Viral Video: ಭಾರಿ ಚಳಿಯಲ್ಲಿ ಸ್ಕೂಟಿ ಮೇಲೆ ಶಾಲು ಹೊತ್ತು ಹುಡುಗ-ಹುಡುಗಿ ರೋಮ್ಯಾನ್ಸ್, ವಿಡಿಯೋ ವೈರಲ್!

Viral Video: ಮಹಾರಾಷ್ಟ್ರದಲ್ಲಿ ಸ್ಕೂಟರ್‌ನಲ್ಲಿ ಹುಡುಗ ಮತ್ತು ಹುಡುಗಿ ಪರಸ್ಪರ ತಬ್ಬಿಕೊಂಡು ಸಂಚರಿಸುತ್ತಿರುವ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಆದರೆ ಇಬ್ಬರೂ ಫಿಲ್ಮಿ ಸ್ಟೈಲ್ ನಲ್ಲಿ ಕುಳಿತಿದ್ದಾರೆ. ಹುಡುಗ ಸ್ಕೂಟರ್ ಓಡಿಸುತ್ತಿದ್ದಾನೆ, ಹುಡುಗಿ ಹುಡುಗನತ್ತ ಮುಖ ಮಾಡಿ ಹುಡುಗನನ್ನು ತಬ್ಬಿಕೊಂಡು ಕುಳಿತಿದ್ದಾಳೆ. (Viral News In Kannada)  

Written by - Nitin Tabib | Last Updated : Jan 16, 2024, 08:04 PM IST
  • ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋಗೆ ತರಹೇವಾರಿ ಕಮೆಂಟ್ ಗಳು ಬರುತ್ತಿವೆ. ಕಾಮೆಂಟ್ ಮಾಡಿದ ಬಳಕೆದಾರರು,
  • 'ಇವರು ಪ್ರಸಿದ್ಧರಾಗಲು ಈ ರೀತಿ ಮಾಡುತ್ತಿದ್ದಾರೆ, ಇದು ದೊಡ್ಡ ವೇದಿಕೆ ಎಂಬುದು ಅವರಿಗೆ ತಿಳಿದಿದೆ ಮತ್ತು ಅವರು ಈ ವೀಡಿಯೊವನ್ನು ಇಲ್ಲಿ ಪೋಸ್ಟ್ ಮಾಡಿದರೆ,
  • ಪೊಲೀಸರು ಖಂಡಿತವಾಗಿಯೂ ಅದನ್ನು ನೋಡುತ್ತಾರೆ ಮತ್ತು ಕ್ರಮ ತೆಗೆದುಕೊಳ್ಳುತ್ತಾರೆ. ಜನರು ಕೇವಲ ಹೆಡ್ ಲೈನ್ ನಲ್ಲಿ ಇರಲು ಬಯಸುಟ್ಟಿದ್ದಾರೆ' ಎಂದಿದ್ದಾರೆ.
Viral Video: ಭಾರಿ ಚಳಿಯಲ್ಲಿ ಸ್ಕೂಟಿ ಮೇಲೆ ಶಾಲು ಹೊತ್ತು ಹುಡುಗ-ಹುಡುಗಿ ರೋಮ್ಯಾನ್ಸ್, ವಿಡಿಯೋ ವೈರಲ್! title=

