುವಂತೆ ಹೇಳಲು ಆಕೆಯನ್ನು ಹಿಂದಕ್ಕೆ ಎಳೆಯುತ್ತಾನೆ. ಇದನ್ನು ಕಂಡು ವಧು ಆಶ್ಚ್ಯರ್ಯಚಕಿತಳಾಗುತ್ತಾಳೆ. ಆಕೆಯ ರಿಯಾಕ್ಷನ್ ಇದೀಗ ಭಾರಿ ವೈರಲ್ ಆಗಿದೆ. ಈ ವೀಡಿಯೊವನ್ನು ಇನ್ಸ್ಟಾಗ್ರಾಮ್ @_gyanibaba__1 ಹ್ಯಾಂಡಲ್ ಮೂಲಕ ಹಂಚಿಕೊಳ್ಳಲಾಗಿದೆ, ಇದುವರೆಗೆ 2 ಮಿಲಿಯನ್‌ಗಿಂತಲೂ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಇನ್ನೊಂದೆಡೆ, ವೀಡಿಯೊವನ್ನು ನೋಡಿದ ನಂತರ ಅನೇಕ ಜನರು ಕಾಮೆಂಟ್ ಮಾಡಲು ಹಿಂದೆ ಬೀಳುತ್ತಿಲ್ಲ ಮತ್ತು ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. 

ಇದನ್ನೂ ಓದಿ-ಮೂರು ಸಾವಿರ ವರ್ಷಗಳ ಹಿಂದೆಯೂ QR Code ಬಳಕೆಯಲ್ಲಿತ್ತು ಎಂದರೆ ನಂಬ್ತೀರಾ? ವೈರಲ್ ಆಗುತ್ತಿರುವ ಈ ವಿಗ್ರಹ ಹೌದು ಎನ್ನುತ್ತೆ!

ವೈರಲ್ ಆಗುತ್ತಿರುವ ವೀಡಿಯೋಗೆ ಜನರ ಪ್ರತಿಕ್ರಿಯೆ ಹೀಗಿದೆ
ವೈರಲ್ ಆಗುತ್ತಿರುವ ಈ ವೀಡಿಯೋ ನೋಡಿ ಜನರು ಅಚ್ಚರಿಗೊಂಡಿದ್ದಾರೆ. ಈ ವಿಡಿಯೋಗೇ ಕಾಮೆಂಟ್ ಮಾಡಿದ ಓರ್ವ ಬಳಕೆದಾರ , 'ಡ್ರಮ್ಮರ್‌ನ ಅದೃಷ್ಟ ಖುಲಾಯಿಸಿದೆ' ಎಂದರೆ, ಮತ್ತೊಬ್ಬ ಬಳಕೆದಾರ 'ಡ್ರಮ್ಮರ್‌ನ ಉತ್ಸಾಹ ನೋಡುವಂತಿದೆ' ಎಂದು ಬರೆದಿದ್ದಾರೆ. ಇದೇ ವೇಳೆ ಮೂರನೇ ಬಳಕೆದಾರ, 'ಡೋಲು ಖರೀದಿಸಲು ಹಣ ಎಷ್ಟು ಬೇಕಾಗುತ್ತದೆ?' ಎಂದು ಪ್ರಶ್ನಿಸಿದ್ದಾನೆ. 

ಇದನ್ನೂ ಓದಿ-'ಈಗ್ ಗೊತ್ತಾಯ್ತು ಅಪ್ಪ ಸರ್ಕಾರಿ ಸ್ಕೂಲಲ್ಲಿ ಯಾಕೆ ಓದಿಸಿದ್ರು ಅಂತಾ...', ವೈರಲ್ ಆಗುತ್ತಿರುವ' ನರ್ಸರಿ-ಕೆಜಿ ಶುಲ್ಕ ವಿವರ ನೀವೂ ನೋಡಿ!

ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ

 
 
 
 

 
 
 
 
 
 
 
 
 
 
 

A post shared by Gyanibaba (@_gyanibaba__1)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News