ಮಹಾರಾಷ್ಟ್ರ: ಸಾಮಾಜಿಕ ಮಾಧ್ಯಮಗಳಲ್ಲಿ ವಿವಿಧ ರೀತಿಯ ವೈರಲ್ ವೀಡಿಯೊಗಳು ದಿನನಿತ್ಯ ವೈರಲ್ ಆಗುತ್ತಲೇ ಇರುತ್ತವೆ. ಆದರೆ, ಇತ್ತೀಚಿನ ದಿನಗಳಲ್ಲಿ ಜನರು ತಾವು ಏನು ಮಾಡುತ್ತಿದ್ದಾರೆಂಬುದನ್ನೇ ಮರೆತುಬಿಡುತ್ತಾರೆ. ಕ್ಯಾಮರಾದಲ್ಲಿ ಯಾರಾದರೂ ಅದನ್ನು ರೆಕಾರ್ಡ್ ಮಾಡಬಹುದು. ಮತ್ತು ಲಕ್ಷಾಂತರ ಜನರು ಅದನ್ನು ನೋಡಬಹುದಾದ ಸಾಮಾಜಿಕ ಮಾಧ್ಯಮ ಪೋಸ್ಟ್ ಮಾಡಬಹುದು. ಅಂತಹುದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರದಲ್ಲಿ ಸ್ಕೂಟರ್‌ ವೊಂದರ ಮೇಲೆ ಹುಡುಗ ಮತ್ತು ಹುಡುಗಿ ಕುಳಿತಿರುವುದು ಕಂಡುಬಂದಿದೆ. ಆದರೆ ಇಬ್ಬರೂ ಸ್ವಲ್ಪ ಫಿಲ್ಮಿ ಸ್ಟೈಲ್ ನಲ್ಲಿ ಕುಳಿತಿದ್ದಾರೆ. ಹುಡುಗ ಸ್ಕೂಟರ್ ಓಡಿಸುತ್ತಿದ್ದಾನೆ ಮತ್ತು ಹುಡುಗಿ ಹುಡುಗನ ತೊಡೆಯ ಮೇಲೆ ಕುಳಿತು ಆತನನ್ನು ತಬ್ಬಿಕೊಂಡಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಖತ್ ವೈರಲ್ ಆಗುತ್ತಿದೆ. (Viral News In Kannada)

ಇವರ ವರ್ತನೆ ಜನರಿಗೆ ಇಷ್ಟವಾಗಿಲ್ಲ
ಸಾಮಾನ್ಯವಾಗಿ ನಾವು ಚಲನಚಿತ್ರವನ್ನು ನೋಡುತ್ತೇವೆ ಮತ್ತು ಚಿತ್ರದ ಕೆಲವು ದೃಶ್ಯಗಳನ್ನು ನಾವು ಇಷ್ಟಪಡುತ್ತೇವೆ. ನಾವು ಒಂದು ಪಾತ್ರವನ್ನು ಇಷ್ಟಪಟ್ಟರೆ. ನಾವು ಅದನ್ನು ಪುನರಾವರ್ತಿಸಲು ಪ್ರಯತ್ನಿಸುತ್ತೇವೆ. ನಾವು ಆ ಪಾತ್ರವನ್ನು ಬದುಕಲು ಪ್ರಯತ್ನಿಸಲು ಪ್ರಾರಂಭಿಸುತ್ತೇವೆ. ಮಹಾರಾಷ್ಟ್ರದ ಒಬ್ಬ ಹುಡುಗ ಮತ್ತು ಹುಡುಗಿ ಕೂಡ ಇದೇ ರೀತಿ ಮಾಡುತ್ತಿರುವುದು ಕಂಡುಬಂದಿದೆ. 2019 ರಲ್ಲಿ, ಸಂದೀಪ್ ಬಂಗಾ ರೆಡ್ಡಿ ನಿರ್ದೇಶನದ ಶಾಹಿದ್ ಕಪೂರ್ ಅಭಿನಯದ ಚಿತ್ರ ಬಿಡುಗಡೆಯಾಗಿತ್ತು. ಅದರ ಹೆಸರು ಕಬೀರ್ ಸಿಂಗ್. ಅದರಲ್ಲಿ ಶಾಹಿದ್ ಕಪೂರ್ ಬೈಕ್ ಓಡಿಸುತ್ತಿದ್ದ ದೃಶ್ಯವಿದ್ದು, ಕಿಯಾರಾ ಅಡ್ವಾಣಿ ಬೈಕ್ ಮುಂದೆ ಕುಳಿತು ಮುತ್ತಿಕ್ಕುತ್ತಿರುವ ದೃಶ್ಯ ಅದರಲ್ಲಿ ಚಿತ್ರಿಸಲಾಗಿದೆ.

ಇದನ್ನೂ ಓದಿ-Viral Video: ವಿಮಾನಕ್ಕೆ 12 ಗಂಟೆ ವಿಳಂಬವಾಗಿದ್ದೆ ತಡ, ವಿಮಾನದ ಪಕ್ಕದಲ್ಲಿಯೇ ನೆಲದ ಮೇಲೆ ಊಟಕ್ಕೆ ಕುಳಿತ ಯಾತ್ರಿಗಳು!

ಮಹಾರಾಷ್ಟ್ರದಲ್ಲೂ ಇಂತಹದ್ದೇ ವಿಡಿಯೋ ಕಂಡುಬಂದಿದೆ. ಈ ವೀಡಿಯೋದಲ್ಲಿನ ವ್ಯತ್ಯಾಸವೆಂದರೆ ಬೈಕ್ ಬದಲಿಗೆ ಸ್ಕೂಟರ್ ಇದ್ದು ಹುಡುಗಿ ಮುತ್ತು ಕೊಡದೆ ತಬ್ಬಿಕೊಳ್ಳುತ್ತಿದ್ದಾಳೆ. ಆದರೆ ಚಲಿಸುವ ಬೈಕ್‌ನಲ್ಲಿ ಮುತ್ತು ನೀಡುವುದು ಅಪಾಯಕಾರಿ ಮತ್ತು ಚಲಿಸುವ ಸ್ಕೂಟರ್‌ನಲ್ಲಿ ಅಪ್ಪಿಕೊಳ್ಳುವುದು ಕೂಡ ಅಪಾಯಕಾರಿ. ಹಾಗಾಗಿಯೇ ಈ ವಿಡಿಯೋ ವೈರಲ್ ಆದ ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ @bandrabuzz ಹೆಸರಿನ ಪುಟದೊಂದಿಗೆ ಹಂಚಿಕೊಳ್ಳಲಾಗಿದೆ. ಇದುವರೆಗೆ ಸುಮಾರು 3000 ಬಾರಿ ವೀಕ್ಷಿಸಲಾಗಿದೆ.

ಇದನ್ನೂ ಓದಿ-Viral Video: ಟೂರಿಸ್ಟ್ ಹಡಗಿಗೆ ದೈತ್ಯಾಕಾರದ ಕ್ರೂಸ್ ಹಡಗು ಡಿಕ್ಕಿ, ನಂತರ ನಡೆದಿದ್ದು ಈ ವೈರಲ್ ವಿಡಿಯೋದಲ್ಲಿ ಸೆರೆಯಾಗಿದೆ!

ಕಟ್ಟುನಿಟ್ಟಿನ ಕ್ರಮ ಜರುಗಿಸಿ ಎಂದ ಜನ 
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋಗೆ ತರಹೇವಾರಿ ಕಮೆಂಟ್ ಗಳು ಬರುತ್ತಿವೆ. ಕಾಮೆಂಟ್ ಮಾಡಿದ ಬಳಕೆದಾರರು, 'ಇವರು ಪ್ರಸಿದ್ಧರಾಗಲು ಈ ರೀತಿ ಮಾಡುತ್ತಿದ್ದಾರೆ, ಇದು ದೊಡ್ಡ ವೇದಿಕೆ ಎಂಬುದು ಅವರಿಗೆ ತಿಳಿದಿದೆ ಮತ್ತು ಅವರು ಈ ವೀಡಿಯೊವನ್ನು ಇಲ್ಲಿ ಪೋಸ್ಟ್ ಮಾಡಿದರೆ, ಪೊಲೀಸರು ಖಂಡಿತವಾಗಿಯೂ ಅದನ್ನು ನೋಡುತ್ತಾರೆ ಮತ್ತು ಕ್ರಮ ತೆಗೆದುಕೊಳ್ಳುತ್ತಾರೆ. ಜನರು ಕೇವಲ ಹೆಡ್ ಲೈನ್ ನಲ್ಲಿ ಇರಲು ಬಯಸುಟ್ಟಿದ್ದಾರೆ' ಎಂದಿದ್ದಾರೆ. 'ಇವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಮೂರನೇ ಬಳಕೆದಾರ, 'ಪ್ರಯಾಣದ ಶೈಲಿಯು ತುಂಬಾ ವಿಶಿಷ್ಟವಾಗಿದೆ' ಎಂದು ಕಾಮೆಂಟ್ ಮಾಡಿದ್ದಾರೆ.

ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News